Shivamogga Underworld ಟ್ರೈಯಲ್ ಮಾನಿಟರಿಂಗ್ ನ ಮೂಲ ಕಲ್ಪನೆಗೆ ಜೀವ ತುಂಬಿದ್ದ ಎಸ್ಪಿ ಅಭಿನವ್ ಖರೆ. ಈಗ ಈ ಸೆಲ್ ನ ಸಬ್ ಇನ್ಸ್ ಪೆಕ್ಟರ್ ಶಕುಂತಲಗೆ ರಾಷ್ಟ್ರಪತಿ ಪದಕ.
ಟ್ರೈಯಲ್ ಮಾನಟರಿಂಗ್ ಸೆಲ್ ನ ಕಲ್ಪನೆಗೆ 2017 ರಲ್ಲಿ ಜೀವ ತುಂಬಿದ್ದು ಎಸ್ಪಿ ಅಭಿನವ್ ಖರೆ ಹಾಗು ಅಂದಿನ ಸರ್ಕಾರಿ ಅಭಿಯೋಜಕ ವಿ.ಜಿ ಯಳಗೆರಿ. ನಂತರ ಬಂದ ಎಸ್ಪಿ ಲಕ್ಷ್ಮಿ ಪ್ರಸಾದ್ ಈ ಪರಿಕಲ್ಪನೆಯನ್ನು ಸೆಲ್ ಆಗಿ ಪರಿವರ್ತಿಸಿದರು. ಈ ಸೆಲ್ ಖಡಕ್ ಆಗಿ ಕರ್ತವ್ಯ ನಿರ್ವಹಿಸಿದ ಭಾಗವಾಗಿಯೇ ಸಬ್ ಇನ್ ಸ್ಪೆಕ್ಟರ್ ಶಕುಂತಲಗೆ ರಾಷ್ಟ್ರಪತಿ ಪದಕ ಲಭಿಸಿದೆ. ಶಿವಮೊಗ್ಗದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಶಕುಂತಲ, 2022 ರಲ್ಲಿ ಲಕ್ಷ್ಮಿ ಪ್ರಸಾದ್ ಎಸ್ಪಿಯಾಗಿ ಬಂದ ನಂತರ ಟ್ರಯಲ್ ಮಾನಿಟರಿಂಗ್ ಸೆಲ್ ನಲ್ಲಿ ಕರ್ತವ್ಯ ನಿರ್ವಹಿಸಿದರು. ಸೆಲ್ ನಲ್ಲಿ ಪರಿಣಾಮಕಾರಿಯಾಗಿ ಹೆಟ್ ಕೆ ಶಕುಂತಲರವರು ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದಾರೆ. ಈ ಸೆಲ್ ಪ್ರಾರಂಭವಾದ ನಂತರ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ. 2025 ರಲ್ಲಿ 52 ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ. ಹಾಗಾದ್ರೆ ಅಂದಿನ ಎಸ್ಪಿ ಅಭಿನವ್ ಖರೆ ಈ ಪರಿಕಲ್ಪನೆಗೆ ಹೇಗೆ ನಾಂದಿ ಹಾಡಿದ್ರು ಅಂತಿರಾ…ಮುಂದೆ ಓದಿ.

Shivamogga Underworld ನ್ಯಾಯ ಎಲ್ಲಿದೆ..,ಎಲ್ಲಿದೆಯೋ ನ್ಯಾಯ., ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ. ನ್ಯಾಯ ಮಂದಿರದಲ್ಲಿ ನ್ಯಾಯವೂ ಸಿಗಲೇ ಇಲ್ಲ… ಓದುಗರೆ ಈ ಹಾಡು ಕೇಳ್ತಿದ್ರೆ.. ಬಹುಷ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಡವರಿಗೆ ನ್ಯಾಯ ಸಿಗೋದಕ್ಕೆ ಸಾಧ್ಯನೇ ಇಲ್ಲ ಅನ್ನೋದನ್ನ ಷರಾ ಬರೆದು ಹೇಳಿಬಿಡಬಹುದು. ಸಿನಿಮಾ ಕಥೆಗೆ ಸಾಂದರ್ಭಿಕವಾಗಿ ಈ ಹಾಡು ರಚಿಸಿದ್ದರೂ… ಸಮಾಜದಲ್ಲಿ ನೊಂದವರಿಗೆ ಅನ್ಯಾಯಕ್ಕೊಳಗಾದವರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗೋದಕ್ಕೆ ಸಾಧ್ಯನೇ ಇಲ್ಲ ಅನ್ನೋ ವಾತಾವರಣ ಸೃಷ್ಟಿಯಾಗಿದ್ದಂತೂ ಸುಳ್ಳಲ್ಲ. ಇದಕ್ಕೆ ಕಾರಣ ಮೊದಲು ಪೊಲೀಸ್ ಇಲಾಖೆಯನ್ನೇ ಬೊಟ್ಟು ಮಾಡಿ ತೋರಿಸಬೇಕಾಗುತ್ತೆ. ಪೊಲೀಸ್ರು ಒಂದು ಅಪರಾಧ ಕೃತ್ಯದ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಮಾಡಿ, ಸರಿಯಾದ ಸಾಕ್ಷ್ಯಾಧಾರಗಳ ಮೂಲಕ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ರೆ.. ಅದಕ್ಕೆ ಪೂರಕವಾಗಿ ಸರ್ಕಾರಿ ಅಭಿಯೋಜಕರು ಪಿಪಿ ಅಥವಾ ಎಪಿಪಿ ವಾದ ಮಂಡನೆ ಮಾಡುತ್ತಾರೆ.
ಪೊಲೀಸ್ರು ತನಿಖೆಯಲ್ಲಿಯೇ ಆರೋಪಿ ನುಸುಳಿಕೊಳ್ಳೋ ರೀತಿ ಚಾರ್ಜ್ ಶೀಟ್ ಸಲ್ಲಿಸಿದ್ರೆ.. ಪಿಪಿ ಏನೂ ಮಾಡೋದಕ್ಕೆ ಸಾಧ್ಯವಿಲ್ಲ. ಇನ್ನು ಪಿಪಿ ಎದುರಾಳಿ ಲಾಯರ್ ಆಮೀಷಕ್ಕೆ ಒಳಗಾದ್ರೂ.., ಅಂತಿಮ ತೀರ್ಪು ನೀಡೋ ನ್ಯಾಯಧೀಶರು ಏನು ಮಾಡೋದಕ್ಕೆ ಸಾಧ್ಯವಿಲ್ಲ. ಪೊಲೀಸ್ರು ಮತ್ತು ಪಿಪಿ ವಾದ ಎಲ್ಲವೂ ಸರಿಯಾಗಿದ್ರೂ.. ನ್ಯಾಯಧೀಶರ ವಿವೇಚನೆಗೆ ಸಾಕ್ಷ್ಯಾಧಾರಗಳು ಸರಿಯಾಗಿ ಕಾಣಲಿಲ್ಲವೆಂದರೂ…, ಕೇಸು ಉಲ್ಟಾ ಹೊಡೆಯೋ ಸಾಧ್ಯತೆ ಇರುತ್ತೆ… ಹೀಗಾಗಿ ನ್ಯಾಯಾಂಗ ವ್ಯವಸ್ಥೆ ತನ್ನ ಪರಿಧಿಯಲ್ಲಿ ಹಲವು ಮಾನದಂಡಗಳನ್ನು ಮುಂದಿಟ್ಟುಕೊಂಡೇ ನ್ಯಾಯದಾನ ಮಾಡುತ್ತೆ. ಈ ಅಂತಿಮ ತೀರ್ಪು ಒಬ್ಬರಿಗೆ ನೋವು ಉಂಟು ಮಾಡಿದ್ರೆ.. ಮತ್ತೊಬ್ಬನಿಗೆ ಗೆಲವು ಉಂಟು ಮಾಡುತ್ತೆ. ಹೀಗಾಗಿಯೇ ಕೋರ್ಟ್ ನಲ್ಲಿ ಗೆದ್ದವನು ಸೋತ… ಸೋತವನು ಸತ್ತಾ ಅನ್ನೋ ಮಾತು ಇಂದಿಗೂ ಚಾಲ್ತಿಯಲ್ಲಿರೋದು.
ಕೋರ್ಟ್ ಗೆ ಬೇಕಾಗಿರೋದು ಸಾಕ್ಷ್ಯಾಧಾರ, ನಿಖರ ಹೇಳಿಕೆ.. ಆದರೆ ಈ ಸಾಕ್ಷಿಯನ್ನೇ ಇಂದು ವ್ಯವಸ್ಥಿತವಾಗಿ ಸಾಯಿಸಲಾಗುತ್ತಿದೆ. ಯಾವ ಸಾಕ್ಷಿಗಳು ಪ್ರಕರಣದಲ್ಲಿ ಹಿಟ್ ಲೀಸ್ಟ್ ನಲ್ಲಿರ್ತಾರೋ… ಅವರನ್ನೇ ಜೈಲಿನಲ್ಲಿ ಕೂತು ಕೊಲೆಗಾರ ಬೆದರಿಸಿದ್ರೆ ಮುಗಿದೇ ಹೋಯ್ತಲ್ಲ…. ವಿಚಾರಣೆ ಹಂತದಲ್ಲಿರೋ ಆರೋಪಿಗೆ ಬೇಲ್ ಸಿಗ್ಲಿಲ್ಲ ಅಂದ್ರೆ ಅಲ್ಲಿವರೆಗೂ ಆತ ಜೈಲಲ್ಲೇ ಇರ್ತಾನೆ… ಇನ್ನು ರೌಡಿಗಳಾದ್ರೆ.. ಅವರು ಕೊಲೆ ಮಾಡಿದ ನಂತ್ರ ಸೇಫ್ ಝೋನ್ ಅಂದ್ರೆ.. ಜೈಲೇ. ಜೈಲಲ್ಲೇ ಕೂತು ಕೇಸು ಫೇಸ್ ಮಾಡೋದು ಹೇಗೆ ಅನ್ನೋದು ಇಂದಿನ ರೌಡಿಗಳಿಗೆ ಹೇಳಿಕೊಡಬೇಕಾಗಿಲ್ಲ ಬಿಡಿ. ಜೈಲಿನಿಂದಲೇ ಶ್ರೀಮಂತರಿಗೆ ಹಣಕ್ಕೆ ಡೀಲ್ ಇಡ್ತಾರೆ.. ಅದೇ ಹಣದಲ್ಲಿ ಕೋರ್ಟು, ಲಾಯರ್ ಅಂತಾ ಕೇಸು ನಡೆಸ್ತಾರೆ… ಪ್ರಕರಣದಲ್ಲಿ ಗೆಲುವಿಗೆ ಕಾರಣವಾಗೋ ಪ್ರಮುಖ ಸಾಕ್ಷ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಬೆದರಿಸ್ತಾರೆ.. ಜೈಲಿಂದ ಬೆದರಿಕೆ ಕರೆ ಬಂದ್ರೂ.. ಪೊಲೀಸ್ರು ಜೈಲಿಗೋಗೋ ಅಷ್ಟರಲ್ಲಿ ಮೊಬೈಲ್ ಹತ್ತು ಭಾಗ ಆಗಿ.. ನಿಗೂಡ ಸ್ಥಳ ಸೇರಿರುತ್ತೆ…. ಇದು ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಗಳು ಕೊಲೆ ಕೇಸಲ್ಲಿ ಕೋರ್ಟ್ ನ್ನು ಹೇಗೆ ಫೇಸ್ ಮಾಡಬೇಕೆಂದು ಕಂಡು ಕೊಂಡಿರೋ ಮಾರ್ಗ. ಮರ್ಡರ್, ಮರ್ಡರ್ ಅಟೆಂಪ್ಟ್, ಹಪ್ತಾ ವಸೂಲಿ ಮಾಡೋ ರೌಡಿಗಳು ಪ್ರತಿಬಾರಿ ಜೈಲಿಗೋದ್ರೂ… ಅನಾಯಾಸವಾಗಿ ಬೇಲ್ ಮೇಲೆ ಹೊರಬರ್ತಿದ್ದಾರೆ ಮತ್ತೆ ಸಮಾಜದಲ್ಲಿ ಅದೇ ರೌಡಿಸಂ ಕೃತ್ಯ ಮುಂದುವರೆಸ್ತಿದಾರೆ.
Shivamogga Underworld ಶಿವಮೊಗ್ಗ ಕ್ರಿಮಿನಲ್ ಗಳಿಗೆ ಜೈಲು ವ್ಯವಸ್ಥೆ ಆಕ್ಸ್‌ಫರ್ಡ್ ಯುನಿವರ್ಸಿಟಿ.
ಶಿವಮೊಗ್ಗ ನಟೋರಿಯಸ್ ರೌಡಿಗಳ ಪಾಲಿಗೆ ರಾಜ್ಯದ ಜೈಲುಗಳೆಂಬುದು ಸ್ಲೀಪಿಂಗ್ ಸೆಲ್ ಆಗಿ ಮಾರ್ಪಟ್ಟಿದೆ. ಕ್ರಿಮನಲ್ ಗಳಿಗೆ ಇದು ಆಕ್ಸ್‌ಫರ್ಡ್ ಯುನಿವರ್ಸಿಟಿ ಇದ್ದಹಾಗೆ. ಯಾಕೆಂದ್ರೆ ಇಲ್ಲಿನ ಪಂಟರ್ ರೌಡಿಗಳಿಗೆ ಜೈಲು ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಪೊಲೀಸ್ ವ್ಯವಸ್ಥೆಯನ್ನು ಹೇಗೆ ಮ್ಯಾನೇಜ್ ಮಾಡಬೇಕು ಅನ್ನೋದು ಗೊತ್ತಿರೋ ಹಾಗೆ ಬೇರೆಯವರಿಗೆ ನಾಲೆಡ್ಜ್ ಇರೋದಿಲ್ಲ. ಇಲ್ಲಿನ ರೌಡಿಗಳಿಗೆ ಮೀಡಿಯಾ ಮ್ಯಾನೇಜ್ ಮೆಂಟ್ ಸಹ ಕರಗತವಾಗಿರೋ ವಿದ್ಯೆ. ಕೊಲೆ ಮಾಡಿ ಅರೆಸ್ಟ್ ಆಗೋ ಆರೋಪಿಗಳು, ನಾವೆಲ್ಲಿ ಎನ್ ಕೌಂಟರ್ ಆಗಿ ಹೊಗೆ ಹಾಕಿಸಿಕೊಳ್ಳುತ್ತೇವೆಯೋ ಎನ್ನುವ ಭಯಕ್ಕೆ ಅಥವಾ ಯಾವುದಕ್ಕೂ ಸೇಫ್ಟಿ ಇರ್ಲಿ ಅಂತಾ.. ಅರೆಸ್ಟೋ ಅಥವಾ ಸರೆಂಡರ್ ಆಗೋ ಸಂದರ್ಭದಲ್ಲಿ ಮಾಧ್ಯಮಗಳಿಗೆ ವಿಷಯ ತಿಳಿಸೋ ಕಲೆ ಕೂಡ ಗೊತ್ತಿದೆ.
