ನೀರು ಹಾಯಿಸ್ತಿದ್ದ ಯಜಮಾನರನ್ನ ದಾಳಿ ನಡೆಸಿ ಸಾಯಿಸಿದ ಹಂದಿ! ಸಿಟ್ಟಿಗೆದ್ದ ಗ್ರಾಮಸ್ಥರು! ಅಚ್ಚರಿಯ ಕೇಸ್​ ಇದು!

This Article Written by / Malenadu Today / ಡಿಸೆಂಬರ್ 19, 2023

ನೀರು ಹಾಯಿಸ್ತಿದ್ದ ಯಜಮಾನರನ್ನ ದಾಳಿ ನಡೆಸಿ ಸಾಯಿಸಿದ ಹಂದಿ! ಸಿಟ್ಟಿಗೆದ್ದ ಗ್ರಾಮಸ್ಥರು! ಅಚ್ಚರಿಯ ಕೇಸ್​ ಇದು!

KARNATAKA |  Dec 19, 2023  | ಕಾಡಂಚಿನ ಗ್ರಾಮಗಳಲ್ಲಿ ನಡೆಯುವ ಘಟನೆಗಳು ಒಮ್ಮೊಮ್ಮೆ ಚಿತ್ರ ವಿಚಿತ್ರ ಎನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಸನ ಜಿಲ್ಲೆಯಲ್ಲೊಂದು ಘಟನೆ ಸಂಭವಿಸಿದೆ. ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕಾಡು ಹಂದಿಯೊಂದು ಬೀಭತ್ಸ ದಾಳಿ ನಡೆಸಿ ರೈತನನ್ನ ಸಾಯಿಸಿದೆ. ಅಲ್ಲದೆ ತಡೆಯಲು ಬಂದ ಮಹಿಳೆಯರ ಮೇಲೂ ದಾಳಿ ನಡೆಸಿದ ಹಂದಿಯು ಸಿಕ್ಕಸಿಕ್ಕಲ್ಲಿ ತಿವಿದಿದೆ. 

READ : ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಪೊಲೀಸರ ಕೈಗೆ ಸಿಕ್ಕಿಬಿದ್ದ ರಾಗಿಗುಡ್ಡದ ಪ್ರಭು @ ಕೊಳಿ! ಏನಿದು ಪ್ರಕರಣ

ಈ ಘಟನೆಯಲ್ಲಿ ಯಜಮಾನರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಘಟನೆಯಿಂಧ ರೊಚ್ಚಿಗೆದ್ದ ಗ್ರಾಮಸ್ಥರು ದೊಣ್ಣೆ, ಲಟ್ಟಾ, ಕುಡುಗೋಲು ಇತ್ಯಾದಿಗಳನ್ನ ತೆಗೆದುಕೊಂಡು ಹಂದಿಯನ್ನ ಅಟ್ಟಾಡಿಸಿ ಹುಡುಕಿ ಕೊಂದಿದ್ದಾರೆ.

ಇಲ್ಲಿನ ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ರಾಜೇಗೌಡ ಎಂಬ 63 ವರ್ಷದ ರೈತ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮನುಷ್ಯರ ಕಂಡರೆ ಓಡುವ ಕಾಡು ಹಂದಿ ನಿರ್ದಿಷ್ಟವಾಗಿ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಇನ್ನೂ ಗ್ರಾಮಸ್ಥರು ಪ್ರತಿದಾಳಿಯಲ್ಲಿ ಹಂದಿಯನ್ನು ಸಹ ಸಾಯಿಸಿದ್ದಾರೆ. ಪ್ರಕರಣ ಕುತೂಹಲ ಮೂಡಿಸಿದ್ದು, ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. 

 

ಮುಂದಿನ ಸುದ್ದಿ ಒದಿ

Leave a Comment