ಬ್ಯಾಂಕ್ ಮ್ಯಾನೇಜರೇ ಕಳ್ಳ! ಬ್ರಾಂಚ್​ ಆಫೀಸ್​ನಲ್ಲಿದ್ದ 140 ಪ್ಯಾಕೇಟ್​ ಚಿನ್ನ ಮಾಯ! ಮತ್ತೊಂದು ನಕಲಿ ಗೋಲ್ಡ್ ಕೇಸ್

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

CHIKKAMAGALURU  |   ಚಿಕ್ಕಮಗಳೂರು  ಜಿಲ್ಲೆಯಲ್ಲಿ ಬ್ಯಾಂಕಿನ ಸಿಬ್ಬಂದಿಯಿಂದಲೇ ಬ್ಯಾಂಕಿಗೆ ಸುಮಾರು 5 ಕೋಟಿ ರು.ನಷ್ಟು ವಂಚನೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. 

ನಕಲಿ ಚಿನ್ನ ಇಟ್ಟು ಸಿಬ್ಬಂದಿಗಳಿಂದಲೇ ಬ್ಯಾಂಕಿಗೆ 5 ಕೋಟಿ ರು. ವಂಚನೆ!

ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಕೆ.ಎಂ.ರಸ್ತೆಯಲ್ಲಿರುವ ಬ್ಯಾಂಕ್​ವೊಂದರ   ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಗ್ರಾಹಕರ ಹೆಸರಿನಲ್ಲಿ ಬ್ಯಾಂಕಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ 

READ: ಇನೋವಾ ಕಾರಿನಲ್ಲಿ ಸಿಕ್ಕ ದಾಖಲೆಯಿಲ್ಲದ 8 ಕೋಟಿ ಯಾರದ್ದು ಗೊತ್ತಾ!? ಎಸ್​ಪಿ ಹೇಳಿದ್ದೇನು?

ಅಸಲಿ ಚಿನ್ನ ನಕಲಿ ಚಿನ್ನ

ಗ್ರಾಹಕರಿಂದ ಅಸಲಿ ಚಿನ್ನ ಪಡೆದು ಅವರ ಹೆಸರಿನಲ್ಲಿ ನಕಲಿ ಚಿನ್ನವನ್ನು ಬ್ಯಾಂಕಿನ ಲಾಕರ್‌ನಲ್ಲಿಟ್ಟು, ಅಸಲಿ ಚಿನ್ನವನ್ನು ಬೇರೆಡೆಗೆ ಸಾಗಿಸಿದ್ದರು. ಬ್ಯಾಂಕಿನಲ್ಲಿರುವ ಸುಮಾರು 141 ಪ್ಯಾಕೆಟ್‌ಗಳ ಪೈಕಿ 140 ಪ್ಯಾಕೆಟ್‌ಗಳಲ್ಲಿ ನಕಲಿ ಚಿನ್ನವಿರುವುದು ಬೆಳಕಿಗೆ ಬಂದಿದೆ. 

READ : ಕಣ್ಣು ಹಾಕಂಗಿಲ್ಲ ! ಬಾಳೆ ತೋಟಕ್ಕಿದೆ ಬೆಡಗಿಯರ ಫೋಟೋ ಕಾವಲು!

5 ಕೋಟಿಯಷ್ಟು ವಂಚನೆಯಾಗಿದೆ ಎಂದು ಆಂದಾಜಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಟೌನ್ ಠಾಣೆಯಲ್ಲಿ ದಾಖಲಾಗಿದ್ದು, 5 ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಗ್ರಾಹಕರ ಗಮನಕ್ಕೆ ಬರುತ್ತಿದ್ದಂತೆ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ತಮ್ಮ ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

 

Leave a Comment