ಹಿಟ್ ಅಂಡ್ ರನ್, ಸ್ಕೂಟಿಗೆ ಬೈಕ್ ಡಿಕ್ಕಿ, ಯುವತಿಗೆ ಗಂಭೀರ ಗಾಯ, ಬೈಕ್ ಸವಾರ ಪರಾರಿ

ಹಂಚಿಕೊಳ್ಳಿ
WhatsApp Facebook X Telegram
Hit and Run in Ripponpet Bike Scooty Collision
Hit and Run in Ripponpet Bike Scooty Collision

ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ವೇಗವಾಗಿ ಬಂದ ಬೈಕ್‌ವೊಂದು ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತದ ನಂತರ ಬೈಕ್ ಸವಾರ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಗವಟೂರು ಸಮೀಪದ ಹಳೂರು ಗ್ರಾಮದ ನಿವಾಸಿ ಅನ್ನಪೂರ್ಣ ಎಂಬ ಯುವತಿಗೆ ಈ ಘಟನೆಯಲ್ಲಿ ಗಾಯಗಳಾಗಿವೆ.

Hit and Run in Ripponpet Bike Scooty Collision
Hit and Run in Ripponpet Bike Scooty Collision

ಹಳೂರು ನಿವಾಸಿ ಸಂಜೀವ್ ಅವರು ತಮ್ಮ ಮಗಳೊಂದಿಗೆ ಹೊಂಡಾ ಆಕ್ಟೀವಾ ಸ್ಕೂಟಿಯಲ್ಲಿ ಗವಟೂರಿನಿಂದ ಪಟ್ಟಣದ ಕಡೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಹೊಸನಗರ ರಸ್ತೆಯ ಕೆರೆಯ ಏರಿಯ ಮೇಲೆ ಅತಿ ವೇಗವಾಗಿ ಪಟ್ಟಣದ ಕಡೆಯಿಂದ ಬಂದ ಒಬ್ಬ ಅನಾಮಧೇಯ ಬೈಕ್ ಸವಾರನು ಅಜಾಗರೂಕತೆಯಿಂದ ಏಕಾಏಕಿ ಸ್ಕೂಟಿಗೆ ಡಿಕ್ಕಿ ಹೊಡೆದು, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ರಿಪ್ಪನ್‌ಪೇಟೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಯುವತಿಯನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಈ ಅಪಘಾತದ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hit and Run in Ripponpet Bike Scooty Collision

Hit and Run in Ripponpet Bike Scooty Collision
Hit and Run in Ripponpet Bike Scooty Collision

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor