ಒಣಹಾಕಿದ್ದ ಬಟ್ಟೆಗಳನ್ನ ಮಡಚಿ ಬೀರುವಿನಲ್ಲಿ ಇಡಲು ಹೋದಾಗ ಎದುರಾಗಿತ್ತು ಆಘಾತ!

This Article Written by / Malenadu Today / ಮಾರ್ಚ್ 16, 2024

ಒಣಹಾಕಿದ್ದ ಬಟ್ಟೆಗಳನ್ನ ಮಡಚಿ ಬೀರುವಿನಲ್ಲಿ ಇಡಲು ಹೋದಾಗ ಎದುರಾಗಿತ್ತು ಆಘಾತ!

shivamogga Mar 16, 2024  Kumsi Police Station ,Ayanur, Shimoga ಒಣ ಹಾಕಿದ ಬಟ್ಟೆ ತೆಗೆದು ಮಡಚಿ ಬೀರುವಿನಲ್ಲಿ ಇಡಲು ಹೋಗಿದ್ದ ವೇಳೆ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವ ವಿಷಯ ಗೊತ್ತಾಗಿ ಶಿವಮೊಗ್ಗದ ಕುಂಸಿ ಪೊಲೀಸ್‌ ಸ್ಟೇಷನ್ ಗೆ ವ್ಯಕ್ತಿಯೊಬ್ಬರು ದೂರುಕೊಟ್ಟಿದ್ದಾರೆ. ಈ ಸಂಬಂಧ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

 ಆಯನೂರಿನಲ್ಲಿ ಘಟನೆ ನಡೆದಿದ್ದು, ಇಲ್ಲಿನ ನಿವಾಸಿಯೊಬ್ಬರು ಹಾನಗಲ್‌ಗೆ ಹೋಗಿ ಮನೆಗೆ ವಾಪಸ್‌ ಆಗಿದ್ದರು. ಮರುದಿನ ಅವರ ಪತ್ನಿ ಹೇಳಿದಂತೆ ಒಣ ಹಾಕಿದ್ದ ಬಟ್ಟೆ ಮಡಚಿ ಬೀರುವಿನಲ್ಲಿ ಇಡಲು ಹೋಗಿದ್ದಾರೆ. ಈ ವೇಳೆ ಬೀರುವಿನ ಲಾಕ್‌ ಓಪನ್‌ ಆಗಿರುವುದು ಕಾಣಿಸಿದೆ. ಅನುಮಾನಗೊಂಡು ಪರಿಶೀಲಿಸಿದ್ದಾರೆ. ಮನೆಯ ಹಂಚು ಸರಿಸಿರುವುದು ಕಂಡುಬಂದಿದೆ. ಅಲ್ಲದೆ ಬೀರುವಿನಲ್ಲಿದ್ದ  ಒಟ್ಟು ಮೌಲ್ಯ 2,13,000/-ರೂ ಹಾಗು ನಗದು 30,000 ರೂಪಾಯಿ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. 

.  

#Shimoga

ಮುಂದಿನ ಸುದ್ದಿ ಒದಿ

Leave a Comment