ಸಹಕಾರ ಸಂಘಗಳಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ಸುಲಭ ದಾರಿ: KICM ನಿಂದ 6 ತಿಂಗಳ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆಯಿರಿ!

ajjimane ganesh

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಸಹಕಾರ ಡಿಪ್ಲೊಮಾ (DCM) ಕೋರ್ಸ್‌ಗೆ ಅರ್ಜಿ ಆಹ್ವಾನ: ತರಬೇತಿ ಕಡ್ಡಾಯ; ಡಿ. 25 ಕೊನೆಯ ದಿನ 

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆ.ಐ.ಸಿ.ಎಂ) ಶಿವಮೊಗ್ಗ ಸಹಕಾರ ತರಬೇತಿ ಸಂಸ್ಥೆಯು 2026 ರ ಜನವರಿ 1 ರಿಂದ ಆರಂಭವಾಗುವ ಆರು ತಿಂಗಳ ಅವಧಿಯ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಡಿ.ಸಿ.ಎಂ) (DCM Course Application 2026)ಕೋರ್ಸ್‌ ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

DCM ಕೋರ್ಸ್ ಅರ್ಜಿ ಆಹ್ವಾನ 2026: ಉದ್ಯೋಗ/ಪದೋನ್ನತಿಗೆ ಕಡ್ಡಾಯ ಸಹಕಾರ ಡಿಪ್ಲೊಮಾ DCM Course Application 2026: Compulsory Diploma in Co-operative Management for Jobs
DCM ಕೋರ್ಸ್ ಅರ್ಜಿ ಆಹ್ವಾನ 2026: ಉದ್ಯೋಗ/ಪದೋನ್ನತಿಗೆ ಕಡ್ಡಾಯ ಸಹಕಾರ ಡಿಪ್ಲೊಮಾ DCM Course Application 2026: Compulsory Diploma in Co-operative Management for Jobs

ಕರ್ನಾಟಕ ರಾಜ್ಯದ ಎಲ್ಲಾ ಸಹಕಾರ ಸಂಘ, ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಲ್ಲಿನ ಉದ್ಯೋಗಗಳ ನೇಮಕಾತಿಗೆ ಹಾಗೂ ಹಾಲಿ ಉದ್ಯೋಗದಲ್ಲಿರುವವರ ಪದೋನ್ನತಿಗೆ ಈ ಸಹಕಾರ ಡಿಪ್ಲೊಮಾ ಕೋರ್ಸ್‌ ಕಡ್ಡಾಯವಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

ಕೋರ್ಸ್ ಅವಧಿ: 6 ತಿಂಗಳು.

ಕನಿಷ್ಠ ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ (SSLC) ಪಾಸಾಗಿರಬೇಕು.

ಶಿಷ್ಯವೇತನ (Stipend): ತರಬೇತಿ ಅವಧಿಯಲ್ಲಿ ಕಂಪ್ಯೂಟರ್ ತರಬೇತಿ ಸೇರಿದಂತೆ ಪ್ರತಿ ತಿಂಗಳು ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ರೂ 600 ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ 500 ಶಿಷ್ಯವೇತನವನ್ನು ನೀಡಲಾಗುತ್ತದೆ.

ದೂರ ಶಿಕ್ಷಣ (Distance Education) ಅವಕಾಶ: ಡಿ.ಸಿ.ಎಂ ಕೋರ್ಸ್ ತರಬೇತಿಯನ್ನು ಸಹಕಾರ ಸಂಘಗಳು ಅಥವಾ ಯಾವುದೇ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ನೌಕರರಿಗೆ ಮಾತ್ರ ದೂರ ಶಿಕ್ಷಣದ (Distance Education) ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸ್ಥಳ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು 2025 ರ ಡಿಸೆಂಬರ್‌ 25 ರ ಒಳಗೆ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಸೊಸೈಟಿ, 2 ನೇ ಹಂತ, ವಿನೋಬನಗರ, ಶಿವಮೊಗ್ಗ ಇಲ್ಲಿ ಸಲ್ಲಿಸಿ ಪ್ರವೇಶ ಪಡೆಯಬೇಕು.

ಕೃಷ್ಣಮೃಗಗಳ ಮೇಲೆ ನಿಗಾ, 3 ದಿಕ್ಕುಗಳಿಗೂ ಶಿವಮೊಗ್ಗದಿಂದ ರೈಲು ಸಂಪರ್ಕ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಅರ್ಜಿಗಳು ದೊರೆಯುವ ಸ್ಥಳ/DCM Course Application 2026

ಅರ್ಜಿಗಳು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆ.ಐ.ಸಿ.ಎಂ), ಶಿವಮೊಗ್ಗ ಸೇರಿದಂತೆ ಈ ಕೆಳಗಿನ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಗಳಲ್ಲಿ ಲಭ್ಯವಿದೆ

ಜಿಲ್ಲಾ ಸಹಕಾರ ಯೂನಿಯನ್ ನಿ ಚಿತ್ರದುರ್ಗ.

ಜಿಲ್ಲಾ ಸಹಕಾರ ಯೂನಿಯನ್ ನಿ ದಾವಣಗೆರೆ.

ಜಿಲ್ಲಾ ಸಹಕಾರ ಯೂನಿಯನ್ ನಿ ಚಿಕ್ಕಮಗಳೂರು.

ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: ದೂ.ಸಂ: 08182-248873, 9449075746, 702244115, 8310554752, 7026246493, 9482216930.

DCM ಕೋರ್ಸ್ ಅರ್ಜಿ ಆಹ್ವಾನ 2026: ಉದ್ಯೋಗ/ಪದೋನ್ನತಿಗೆ ಕಡ್ಡಾಯ ಸಹಕಾರ ಡಿಪ್ಲೊಮಾ DCM Course Application 2026: Compulsory Diploma in Co-operative Management for Jobs
DCM ಕೋರ್ಸ್ ಅರ್ಜಿ ಆಹ್ವಾನ 2026: ಉದ್ಯೋಗ/ಪದೋನ್ನತಿಗೆ ಕಡ್ಡಾಯ ಸಹಕಾರ ಡಿಪ್ಲೊಮಾ DCM Course Application 2026: Compulsory Diploma in Co-operative Management for Jobs

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,

DCM ಕೋರ್ಸ್ ಅರ್ಜಿ ಆಹ್ವಾನ 2026: ಉದ್ಯೋಗ/ಪದೋನ್ನತಿಗೆ ಕಡ್ಡಾಯ ಸಹಕಾರ ಡಿಪ್ಲೊಮಾ DCM Course Application 2026: Compulsory Diploma in Co-operative Management for Jobs
Share This Article