ಸುದ್ದಿಯ ಸ್ಥಳ: Shivamogga district, Karnataka
Shivamogga Mar 7, 2024 ಮಾಂಸ ಮಾರಾಟ ನಿಷೇಧ
ಮಾರ್ಚ್ 08 ರಂದು ಅಂದರೆ ನಾಳೆ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಮಾ. 15 ರಂದು ಡಾಕ್ ಅದಾಲತ್
ಶಿವಮೊಗ್ಗ ಅಂಚೆ ವಿಭಾಗವು ಮಾ. 15 ರಂದು ಬೆಳಗ್ಗೆ 11.00ಕ್ಕೆ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಶಿವಮೊಗ್ಗ ಅಂಚೆ ವಿಭಾಗದಲ್ಲಿ ಡಾಕ್ ಅದಾಲತ್ ಹಮ್ಮಿಕೊಂಡಿದೆ. ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳನ್ನು ಅಥವಾ ಸಲಹೆ-ಸೂಚನೆಗಳನ್ನು ಮಾ.12 ರೊಳಗಾಗಿ ಸಲ್ಲಿಸಿ, ಡಾಕ್ ಅದಾಲತ್ನಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.