Shivamogga Underworld ಜೈಲಿಗೆ ಯಾವಾಗ ನ್ಯಾಯಾಧೀಶರನ್ನು ಕರೆಸಬೇಕು, ಮಾನವ ಹಕ್ಕುಗಳ ಆಯೋಗದವರನ್ನು ಯಾವಾಗ ಕರೆಸಬೇಕು ಎಂಬ ವಿದ್ಯೆ ಗೊತ್ತಿದೆ. ಬೇಲ್ ಸಿಕ್ಕಿ ಎರಡು ಮೂರು ತಿಂಗಳಾದರೂ ಜೈಲಲ್ಲಿ ಕಾಲ ದೂಕ್ತಾ ಇರೋ ರೌಡಿಗಳು ಇದಾರೆ ಅಂದ್ಮೇಲೆ ಅವರಿಗೆ ಕಾನೂನಿನ ಅರಿವು ಎಷ್ಟಿದೆ ಅಂತಾ ನೀವೇ ಯೋಚನೆ ಮಾಡಿ. ಕೋರ್ಟ್ ಗೆ ಷೂರಿಟಿ ಕೊಟ್ರೆ ತಾನೇ ಬೇಲ್.., ಷೂರಿಟಿ ನೂ ಬೇಡ.., ಬೇಲೂ ಬೇಡ.., ಜೈಲೇ ಸೇಫು ಅನ್ನೋ ರೌಡಿಗಳು ಇಲ್ಲಿದ್ದಾರೆ ಅಂದ್ರೆ ಶಿವಮೊಗ್ಗದ ಪಾತಕಲೋಕದ ಪರಿಸ್ಥಿತಿ ನೀವೇ ಊಹಿಸಿಕೊಳ್ಳಿ.
Shivamogga Underworld ರೌಡಿಗಳ ವಿರುದ್ಧ ಪೊಲೀಸ್ರು ಕೇಸು ಹಾಕೋದು, ಜೈಲಿಗೆ ಕಳಿಸೋದು.. ನಟೋರಿಯಸ್ ರೌಡಿಗಳಿಗೆ ಗಡಿಪಾರು ಮಾಡಿ, ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸೋದು ಒಂದು ರೀತಿಯಲ್ಲಿ ಕಾಮನ್ ಆಗಿ ಹೋಗಿದೆ.. ಜಿಲ್ಲಾಡಳಿತ ಈವರೆಗೂ ಹಲವಾರು ಮಂದಿಯನ್ನು ಗಡಿಪಾರು ಮಾಡಿದ್ರೂ ಹೊರ ಜಿಲ್ಲೆಗಳ ಜೈಲಿನಿಂದಲೇ ಕೂತು ರಿಯಲ್ ಎಸ್ಟೇಟ್ ಮಾಫೀಯದವರಿಗೆ ಡೀಲ್ ಇಡೋದು.. ಎದುರಾಳಿ ಎತ್ತೋದಕ್ಕೆ ಡೀಲ್ ಕೊಡೋದು ಮಾಮೂಲಿಯಾಗಿದೆ…. ಜೈಲಿನಲ್ಲಿರೋ ರೌಡಿಗಳು ಹೊಸ ಹೊಸ ಹುಡುಗ್ರನ್ನು ಫೀಲ್ಡ್ ಗೆ ಎಂಟ್ರಿ ಕೊಡಿಸ್ತಾನೇ ಇದಾರೆ. ಶಿವಮೊಗ್ಗ ನಗರದಲ್ಲಿಯೇ ಹೊಸ ರೌಡಿಗಳ ಪಟ್ಟಿ 1500 ಗಡಿ ದಾಟಿದೆ ಎಂದ್ರೆ ನೀವೇ ಊಹಿಸಿಕೊಳ್ಳಿ…

