ಶಿವಮೊಗ್ಗದ ಟಿಪ್ಪುನಗರದ ರಾಜೀಕ್​​, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE

KARNATAKA NEWS/ ONLINE / Malenadu today/ Oct 21, 2023 SHIVAMOGGA NEWS

ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿರುವ ಕೊಲೆ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಮಲೆನಾಡು ಟುಡೆಗೆ ಎಕ್ಸ್​ಕ್ಲ್ಯೂಸಿವ್ ಆಗಿ ಲಭ್ಯವಾಗಿದೆ. 

ಮೂಲತಃ ಶಿವಮೊಗ್ಗದ ಟಿಪ್ಪು ನಗರ ನಿವಾಸಿಯಾದ ಸೈಯ್ಯದ್ ರಾಜೀಕ್ಕೊಲೆಯಾದ ವ್ಯಕ್ತಿ, ರೌಡಿಶೀಟರ್ ಕೂಡ ಆಗಿರುವ ಈತನನ್ನು ಈತನ ಸಂಬಂಧಿಕರೇ ಹೊಡೆದುಕೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರೌಡಿಶೀಟರ್ ಸೈಯ್ಯದ್​ ರಾಜೀಕ್​ನ ಕುಟುಂಬಸ್ಥರು ಈ ಸಂಬಂಧ ದೂರು ನೀಡಿದ್ದಾರೆ. 

BREAKING NEWS | ಭದ್ರಾವತಿ ಗ್ರಾಮಾಂತರದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ | ಓರ್ವನ ಕೊಲೆ!

ರಾಜೀಕ್ಹಾಗೂ ಭದ್ರಾವತಿ ತಿಪ್ಲಾಪುರ ಕ್ಯಾಂಪ್​ನ ಸಮೀರ್​ ಎಂಬಾತನ ನಡುವೆ ಕಳೆದ ನಾಲ್ಕು ವರ್ಷಗಳಿಂದಲೂ ಹಣಕಾಸಿನ ವಿಚಾರದಲ್ಲಿ ವೈಮನಸ್ಯವಿತ್ತು. ಮೇಲಾಗಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜೀಕ್​ ಸಮೀರ್​ಗೆ ಜೀವ ಬೆದರಿಕೆ ಹಾಕುತ್ತಿದ್ದ. ಸಂಬಂಧಿಯಾಗಿದ್ದರೂ ಜೀವ ಬೆದರಿಕೆ ಹಾಕಿದ ರಾಜೀಕ್ಬಗ್ಗೆ ಸಮೀರ್ ಆತಂಕದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಆತನಿಗೆ ಮಾತುಕತೆ ನಡೆಸೋಣ, ತೀರ್ಮಾನಕ್ಕೆ ಬರೋಣ ಎಂದು ಗೌಡ್ರಳ್ಳಿ ಬಳಿಯ ಅಡಿಕೆ ತೋಟವೊಂದಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿ ಸಮೀರ್ ಮತ್ತವನ ಜೊತೆಗಾರರು ರಾಜೀಕ್​ನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ ಎಂಬುದು ಆರೋಪ..

ಅಡಿಕೆ ತೋಟದಲ್ಲಿ ವಿಪರೀತ ಗಾಯಗಳಿಂದ ಸಾವನ್ನಪ್ಪಿದ್ದ ರಾಜೀಕ್​ ಮರಣೋತ್ಸರ ಪರೀಕ್ಷೆ ಇನ್ನಷ್ಟೆ ನಡೆಯಬೇಕಿದೆ. ಈ ಸಂಬಂಧ ಪೊಲೀಸರು ಸ್ಥಳ ಮಹಜರ್ ನಡೆಸಿದ್ದಾರೆ. ಅಲ್ಲದೆ   ಪ್ರಕರಣ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Leave a Comment