ಕೆಲಸ ಕೊಟ್ಟ ಮಂಡಿ ಮಾಲೀಕನಿಗೆ ₹7 ಕೋಟಿ ವಂಚನೆ! ವಿಡಿಯೋ ಲೀಕ್​ ಮಾಡ್ತೀನಿ ಎಂದ ಲೇಡಿಸ್!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com | :  ಶಿವಮೊಗ್ಗ: ಉದ್ಯೋಗ ನೀಡಿದ್ದ ಅಡಕೆ ಮಂಡಿ ಮಾಲೀಕರಿಗೆ ಮಹಿಳೆಯರಿಬ್ಬರು ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ. 

ಈ ಕುರಿತು ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಎಪಿಎಂಸಿ ಆವರಣದಲ್ಲಿರುವ ಅಡಕೆ ಮಂಡಿ ಮಾಲೀಕರೊಬ್ಬರು ವಂಚನೆಗೆ ಒಳಗಾದವರು. ಮಾಲೀಕರ ಪತ್ನಿ ಅನಾರೋಗ್ಯಕ್ಕೆ ಈಡಾದ ಹಿನ್ನೆಲೆ ಪತ್ನಿಯನ್ನು ನೋಡಿಕೊಳ್ಳುವ ಸಲುವಾಗಿ ಮಂಡಿ ಮಾಲೀಕರು ಮನೆಯಲ್ಲಿಯೇ ಹೆಚ್ಚಾಗಿ ಇರುತ್ತಿದ್ದರು. 

ಹೀಗಾಗಿ, ಕಳೆದ ಮೂರು ನಾಲ್ಕು ವರ್ಷದಿಂದ ಮಂಡಿ ನಿರ್ವಹಣೆ ಜವಾಬ್ದಾರಿಯನ್ನು ಕೆಲಸಕ್ಕಿದ್ದ ಇಬ್ಬರೂ ಮಹಿಳೆಯರಿಗೆ ವಹಿಸಿದ್ದರು. ಆದರೆ ಜವಾಬ್ದಾರಿ ವಹಿಸಿಕೊಂಡ ಮಹಿಳೆಯರು ಮಾಲೀಕರಿಗೆ ಕೋಟ್ಯಂತರ ರೂಪಾಯಿ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ. 

READ : ಈಗ ಸಿನಿಮಾದ ರೀತಿ ನಾಯಿ ರೂಪದಲ್ಲಿ ಬಂದನಾ ಮನೆ ಮಗ! ಏನಿದು ಅಚ್ಚರಿಯ ವಿಸ್ಮಯ!! ಒಂದು ಶ್ವಾನದ ಕಥೆ

ಮಂಡಿಯಲ್ಲಿ ವಾಸ್ತವವಾಗಿ ಇರಬೇಕಾದ ಅಡಿಕೆ ಕೂಡ ಕಡಿಮೆ ಇದೆ. ಅಲ್ಲದೆ ಚೆಕ್ಕುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಹಿಳೆಯರ ಮೇಲಿದೆ. ಲೆಕ್ಕ ಪರಿಶೋಧಕರು ಲೆಕ್ಕಪತ್ರಗಳನ್ನು ಪರಿಶೀಲನೆ ನಡೆಸಿದಾಗ ವ್ಯತ್ಯಾಸ ಕಂಡು ಬಂದಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. 

ವಿಶೇಷ ಅಂದರೆ ಕೆಲಸ ಕೊಟ್ಟ ಸಾಹುಕಾರನಿಗೆ ಮೋಸ ಮಾಡಿದ್ದಷ್ಟೆ ಅಲ್ಲದೆ, ಆತನು ಪ್ರಶ್ನಿಸಿದಾಗ ಆತನ ವಿಡಿಯೋವೊಂದನ್ನ ಬಹಿರಂಗ ಪಡಿಸುವುದಾಗಿ ಇಬ್ಬರು ಮಹಿಳೆಯರು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಸಂತ್ರಸ್ತರಿಗೆ ನಿಜವಾಗಿಯು ನ್ಯಾಯ ಕೊಡಿಸಬೇಕಿದೆ 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor