ಮಹೇಶ್​ ಶೆಟ್ಟಿ ತಿಮರೋಡಿ ಸೇರಿದಂತೆ ಐವರ ವಿರುದ್ದ ಜೀವ ಬೆದರಿಕೆ ಕೇಸ್​ ದಾಖಲಿಸಿದ ಚಿನ್ನಯ್ಯ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಸ್ಕ್ ಮ್ಯಾನ್’ ಎಂದೇ ಖ್ಯಾತನಾದ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಹೊಸ ಸಂಚಲನ ಮೂಡಿಸಿದ್ದಾನೆ. ಸುಮಾರು ನಾಲ್ಕು ತಿಂಗಳುಗಳ ಕಾಲ ಶಿವಮೊಗ್ಗ ಜೈಲಿನಲ್ಲಿದ್ದ ಈತ, ನವೆಂಬರ್ 24ರಂದು ಕೋರ್ಟ್‌ನಿಂದ ಕಠಿಣ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಇಷ್ಟು ದಿನ ಜೈಲಿನಲ್ಲೇ ಉಳಿಯಬೇಕಾಗಿತ್ತು. ಇದೀಗ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಹೊರಬಂದಿರುವ ಚಿನ್ನಯ್ಯ ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಗೆ ಹಾಗೂ ತನ್ನ ಪತ್ನಿಗೆ ಪ್ರಾಣಾಪಾಯವಿದೆ ಎಂದು ದೂರಿದ್ದಾನೆ.

Mask Man Chinnayya Files Complaint Against Mahesh shetty thimarodi
Mask Man Chinnayya Files Complaint Against Mahesh shetty thimarodi

ಶಿವಮೊಗ್ಗ : ಈ ಭಾನುವಾರ ಮಕ್ಕಳಿಗೆ ಪಲ್ಸ್​ ಪೋಲಿಯೋ ಹನಿ ಮರೆಯದೆ ಲಸಿಕೆ ಹಾಕಿಸಿ! ಇಲ್ಲಿದೆ ಡಿಟೇಲ್ಸ್​!

Mask Man Chinnayya  ತನ್ನ ದೂರಿನಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ಅವರುಗಳು ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ಹೋದಾಗ, ಅಲ್ಲಿನ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಚಿನ್ನಯ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಐವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಮುಂದಿನ ಕಾನೂನು ತನಿಖೆಯನ್ನು ಆರಂಭಿಸಿದ್ದಾರೆ.

Mask Man Chinnayya Files Complaint Against Mahesh shetty thimarodi

Mask Man Chinnayya Files Complaint Against Mahesh shetty thimarodi