ವಿವಿಧ ಜಿಲ್ಲೆಗಳ ಪ್ರವಾಸಿಗರಿಗೆ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ ಗುಡ್ ನ್ಯೂಸ್!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Dec 22, 2023  |   ಹುಲಿ-ಸಿಂಹಧಾಮ 26ರ ಮಂಗಳವಾರದಂದು ವೀಕ್ಷಣೆಗೆ ಲಭ್ಯ

ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಯನ್ನು ದಿ: 26-12-2023 ರ ಮಂಗಳವಾರದಂದು ಸಹ ತೆರೆದಿರುತ್ತದೆ. ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

READ : ಅರಣ್ಯ ಭೂಮಿ ಒತ್ತುವರಿ ! ಶಿವಮೊಗ್ಗ ರಾಜ್ಯದಲ್ಲಿಯೇ ನಂಬರ್! ಏಷ್ಟಾಗಿದೆ ಕಾಡು ಕಬಳಿಕೆ ಗೊತ್ತಾ?

ರಂಗಾಯಣದಲ್ಲಿ ‘ಸೀತಾರಣ್ಯ ಪ್ರವೇಶ’ ನಾಟಕ ಪ್ರದರ್ಶನ

ಶಿವಮೊಗ್ಗ ರಂಗಾಯಣವು ಡಿ. 24 ರಂದು ಸಂಜೆ 6.00 ಕ್ಕೆ ಸುವರ್ಣ ಸಾಂಸ್ಕøತಿಕ ಭವನ (ರಂಗಾಯಣ)ದಲ್ಲಿ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ (ರಿ), ಸಾಧನಕೇರಿ, ಧಾರವಾಡ ಇವರ ಸಹಯೋಗದೊಂದಿಗೆ ರಂಗಯಾನ ಟ್ರಸ್ಟ್, ಮೈಸೂರು ಪ್ರಸ್ತುತಿಯ ಸಕ್ಕರಿ ಬಾಳಾಚಾರ್ಯ ಶಾಂತಕವಿ ರಚನೆಯ ಸಾಲಿಯನಾ ಉಮೇಶ್ ನಾರಾಯಣ್ ಇವರ ನಿರ್ದೇಶನದ  ಸೀತಾರಣ್ಯ ಪ್ರವೇಶ ನಾಟಕ ಪ್ರದರ್ಶನವನ್ನು ಆಯೋಜಿಸಿದೆ. ಕಲಾಸಕ್ತರು ಈ ಪ್ರದರ್ಶನಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗಾಯಣ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಟಿಕೇಟ್ ದರ ಒಬ್ಬರಿಗೆ ರೂ. 30/-.


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor