SHIVAMOGGA | Dec 22, 2023 |ಶಿವಮೊಗ್ಗದಲ್ಲಿಯು ಕೋವಿಡ್-19 ಸೋಂಕಿನ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ನಿನ್ನೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂವರು ಪಾಸಿಟಿವ್ ಕೇಸ್ ದಾಖಲಾಗಿದೆ.
ಈ ಸಂಬಂಧ ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ತಿಮ್ಮಪ್ಪ ದೃಢಪಟ್ಟಿಸಿದ್ದಾರೆ. ಓರ್ವರನ್ನ ದಾಖಲು ಮಾಡಲಾಗಿದೆ ಎಂದು ತಿಳಿಸಿರುವ ಅವರು ಇಬ್ಬರನ್ನು ಹೋಂ ಹೈಸೋಲೇಷನ್ಗೆ ಓಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂರು ಮಂದಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದಿರುವ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೆಡ್ ಸಿದ್ದವಾಗಿ ಇರಿಸಲಾಗಿದೆ. ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ.
READ : ಶಿವಮೊಗ್ಗ ಭದ್ರಾವತಿ-ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ರೈಲಿಗೆ ಸಿಲುಕಿ ವೃದ್ಧ ಸಾವು!
ನಿನ್ನೆ ಒಂದೇ ದಿನ 20 ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇನ್ನೂ ಕೋವಿಡ್ 19 ಈಗೀನ ಪ್ರಬೇದ ಸೋಂಕಿತರಲ್ಲಿ ಕಾಣಿಸಿದೆಯಾ ಎಂಬ ಪ್ರಶ್ನೆಗೆ ಈ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಸಿದ ಬಳಿಕವಷ್ಟೆ ಗೊತ್ತಾಗಲಿದೆ. ಸದ್ಯ ಮೂವರಲ್ಲಿ ಸೋಂಕು ಇರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕೋವಿಡ್ ವಿಚಾರದಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಮುನ್ನೆಚ್ಚರಿಕೆಯನ್ನ ತೆಗೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.