ರಿಪ್ಪನ್‌ಪೇಟೆ ಬಳಿ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರಿಗೆ ಗಾಯ

ಹಂಚಿಕೊಳ್ಳಿ
WhatsApp Facebook X Telegram
Ripponpet Accident
Ripponpet Accident

ಶಿವಮೊಗ್ಗ : ರಿಪ್ಪನ್‌ಪೇಟೆ ಸಮೀಪದ ಸಾಗರ ರಸ್ತೆಯ ವಡಗೆರೆ ಎಂಬಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಶಿಕಾರಿಪುರ ಮೂಲದ ಅಮೃತಾ ಎಂದು ಗುರುತಿಸಲಾಗಿದೆ.

Ripponpet Accident
Ripponpet Accident

ರಂಗಾಯಣದಿಂದ ಶಿವಮೊಗ್ಗದಲ್ಲಿ ರಂಗ ಸಂಕ್ರಾಂತಿ | ಜನವರಿ 14 ರಿಂದ ಆರು ದಿನ ವಿಶೇಷ ನಾಟಕ! ಮಿಸ್ ಮಾಡಬೇಡಿ

ರಿಪ್ಪನ್‌ಪೇಟೆಯಲ್ಲಿ ನಡೆಯುತ್ತಿರುವ ಕೆಂಚನಾಲ ಜಾತ್ರೆಯ ಹಿನ್ನೆಲೆಯಲ್ಲಿ, ಅಮೃತಾ ಅವರು ತಮ್ಮ ಪತಿ ನಾಗರಾಜ್ ಹಾಗೂ ಇಬ್ಬರು ಮಕ್ಕಳೊಂದಿಗೆ ಶಿಕಾರಿಪುರದಿಂದ ತಂಗಿಯ ಮನೆಗೆ ಪಲ್ಸರ್ ಬೈಕ್‌ನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ವಡಗೆರೆ ಬಳಿ ಬೈಕ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟ್ರ್ಯಾಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಈ ಭೀಕರ ಡಿಕ್ಕಿಯ ಪರಿಣಾಮ ಅಮೃತಾ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ನಾಗರಾಜ್ ಹಾಗೂ ಒಂದು ಮಗುವಿಗೆ ಗಾಯಗಳಾಗಿದ್ದು, ಅವರನ್ನು ಕೂಡಲೇ ಚಿಕಿತ್ಸೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 

Ripponpet Accident Woman Dies Husband Injured

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor