ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿಯೇ ಯಾಕೆ ನಡೆಯಿತು ಗೊತ್ತಾ ಕಾಂತಾರಾ 1 ಮಹೂರ್ತ!? ರಿಷಬ್ ಹೇಳಿದ್ದೇನು?

SHIVAMOGGA NEWS / Malenadu today/ Nov 27, 2023 | Malenadutoday.com  

KUNDAPURA |  ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಮೊದಲ ಅದ್ಯಾಯ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಅದಾಗಲೇ 3 ಮಿಲಿಯನ್ ದಾಟಿರುವ ಟೀಸರ್ ದಾಖಲೆಯನ್ನು ಸಹ ಬರೆದಾಗಿದೆ. 

ಹೊಂಬಾಳೆ ಫಿಲಂ

ಇನ್ನೂ ರಿಷಬ್​ ಶೆಟ್ಟಿ ನಿರೀಕ್ಷಿತ ಚಿತ್ರದ ಫಸ್ಟ್ ಲುಕ್ ಅನ್ನು  ‘ಅನಾವರಣಗೊಳಿಸಿದ್ದು ಪ್ರಸಿದ್ದ ದೇವಸ್ಥಾನ ಆನೆಗುಡ್ಡೆ ಯಲ್ಲಿ.. ಅಲ್ಲಿಯೇ ಯಾಕೆ ಈ ಸಿನಿಮಾಕ್ಕೆ ಮುಹೂರ್ತ ಫಿಕ್ಸ್​ ಆಗಿತ್ತು ಎಂಬ ಕುತೂಹಲ ಹಲವರಲ್ಲಿದೆ.. 

ಇದಕ್ಕೂ ಸಹ ರಿಷಬ್​ ಶೆಟ್ಟಿ ಉತ್ತರವನ್ನು ನೀಡಿದ್ದಾರೆ ಹೊಂಬಾಳೆ ಫಿಲಂ ಸಂಸ್ಥೆಯವರು ನಂಬಿದಂತಹ ಕ್ಷೇತ್ರ ಆನೆಗುಡ್ಡೆಯಾಗಿದೆ ಎಂಬುದು ಶೆಟ್ಟರ ಮೊದಲ ಉತ್ತರ. 

ಆನೆಗುಡ್ಡೆ ಗಣಪತಿ ಆಶೀರ್ವಾದ

ಇನ್ನೂ ಈ ಬಗ್ಗೆ ನಿನ್ನೆ ಮಾತನಾಡಿದ್ದ ರಿಷಬ್​ ಶೆಟ್ಟಿ, ನನಗೆ ಆನೆಗುಡ್ಡೆ ಅದೃಷ್ಟದ ಬಾಗಿಲು. ಕಳೆದ ಬಾರಿ ಕಾಂತಾರಕ್ಕೂ ಇಲ್ಲಿಯೇ ಮುಹೂರ್ತ ಮಾಡಿದ್ದೇವೆ. ಅದೇ ರೀತಿ ಈ ಬಾರಿಯೂ ಆನೆಗುಡ್ಡೆಯ ಗಣಪತಿ ಆಶೀರ್ವಾದದೊಂದಿಗೆ ಪ್ರಾರಂಭ ಮಾಡಿದ್ದೇವೆ ಎನ್ನುತ್ತಾರೆ. 

ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನ

ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಿನ್ನೆ ಸೋಮವಾರ ‘ಕಾಂತಾರ ಅಧ್ಯಾಯ-1’ ಕ್ಕೆ ಮುಹೂರ್ತ ನಡೆದು ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.  

READ : ಕಾರು ಟಚ್​ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ! ಬಿತ್ತು ಇಟ್ಟಿಗೆಯಿಂದ ಏಟು!

ರಿಷಬ್ ಶೆಟ್ಟಿಯ ವಿಶಿಷ್ಟ ನೋಟವನ್ನು ಪ್ರದರ್ಶಿಸುವ ಟೀಸರ್ ಮತ್ತ ದಂತಕಥೆಯ ಕಾಂತಾರಾ ಲೋಕ ಸಖತ್ ಆಗಿ ಬಿತ್ತರಗೊಂಡಿದೆ. ಇನ್ನೂ ಫಸ್ಟ್ ಲುಕ್ ಟೀಸರ್ ನೋಡಿದ ಸಂಸದ ಬಿ.ವೈ.ರಾಘವೇಂದ್ರ  ಸಹ ಖುಶ್ ಆಗಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಅಕೌಂಟ್​ನಲ್ಲಿ ವಿವರಿಸಿದ್ದಾರೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು