SHIVAMOGGA | Dec 28, 2023 | ಶಿವಮೊಗ್ಗದ ಫ್ರೀಡಂಪಾರ್ಕ್ನಲ್ಲಿ ನಡೆದಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾನ ಕಾಲಿಗೆ ಪೊಲೀಸ್ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.
READ : ಮತ್ತೆ ಆಕ್ಟೀವ್ ಆಯ್ತಾ ಶಿವಮೊಗ್ಗ ರೌಡಿಸಂ! ಫ್ರೀಡಂ ಪಾರ್ಕ್ ಬಳಿ ಹಳೇ ರೌಡಿಗಳ ಕಿರಿಕ್! ಓರ್ವನ ಮೇಲೆ ಹಲ್ಲೆ!
ರೌಡಿಶೀಟರ್ ಮಂಜುನಾಥ ಅಲಿಯಾಸ್ ವಲಂಗಾನ ಎಡ ಕಾಲಿಗೆ ಶಿವಮೊಗ್ಗ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಜಯನಗರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಸಿದ್ದೇಗೌಡ ಸೋಮಿನಕೊಪ್ಪದ ಬಳಿಯಲ್ಲಿ ರೌಡಿಶೀಟರ್ ಕಾಲಿಗೆ ಬುಲೆಟ್ ಫೈರ್ ಮಾಡಿದ್ದಾರೆ.
READ : Permit ಇಲ್ಲದೆ ಆಟೋ ಚಲಾಯಿಸುತ್ತಿದ್ದ ಚಾಲಕನಿಗೆ ಬರೋಬ್ಬರಿ ಹತ್ತು ವರೆ ಸಾವಿರ ರೂಪಾಯಿ ದಂಡ
ಫ್ರೀಡಂಪಾರ್ಕ್ನಲ್ಲಿ ಶಶಿ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾ ಆಗಿದ್ದು ನೇಪಾಳಿ ಮಂಜನ ಜೊತೆ ಸೇರಿಕೊಂಡು ಶಶಿ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪವಿದೆ.
ಇದೀಗ ಇವತ್ತು ಬೆಳಗ್ಗಿನ ಜಾವ ಆರೋಪಿ ಮಹಜರ್ ಪ್ರಕ್ರಿಯೆ ವೇಳೆ ವಲಂಗಾನ ಕಾಲಿಗೆ ಗುಂಡು ಬಿದ್ದಿದೆ.ಈ ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಸಹ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇನ್ನೂ ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ರವರು ವಾಟ್ಸ್ಯಾಪ್ ಮೆಸೇಜ್ ಮೂಲಕ ಮಾಹಿತಿ ನೀಡಿದ್ದು, ಶಿವಮೊಗ್ಗ ನಗರದಲ್ಲಿ ಮೂರು ದಿನಗಳ ಹಿಂದೆ ನಡೆದ 307 ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಆರೋಪಿ ಮಂಜ ಅಲಿಯಾಸ್ ವಲಂಗ ಮಂಜನನ್ನು ನಿನ್ನೆ ಬಂಧಿಸಲಾಗಿದೆ. ಇಂದು ಬೆಳಿಗ್ಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವ ಸಮಯದಲ್ಲಿ, ಆತ ಪೊಲೀಸ್ ಸಿಬ್ಬಂದಿ ರವಿ ಮತ್ತು ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ..
ಈ ವೇಳೆ ಇನ್ಸ್ ಪೆಕ್ಟರ್ ಸಿದ್ದನಗೌಡ ಅವರು ಕತ್ತಿಯನ್ನು ಎಸೆಯುವಂತೆ ಎಚ್ಚರಿಕೆ ನೀಡಿದರೂ ವಲಂಗಾ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಸಿಬ್ಬಂದಿ ರವಿ ಗಾಯಗೊಂಡಿದ್ದಾರೆ..ಹೀಗಾಗಿ ಆತ್ಮರಕ್ಷಣೆಗಾಗಿ ಮತ್ತು ನಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ನಂತರ ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.