SHIVAMOGGA | Dec 19, 2023 | ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿದ್ದು ಕಳ್ಳತನವನ್ನ ನಿಲ್ಲಿಸಲಾಗದೇ ಇರುವುದು ದೊಡ್ಡಪೇಟೆ ಪೊಲೀಸ್ ಲಿಮಿಟ್ಸ್ನಲ್ಲಿ ಶಿವಮೊಗ್ಗದ ಮಾನ ಹರಾಜಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದೀಗ ಕೂಲಿ ಕಾರ್ಮಿಕನೊಬ್ಬ ಸಾಲದ ಕಂತು ಕಟ್ಟಲು ಮಕ್ಕಳು ಕೊಟ್ಟ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಆತನ ಜೇಬಿಗೆ ಕೈ ಹಾಕಿ ಕಳ್ಳರು ಹಣ ಎಗರಿಸಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕಳ್ಳತನದ ಗ್ಯಾಂಗ್ವೊಂದು ಕೆಲಸ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ ಪೊಲೀಸ್ ಇಲಾಖೆ, ಕೆ.ಎಸ್.ಆರ್ಟಿಸಿ ಸಿಬ್ಬಂದಿ ಈ ಬಗ್ಗೆ ಗಮನಹರಿಸ್ತಿಲ್ಲವಂತೆ. ಇದರ ಪರಿಣಾಮ ಎಂಬಂ ವಿಜಯನಗರ ಜಿಲ್ಲೆ ಹರಪನಹಳ್ಳಿ ಆಲೂರು ಚೌಡಪ್ಪ ಎಂಬವರು ತಮ್ಮ ದುಡಿಮೆಯ ದುಡ್ಡನ್ನ ಕಳೆದುಕೊಂಡಿದ್ದಾರೆ.
READ : ಹೆದ್ದಾರಿ ಅಗಲೀಕರಣದ ವೇಳೆ ಮಣ್ಣಿನಡಿ ಸಿಲುಕಿ ಕಾರ್ಮಿಕನ ದುರಂತ ಸಾವು!/ ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿ ಜಪ್ತಿ
ಬಾಳೆ ಹೊನ್ನೂರು ಕಾಪಿ ತೋಟದಲ್ಲ ಚೌಡಪ್ಪರವರ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಅಲ್ಲಿಗೆ ಹೋಗಿದ್ದ ಚೌಡಪ್ಪರವರು ಬಳಿಕ ವಾಪಸ್ ವಿಜಯ ನಗರ ಹೋಗಲು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ಧಾರೆ. ಅಲ್ಲಿ ಅವರ ಚಡ್ಡಿ ಜೇಬಿಗೆ ಕೈ ಹಾಕಿ ಯಾರೋ ದುಡ್ಡು ಎಗರಿಸಿದ್ದಾರೆ. ಬರೋಬ್ಬರಿ 37 ಸಾವಿರ ರೂಪಾಯಿ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದೆಯಷ್ಟೆ. ತನಿಖೆ ಇನ್ನಷ್ಟೆ ಆಗಬೇಕಿದೆ.