Shivamogga Underworld ಹೊಸ ಹುಡುಗ್ರಿಗೆ ಕೊಲೆಯಾಗಲಿ ಅಥವಾ ಅಟೆಂಪ್ಟ್ ಮಾಡೋದಕ್ಕೆ ಆಗಲಿ ಧೈರ್ಯ ಬರೋದಕ್ಕೆ ಗಾಂಜಾ ಕೊಡಲಾಗುತ್ತಿದೆ. ಗಾಂಜಾ ನಶೆಯಲ್ಲಿ ಹುಡುಗ್ರು ರಸ್ತೆ ಹಾದಿಬೀದಿಗಳಲ್ಲಿ ಹಾಡಹಗಲೇ ಮಚ್ಚುಬೀಸಿ ಎದುರಾಳಿಗಳನ್ನು ಎತ್ತಿರೋ ಪ್ರಕರಣಗಳನ್ನು ಸಾಕಷ್ಟು ತೋರ್ಸಿದಿವಿ ವೀಕ್ಷಕರೆ. 2011 ರಿಂದ ಇಲ್ಲಿಯವರೆಗೆ.. ಅಂದ್ರೆ ತುಳಸಿ ರಾಮ್, ಮೆಂಟಲ್ ಸೀನಾ.. ರಾಘುಶೆಟ್ಟಿ, ನವುಲೆ ಮೋಹನ, ಮೋಟಿ ವೆಂಕಟೇಶ್, ಮಾರ್ಕೇಟ್ ಗೋವಿಂದ್, ಮಾರ್ಕೇಟ್ ಗಿರಿ ಕೊಲೆ ಪ್ರಕರಣದಿಂದ ಹಿಡಿದು ಇತ್ತೀಚಿನ ರೌಡಿ ಮರ್ಡರ್ ಘಟನೆಗಳೆಲ್ಲಾ ಜನನಿಬಿಡ ಪ್ರದೇಶದಲ್ಲಿ ನಡೆದಿದೆ ಅಂದ್ರೇ ನೀವೇ ಅಂದಾಜು ಮಾಡಿ.. ಪಬ್ಲಿಕ್ ನಲ್ಲಿ ಮಚ್ಚುಬೀಸಿ ಹೆಣ ಉರುಳಿಸೋದು ಹುಡುಗ್ರಿಗೆ ಮಾರಿಹಬ್ಬದಲ್ಲಿ ಕುರಿ ಬಲಿಕೊಟ್ಟಂಗೆ ಆಗಿದೆ.. ಇದನ್ನು ಎಲ್ಲ ಸೂಕ್ಷ್ಮವಾಗಿ ಗಮನಿಸಿದ ಅಂದಿನ ಶಿವಮೊಗ್ಗ ಎಸ್ಪಿ ಅಭಿನವ್ ಖರೆ ಮತ್ತು ಪ್ರಾಸಿಕ್ಯೂಷನ್ ನ ಪಿಪಿ ವಿ.ಜಿ ಯಳಗೆರೆ ಒಂದು ಖಡಕ್ ನಿರ್ದಾರಕ್ಕೆ ಬಂದು ಬಿಟ್ರು… ಆರೋಪಿಗಳು ಕೊಲೆ ಮಾಡೋದು ನಿಜ… ಅರೆಸ್ಟ್ ಮಾಡಿ ಜೈಲಿಗೆ ಕಳಿಸೋದು ನಿಜ.. ಆದ್ರೆ ಆರೋಪಿಗಳಿಗೆ ಕಾನೂನಿನಲ್ಲಿರೋ ಕಠಿಣ ಶಿಕ್ಷೆ ಕೊಡಿಸೋದಕ್ಕೆ ಮಾತ್ರ ನಮ್ಮಿಂದ ಯಾಕೆ ಸಾಧ್ಯವಾಗ್ತಿಲ್ಲ ಅಂತಾ ಯೋಚಿಸುವಾಗ್ಲೆ.. ಎಸ್ಪಿ ಅಭಿನವ್ ಖರೆ ಮತ್ತು ಪಿಪಿ ಯಳಗೇರಿ ಒಂದು ಖಡಕ್ ನಿರ್ಧಾರಕ್ಕೆ ಬಂದು ಬಿಟ್ರು…. ಆ ನಿರ್ಧಾರದಿಂದ ಅವರು ಮುಂದಿಟ್ಟ ಹೆಜ್ಜೆ ಇಂದು ನ್ಯಾಯಾಲಯದಲ್ಲಿ ನೊಂದ ಕುಟುಂಬಗಳಿಗೆ ನ್ಯಾಯ ಸಿಗುವಂತೆ ಮಾಡಿದೆ. ಅಷ್ಟಕ್ಕೂ ಅವರು ತೆಗೆದುಕೊಂಡ ನಿರ್ಧಾರ ಹಾಗೂ ಕ್ರಮಗಳೇನು ಎಂಬು ಇನ್ನಿತರೇ ವಿಚಾರಗಳನ್ನು ಪಾರ್ಟ್ 02 ನಲ್ಲಿ ವೀಕ್ಷಿಸಿ


