SHIMOGA NEWS LIVE

ಬೀಗ ಹಾಕಿದ್ದ ಮನೆ ಮುಂದೆ ಓಡಾಡುತ್ತಿದ್ದ ಯುವಕ! ವಿನೋಬ ನಗರ ಪೊಲೀಸರಿಂದ ಕೇಸ್! ಕಾರಣ?

ಶೇರ್ ಮಾಡಿ WhatsApp Facebook X

SHIVAMOGGA  |  Dec 24, 2023  |   ಬೀಗ ಹಾಕಿದ್ದ ಮನೆಯ ಬಳಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನ ವಿನೋಬನಗರ ಪೊಲೀಸ್ ಸ್ಟೇಷನ್​ ಪೊಲೀಸರು ಬಂಧಿಸಿ ಸುಮೋಟೋ ಕೇಸ್ ದಾಖಲಿಸಿದ್ದಾರೆ. 

ವಿನೋಬ ನಗರ ಪೊಲೀಸ್ ಸ್ಟೇಷನ್/Vinoba Nagar Police Station 

KARNATAKA POLICE ACT, 1963 (U/s-96(C)) ಅಡಿಯಲ್ಲಿ ಪಿಎಸ್​ಐ ಸುನೀಲ್ ಕೇಸ್​ ದಾಖಲಿಸಿದ್ದು, ದಿನಾಂಕ:-21/12/2023 ರಂದು ಸಂಜೆ 07.00 ಗಂಟೆಗೆ  ವಿನೋಬನಗರ ಪೊಲಿಸ್ ಠಾಣಾ ಸರಹದ್ದಿನಲ್ಲಿ ನಡೆಸ್ತಿದ್ದ ಗಸ್ತಿನ ವೇಳೆ ಆರೋಪಿ ಪತ್ತೆಯಾಗಿದ್ದಾನೆ. 

ಪೊಲೀಸ್ ಚೌಕಿ/ ಬೊಮ್ಮನ ಕಟ್ಟೆ

ಆಪಾರಾಧ ಪತ್ತೆ  ಸಂಬಂಧ ಪೊಲೀಸ್ ಚೌಕಿ, ನಾಗೇಂದ್ರ ಕಾಲೋನಿ, ಕೀರ್ತಿನಗರ, ಬೊಮ್ಮನಕಟ್ಟಿ ಮುಖ್ಯ ರಸ್ತೆ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 06.30 ಗಂಟೆಗೆ ಬೊಮ್ಮನಕಟ್ಟೆ ಬಿ ಬ್ಯಾಕ್ ಬಳಿ ಗಸ್ತು ಮಾಡುತ್ತಿರುವಾಗ ಯಾರೋ ಒಬ್ಬ ಆಸಾಮಿಯು ಬೀಗ ಹಾಕಿದ ಮನೆಯ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿರುವುದನ್ನ ಗಮನಿಸಿದ್ದಾನೆ. 

READ : ಭಾರತೀಪುರ ಟರ್ನಿಂಗ್​ ನಲ್ಲಿ ರಸ್ತೆಯಿಂದ ಇಳಿದು ಮನೆ ಮೇಲೆ ಬಿದ್ದ ಮಹೇಂದ್ರ ನೆಕ್ಸಾ ಕಾರು!

ಆತನನ್ನ ಹಿಡಿಯಲು ಹೋದಾಗ, ಆರೋಪಿ ಎಸ್ಕೇಪ್ ಆಗಿದ್ಧಾನೆ. ಆತನ ಬೆನ್ನಟ್ಟಿ ಹಿಡಿದು ತಂದ ಪೊಲೀಸ್ ಸಿಬ್ಬಂದಿ ಬಳಿ ವಿಚಾರಣೆಯಲ್ಲಿಯು ಸರಿಯಾದ ಮಾಹಿತಿ ಆರೋಪಿ ನೀಡಿಲ್ಲ.  ಹಾಗಾಗಿ ಆರೋಪಿ ಬೇವಾರೆಂಟ್ ತಕ್ಸೀರು ಕೃತ್ಯವೆಸಗುವ ಉದ್ದೇಶ ಹೊಂದಿ ಹೊಂಚು ಹಾಕುತ್ತಿರಬಹುದೆಂದು ಅನುಮಾನ ಕಂಡು ಬಂದಿದ್ದರಿಂದ  ಆತನನ್ನ ಸ್ಠೇಷನ್​ಗೆ ಕರೆತಂದು ಕೇಸ್ ಮಾಡಿದ್ದಾರೆ. 


ವಿಷಯಗಳು:
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor