KARNATAKA NEWS/ ONLINE / Malenadu today/ Oct 17, 2023 SHIVAMOGGA NEWS
ಶಿವಮೊಗ್ಗದಲ್ಲಿ ಕೋಮು ವಿಚಾರದಲ್ಲಿ ದುಷ್ಕರ್ಮಿಗಳು ಆಟವಾಡುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ನಿರ್ದಿಷ್ಟ ಫೋಟೋಗಳನ್ನು ಎಡಿಟ್ ತಮಗಿಷ್ಟ ಬಂದಾಗೆ ವಿಡಿಯೋ ಮಾಡಿ, ಪ್ರಚೋದನಾಕಾರಿಯಾಗಿ ಹರಿಬಿಡಲಾಗುತ್ತಿದೆ. ಅದರಲ್ಲಿಯು ದುಷ್ಕರ್ಮಿಗಳ ದಾಳಿಯಲ್ಲಿ ಸಾವನ್ನಪ್ಪಿದ ಹರ್ಷನ ಫೋಟೋವನ್ನು ಬಳಸಿಕೊಂಡು ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿರುವ ಘಟನೆಗಳು ಹೆಚ್ಚಾಗಿವೆ. ಈ ಸಂಬಂಧ ಎರಡನೇ
ಎಫ್ಐಆರ್ ಕೂಡ ದಾಖಲಾಗಿದೆ
ಇದೇ ವಿಚಾರವಾಗಿ ವಾಟ್ಸ್ಯಾಪ್ನಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಬಗ್ಗೆ ವರದಿ ಇಲ್ಲಿದೆ : ಹಿಂದೂ ಹರ್ಷನ ಫೋಟೋ ಬಳಸಿ 24 ಸೆಕೆಂಡ್ನ ವಿಡಿಯೋ ಸ್ಟೇಟಸ್ ಹಾಕಿಕೊಂಡ ವಾಟ್ಸ್ಯಾಪ್ ಬಳಕೆದಾರ | ದೊಡ್ಡಪೇಟೆಯಲ್ಲಿ ದಾಖಲಾಯ್ತು FIR
ಇದರ ನಡುವೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿಯು ಇದೇ ವಿಚಾರದಲ್ಲಿ ಎಫ್ಐಆರ್ ದಾಖಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾದ ಎಫ್ಐಆರ್ನಲ್ಲಿರುವಂತೆ ನಮಾನ್ ಎಂಬಾತ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಹರ್ಷದ ಫೋಟೋ ಬಳಸಿಕೊಂಡು ಆಡಿಯೋ ವಿಡಿಯೋ ಇರುವ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಇದನ್ನ ಪ್ರಚೋದನಾಕಾರಿಯಾಗಿ ಆತ ಬಳಸಿಕೊಂಡಿದ್ದರ ಹಿನ್ನೆಲೆಯಲ್ಲಿ ಆತನ ವಿರುದ್ಧ :IPC 1860 (U/s-505(2)) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