ಸಾಗರ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ : ಮರ ಕಡಿಯುವ ಶಾಸ್ತ್ರ ಯಾವಾಗ ಗೊತ್ತಾ..?

ಹಂಚಿಕೊಳ್ಳಿ
WhatsApp Facebook X Telegram
sagara Marikamba Jatre 2026 Dates Announced sagara marikamba jatre ಕಾಪಾಡು ತಾಯಿ! : ಸಾಗರ ಮಾರಿಕಾಂಬೆ ಜಾತ್ರೆಗೆ ವಿದ್ಯುಕ್ತ ಚಾಲನೆ! ದೃಷ್ಟಿಬೊಟ್ಟು ಇಟ್ಟು ಮಾಂಗಲ್ಯ ಧಾರಣೆ!
sagara Marikamba Jatre 2026 Dates Announced

ಸಾಗರ : ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ದಿನಾಂಕ ನಿಗದಿಯಾಗಿದ್ದು, ಫೆಬ್ರವರಿ 3 ರಿಂದ ಫೆಬ್ರವರಿ 11, 2026 ರವರೆಗೆ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಗೆ ಸಂಬಂಧಿಸಿದಂತೆ ಸಿದ್ಧತೆಗಳು ಇಂದು ಅಧಿಕೃತವಾಗಿ ಆರಂಭಗೊಂಡಿವೆ.

sagara Marikamba Jatre 2026 Dates Announced sagara marikamba jatre ಕಾಪಾಡು ತಾಯಿ! : ಸಾಗರ ಮಾರಿಕಾಂಬೆ ಜಾತ್ರೆಗೆ ವಿದ್ಯುಕ್ತ ಚಾಲನೆ! ದೃಷ್ಟಿಬೊಟ್ಟು ಇಟ್ಟು ಮಾಂಗಲ್ಯ ಧಾರಣೆ!
sagara Marikamba Jatre 2026 Dates Announced

ಶಿವಮೊಗ್ಗದಲ್ಲಿ ವಿಜಯ್ ಮರ್ಚೆಂಟ್ ಟ್ರೋಫಿ: 36 ತಂಡಗಳ ನಡುವೆ ಕ್ರಿಕೆಟ್ ಸಮರಕ್ಕೆ ವೇದಿಕೆ ಸಿದ್ಧ

ಸೋಮವಾರದಂದು, ಜಾತ್ರೆ ಹಿನ್ನೆಲೆಯಲ್ಲಿ ನಡೆಯುವ ಪ್ರಮುಖ ಶಾಸ್ತ್ರಗಳಲ್ಲಿ ಒಂದಾದ ಬಣ್ಣ ಹೊಡೆಯುವ ಶಾಸ್ತ್ರಕ್ಕೆ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್. ನಾಗೇಂದ್ರ ಅವರು ದೇವಸ್ಥಾನದ ಗಂಡನ ಮನೆ ಎದುರು ಚಾಲನೆ ನೀಡಿದರು. ಇದರೊಂದಿಗೆ ಜಾತ್ರೆಗೆ ಪೂರ್ವಭಾವಿ ತಯಾರಿಗಳು ಶುರುವಾದವು.ಈಗಾಗಲೇ ಶಾಸಕರ ನೇತೃತ್ವದಲ್ಲಿ ಮಾರಿಕಾಂಬಾ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ಬಣ್ಣ ಹೊಡೆಯುವ ಕಾರ್ಯದ ಜೊತೆಗೆ, ಜಾತ್ರೆಯ ಯಶಸ್ವಿ ಆಯೋಜನೆಗಾಗಿ ಅಗತ್ಯವಿರುವ ಕೆಲವು ಕೆಲಸಗಳಿಗೆ ಟೆಂಡರ್‌ಗಳನ್ನು ಕರೆದು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪ್ರಮುಖವಾದ ಮರ ಕಡಿಯುವ ಶಾಸ್ತ್ರವು ಡಿಸೆಂಬರ್ 23 ರಂದು ನಡೆಯಲಿದೆ. ಹಾಗೆಯೇ, ಜನವರಿ 27 ರಂದು ಅಂಕೆ ಹಾಕುವ ಶಾಸ್ತ್ರವು ನೆರವೇರಲಿದೆ. ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಮಿತಿಯು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜಾತ್ರೆಯ ಯಶಸ್ಸಿಗೆ ಸರ್ವರು ಸಹಕಾರ ನೀಡಬೇಕೆಂದು ಸಮಿತಿ ಕೋರಿದೆ.

Sagara Marikambe jatre, ಸಾಗರ ಮಾರಿಕಾಂಬಾ ಜಾತ್ರೆ
sagara Marikamba Jatre 2026 Dates Announced

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor