Job Promotion and Financial Growth ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಕೃಷ್ಣ ಪಕ್ಷದ ಪಾಡ್ಯಮಿ ತಿಥಿ ರಾತ್ರಿ 3:04ರ ವರೆಗೆ ಇರಲಿದ್ದು, ತದನಂತರ ಬಿದಿಗೆ ತಿಥಿ ಆರಂಭವಾಗಲಿದೆ. ಆಶ್ಲೇಷ ನಕ್ಷತ್ರ, ರಾತ್ರಿ 12:10ರ ವರೆಗೆ ಇರಲಿದೆ, ಅಮೃತ ಘಗಳಿ ರಾತ್ರಿ 10:35 ರಿಂದ 12:10ರ ವರೆಗೆ ಇರಲಿದ್ದು, ರಾಹುಕಾಲ ಬೆಳಿಗ್ಗೆ 7:30 ರಿಂದ 9:00ರ ವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10:30 ರಿಂದ 12:00ರ ವರೆಗೆ ಇರಲಿದೆ.

ಸೋಮವಾರದ ರಾಶಿಫಲ
ಮೇಷ | ಅನಿರೀಕ್ಷಿತ ಪ್ರಯಾಣ, ಸಾಲ ಆಗಬಹುದು. ಸಂಬಂಧಿಕರೊಂದಿಗೆ ಮನಸ್ತಾಪ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಬದಲಾವಣೆ ಕಂಡುಬರುತ್ತವೆ. ದೇವಲಾಯಗಳಿಗೆ ಭೇಟಿ, ಕೆಲಸ ಕಾರ್ಯಗಳಲ್ಲಿ ಮಂದಗತಿ.
ವೃಷಭ | ಪರಿಸ್ಥಿತಿ ಅತ್ಯಂತ ಅನುಕೂಲಕರವಾಗಿದೆ. ಬಾಲ್ಯದ ಸ್ನೇಹಿತರ ಭೇಟಿ, ಹೊಸ ಪರಿಚಯ. ಕೆಲಸ ದೊರೆಯುವ ಸಾಧ್ಯತೆಯಿದ್ದು, ಉದ್ಯೋಗ ಮತ್ತು ವ್ಯಾಪಾರ ಅಡೆತಡೆಯಿಲ್ಲದೆ ಸಾಗಲಿವೆ.
ಮಿಥುನ | ಪೂರ್ವನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿಕೊಳ್ಳಬೇಕಾಗುತ್ತದೆ. ದೂರ ಪ್ರಯಾಣ ಮತ್ತು ಹೆಚ್ಚಿನ ಖರ್ಚು, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡದ ವಾತಾವರಣ.
ಕರ್ಕಾಟಕ | ದೂರದ ಊರುಗಳಿಂದ ಶುಭ ಸುದ್ದಿ, ಆರ್ಥಿಕವಾಗಿ ಪ್ರಗತಿ. ಪ್ರಮುಖ ನಿರ್ಧಾರಕ್ಕೆ ಇದು ಸೂಕ್ತ ಸಮಯ, ಅಂದುಕೊಂಡ ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ಸಾಹದ ವಾತಾವರಣ.
ಬೈಂದೂರು ನಲ್ಲಿ ನಕ್ಸಲ್ ಕಾಣಿಸಿಕೊಂಡಿದ್ದು ನಿಜವೇ? ಏನು ಹೇಳುತ್ತದೆ JP ರಿಪೋರ್ಟ್?
ಸಿಂಹ | ಪ್ರಯಾಣ ಮುಂದೂಡುವುದು ಒಳಿತು. ಶ್ರಮ ಹೆಚ್ಚಾಗಲಿದ್ದು, ಕೆಲಸದಲ್ಲಿ ಆತುರ ಸರಿಯಲ್ಲ. ಸ್ಪರ್ಧಿಗಳಿಂದ ಒತ್ತಡ. ವ್ಯಾಪಾರವು ಸಾಧಾರಣವಾಗಿ ನಡೆಯಲಿದ್ದು, ಉದ್ಯೋಗದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಗಳಿವೆ.
ಕನ್ಯಾ | ಉದ್ಯೋಗ ಪ್ರಯತ್ನ ಫಲ ನೀಡಲಿವೆ. ಉದ್ಯೋಗದಲ್ಲಿ ಬಡ್ತಿ. ವ್ಯಾಪಾರದಲ್ಲಿ ವೃದ್ಧಿ, ವಸ್ತು ಮತ್ತು ವಸ್ತ್ರ ಲಾಭ.
ಅನಾರೋಗ್ಯ ಕಾಡಬಹುದು.
ತುಲಾ | ಪ್ರತಿಭೆಗೆ ತಕ್ಕ ಮನ್ನಣೆ, ಹೊರ ಪ್ರಪಂಚಕ್ಕೆ ಶಕ್ತಿ ತಿಳಿಯಲಿದೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ, ಹಳೆಯ ಸಾಲ ವಸೂಲಾಗಲಿವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನೂತನ ಉತ್ಸಾಹ.
ವೃಶ್ಚಿಕ | ಮನೆಯಲ್ಲಿ ಮತ್ತು ಹೊರಗೆ ಒತ್ತಡದ ಪರಿಸ್ಥಿತಿ, ಅಧಿಕ ಶ್ರಮದ ದಿನ, ಅನಾರೋಗ್ಯ, ಕೆಲಸ ಮುಂದೂಡಲ್ಪಡುತ್ತವೆ ಮತ್ತು ಸ್ನೇಹಿತರೊಂದಿಗೆ ಕಲಹ. ವ್ಯಾಪಾರದಲ್ಲಿ ನಿರಾಸೆ ಹಾಗೂ ಉದ್ಯೋಗದಲ್ಲಿ ಜವಾಬ್ದಾರಿ.

ಧನು | ಕುಟುಂಬದಲ್ಲಿ ಕಿರಿಕಿರಿ. ಪ್ರಯಾಣ ಮುಂದೂಡುವುದು ಉತ್ತಮ. ಶ್ರಮ ಹೆಚ್ಚಾಗಲಿದ್ದು, ವಿವಾದ ಏರ್ಪಡಬಹುದು. ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿ ನಡೆಯಲಿದ್ದು, ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರಲಿದೆ.
ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE
ಮಕರ | ಪ್ರಮುಖ ಕಾರ್ಯದಲ್ಲಿ ವಿಜಯಶಾಲಿಯಾಗಲಿದ್ದಾರೆ. ಆಪ್ತರಿಂದ ಸಹಾಯ. ಜೀವನ ಸಂಗಾತಿಯ ಕಡೆಯಿಂದ ಸಂತೋಷದ ಸುದ್ದಿ, ಸಂದರ್ಶನಗಳಿಗೆ ಕರೆ ಬರುತ್ತವೆ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿವೆ.
ಕುಂಭ | ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯಲಿದೆ. ವಿವಾಹಾದಿ ಶುಭ ಕಾರ್ಯ ನಡೆಯಲಿದೆ. ಮನರಂಜನೆಯಲ್ಲಿ ಪಾಲ್ಗೊಳ್ಳುವರು ಆದಾಯದಲ್ಲಿ ಏರಿಕೆ, ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ.
ಮೀನ | ಖರ್ಚು ಮತ್ತು ಶ್ರಮ ಹೆಚ್ಚಾಗಲಿದೆ. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಪಾಲುದಾರಿಕೆ ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಅನಗತ್ಯ ಖರ್ಚು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
