ಆಕಸ್ಮಿಕ ಬೆಂಕಿ, ಕಾರು ಸಂಪೂರ್ಣ ಸುಟ್ಟು ಭಸ್ಮ

This Article Written by / Prathapa thirthahalli / ಡಿಸೆಂಬರ್ 23, 2025

Chikkamagaluru Maruti 800 Car Completely Gutted

ಮಾರುತಿ 800 ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಕಾರು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆ ಮುಂಭಾಗ ನಡೆದಿದೆ.

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, 6.43 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ವಾಪಸ್!

ಆಸ್ಪತ್ರೆಯ  ಮುಂಬಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.  ಆದರೆ ಸ್ಥಳೀಯರು ಯಾರೂ ಸಹ ಅದನ್ನು ನಂದಿಸಲು ಮುಂದಾಗಲಿಲ್ಲ. ನಂತರ ಕೆಲವರು ಅಡ್ಡೆಂಚರ್ ಕ್ಲಬ್‌ನ ರೂಬೆನ್ ಮೊಸಸ್ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದ ಆಕ್ಸಿಜನ್ ಸಿಲಿಂಡರ್ ಮೂಲಕ ಬೆಂಕಿ ನಂದಿಸಲು ಮುಂದಾದದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಘಟನೆ ವೇಳೆ ಕಾರಿನಲ್ಲಿ ಯಾರೂ ಇಲ್ಲದೇ ಇದ್ದುದ್ದರಿಂದ ಅದೃಷ್ಟವಶಾತ್​ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Chikkamagaluru Maruti 800 Car Completely Gutted
Chikkamagaluru Maruti 800 Car Completely Gutted

Chikkamagaluru Maruti 800 Car Completely Gutted

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

chikkamagaluru,fire accident,Karnataka news

ಮುಂದಿನ ಸುದ್ದಿ ಒದಿ