ವಾಹನ ಅಡ್ಡಗಟ್ಟಿ, ಹಲ್ಲೆ ನಡೆಸಿ ಹಸಿ ಅಡಿಕೆ ದರೋಡೆ ಮಾಡಿದ್ದ ಭದ್ರಾವತಿ ಗ್ಯಾಂಗ್ ಸೆರೆ

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ನೆರೆ ಜಿಲ್ಲೆಯಲ್ಲಿ ನಡೆದ ಅಡಿಕೆ ದರೋಡೆ ಕೇಸ್​, ಭದ್ರಾವತಿ ಮೂಲದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಅಡಿಕೆ ದರೋಡೆ ನಡೆದಿತ್ತು. (Arecanut Robbery Case Solved in Narasimharajapura) ಈ  ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ. 

ನರಸಿಂಹರಾಜಪುರದಲ್ಲಿ ಅಡಿಕೆ ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರು ಆರೋಪಿಗಳ ಬಂಧನ  Arecanut Robbery Case Solved in Narasimharajapura 4 Suspects Arrested by Police
ನರಸಿಂಹರಾಜಪುರದಲ್ಲಿ ಅಡಿಕೆ ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರು ಆರೋಪಿಗಳ ಬಂಧನ  Arecanut Robbery Case Solved in Narasimharajapura 4 Suspects Arrested by Police

ತುಮಕೂರಿನ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು, ಈತನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

ಭದ್ರಾವತಿ ತಾಲ್ಲೂಕಿನ ಅಗರದಹಳ್ಳಿ ಕ್ಯಾಂಪ್ ನಿವಾಸಿಗಳಾದ ವೀರೇಶ, ಮಹೇಶ, ಎಂ.ಕಾರ್ತಿಕ ಮತ್ತು ಆರ್. ಶ್ರೀಹರಿ ಬಂಧಿತ ಆರೋಪಿಗಳಾಗಿದ್ದಾರೆ. ಬಾಳೆಹೊನ್ನೂರು ಹಾಗೂ ನರಸಿಂಹರಾಜಪುರ ಮಾರ್ಗದ ಅಳೇಹಳ್ಳಿ ಗ್ರಾಮದ ಬಳಿ ಡಿಸೆಂಬರ್ 12 ರಂದು ಪಿಕಪ್ ವಾಹನವನ್ನು ಅಡ್ಡಗಟ್ಟಿದ್ದ ದರೋಡೆಕೋರರು, ವಾಹನದ ಮಾಲೀಕ ಕೆ. ರವಿ ಮತ್ತು ಚಾಲಕ ವಿಶ್ವಾಸ್ ಅವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. 

ಗಮನಕ್ಕೆ: ಶಿವಮೊಗ್ಗ ಜಿಲ್ಲಾ ಪಂಚಾಯತಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಹುದ್ದೆ! ಉದ್ಯೋಗ ಸುದ್ದಿ!

ಸುಮಾರು 44 ಕ್ವಿಂಟಲ್ ತೂಕದ 67 ಚೀಲ ಹಸಿ ಅಡಿಕೆ, 29000 ರೂಪಾಯಿ ನಗದು ಮತ್ತು 2 ಮೊಬೈಲ್ ಫೋನ್​ಗಳನ್ನ ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ದರೋಡೆ ಮಾಡಲಾಗಿದ್ದ 2.56 ಲಕ್ಷ ರೂಪಾಯಿ ಮೌಲ್ಯದ 44 ಕ್ವಿಂಟಲ್ ಅಡಿಕೆ, ಕೃತ್ಯಕ್ಕೆ ಬಳಸಿದ್ದ 3 ಲಕ್ಷ ರೂಪಾಯಿ ಬೆಲೆಯ ಬೊಲೆರೋ ವೆಹಿಕಲ್ ಹಾಗೂ ಸುಮಾರು 15000 ರೂಪಾಯಿ ಮೌಲ್ಯದ ಬೈಕ್ ಸೇರಿದಂತೆ ಒಟ್ಟು 5.71 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 

ನರಸಿಂಹರಾಜಪುರದಲ್ಲಿ ಅಡಿಕೆ ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರು ಆರೋಪಿಗಳ ಬಂಧನ  Arecanut Robbery Case Solved in Narasimharajapura 4 Suspects Arrested by Police

ಶಿವಮೊಗ್ಗ : ಈ ಭಾನುವಾರ ಮಕ್ಕಳಿಗೆ ಪಲ್ಸ್​ ಪೋಲಿಯೋ ಹನಿ ಮರೆಯದೆ ಲಸಿಕೆ ಹಾಕಿಸಿ! ಇಲ್ಲಿದೆ ಡಿಟೇಲ್ಸ್​!

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗುರುದತ್ ಕಾಮತ್, ಸಬ್ ಇನ್‌ಸ್ಪೆಕ್ಟರ್ ಬಿ.ಎಸ್. ನಿರಂಜನ್ ಗೌಡ, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಎನ್.ಎ. ಜ್ಯೋತಿ, ಸಿಬ್ಬಂದಿಗಳಾದ ಮಧು, ಎಸ್.ಜಿ. ಸೋಮೇಶ, ಯುಗಾಂಧರ, ಪಿ.ಎ. ಬಿನು, ಅಮಿತ್ ಚೌಗುಲೆ, ದೇವರಾಜ, ರೇವಗೊಂಡ ಅರಾಧರ, ಎಂ.ಸಿ. ಮನು, ಮುರುಗೇಶ ಹಾಗೂ ಚಂದ್ರಕಾಂತ ಪೂಜಾರಿ ಪಾಲ್ಗೊಂಡಿದ್ದರು.

Arecanut Robbery Case
Arecanut Robbery Case

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ನರಸಿಂಹರಾಜಪುರದಲ್ಲಿ ಅಡಿಕೆ ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ನಾಲ್ವರು ಆರೋಪಿಗಳ ಬಂಧನ  Arecanut Robbery Case Solved in Narasimharajapura 4 Suspects Arrested by Police