BIG EXCLUSIVE | ಮಧು ಮತ್ತು ಆಂಜನೇಯನಿಗೂ ಮೊದಲೇ ಕಾಡಾ ಕಾರ್ತಿಗೆ ಇತ್ತು ಸ್ಕೆಚ್​! ಈತ ಬಚಾವ್ ಆಗಿದ್ದು ಯಾರಿಂದ! ಇಟ್ಟ ಮಹೂರ್ತದ ಬಗ್ಗೆ ಅಲರ್ಟ್​ ಆಗಿದ್ರೂ ನಡೆದಿದ್ದೇಗೆ ಅಟ್ಯಾಕ್ | JP STORY

MALENADUTODAY.COM  |SHIVAMOGGA| #KANNADANEWSWEB

ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಚೀಲೂರಿನ ಸಮೀಪದ ಗೋವಿನ ಕೋವಿ ಬಳಿಯಲ್ಲಿ ನಿನ್ನೆ ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಮಧು ಮತ್ತು ಆಂಜನೇಯ ನ ಮೇಲೆ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿತ್ತು. ಇದೊಂದು ದ್ವೇಷದ ದಾಳಿ ಎಂಬುದು ನಿನ್ನೆಯೇ ಜಗದ್ಜಾಹಿರಾಗಿ ಹೋಗಿತ್ತು. ಅಲ್ಲದೆ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಲ್ಲಿ ಕೃತ್ಯವೆಸಗಿದ್ದ ಆರೋಪಿಗಳು ಹಾವೇರಿಯ ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದರು. 

READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು ಹೇಗೆ? ಶಿವಮೊಗ್ಗ ಸಿಟಿಯಲ್ಲಿಯೇ ನಡೆಯುತ್ತಿತ್ತಾ ಕೃತ್ಯ

Shivamogga Malenadu Today

ಕೋರ್ಟ್​ಗೆ ಬರ್ತಿದ್ದ ಹಂದಿ ಅಣ್ಣಿ ಬೈಕ್​ಗೆ ಇನ್ನೋವ್ಹಾ ಕಾರಿಗೆ ಡಿಕ್ಕಿಹೊಡೆದು, ವಿನೋಬನಗರದ ಪೊಲೀಸ್ ಚೌಕಿ ಎದುರು ಅಟ್ಟಾಡಿಸಿ ಕೊಂದಿತ್ತು ಕಾರ್ತೀ ಆ್ಯಂಡ್​ ಟೀಂ. ಸೇಮ್ ಇದೇ ರೀತಿಯಲ್ಲಿ ಹಂದಿ ಅಣ್ಣಿಯ ಪರವಾದ ಹುಡುಗರು, ಕೋರ್ಟ್​ಗೆ ಬಂದು ವಾಪಸ್ ಹರಿಹರದ ಬಾನುವಳ್ಳಿಗೆ ಹೋಗುತ್ತಿದ್ದ ಮಧು ಮತ್ತು ಆಂಜನೇಯರಿದ್ದ ಬೈಕ್​ಗೆ ಸ್ಕಾರ್ಪಿಯೋ ಮೂಲಕ ಡಿಕ್ಕಿ ಹೊಡೆಸಿ ತೋಟವೊಂದಕ್ಕೆ ಕೆಡವಿದೆ. ಅಲ್ಲಿ ಅನಾಮತ್ತು ಮಚ್ಚುಗಳಿಂದ ಹೊಡೆದು ಮಾರಣಾಂತಿಕ ದಾಳಿ ನಡೆಸಿದೆ. ಒಂದು ತಲೆಗೆ ಎರಡು ತಲೆಯನ್ನ ತೆಗೆಯಬೇಕೆಂದಿದ್ದ ಆಫೋಸಿಟ್ ಟೀಂನ ಅಟ್ಯಾಕ್​ನಲ್ಲಿ ಮಧು ಜೀವನ್ಮರಣ ಹೋರಾಡುತ್ತಿದ್ದಾನೆ. ಆಂಜನೇಯ ಸ್ಪಾಟ್ ಆಗಿದ್ದಾನೆ. 

READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ

Shivamogga Malenadu Today

ಇಲ್ಲಿ ಅಚ್ಚರಿಯ ಸಂಗತಿಯೆಂದರೆ, ಈ ಕ್ರೈಂ ಸೀನ್​ನ ಹಿಂದೆ ಬಿದ್ದು ಸುದ್ದಿಮೂಲಗಳನ್ನ ವಿಚಾರಿಸ್ತಿದ್ದಾಗ, ಸಿಕ್ಕಿದ್ದು, ಕಾಡಾ ಕಾರ್ತಿಗೆ ಹಾಕಿದ್ದ ಸ್ಕೆಚ್​..! ಹೌದು, ಮಧು ಮತ್ತು ಆಂಜನೇಯನ ಮೇಲೆ ದಾಳಿಗೂ ಮೊದಲು ಹಂತಕರ ಟೀಂ ಟಾರ್ಗೆಟ್ ಆಗಿದ್ದು ಕಾರ್ತಿ ಅಲಿಯಾಸ್ ಕಾಡಾ ಕಾರ್ತಿ! ಆತ ಜೈಲಿನಲ್ಲಿದ್ದಾನಲ್ವಾ ಆತನನ್ನ ಹೇಗೆ ಮುಗಿಸೋಕೆ ಸಾಧ್ಯ? ಇದೇ ಪ್ರಶ್ನೆಯನ್ನು  ನಾವು ಸಹ ಕೇಳಿದ್ವಿ.. ಅದಕ್ಕೆ ಮೂಲಗಳಲ್ಲಿ ಸಿಕ್ಕ ಉತ್ತರವೇನು ಗೊತ್ತಾ? ಕಳೆದ ಜನವರಿ ತಿಂಗಳಿನಲ್ಲಿ ಕಾಡಾ ಕಾರ್ತಿಯು ಸಹ ಕೋರ್ಟ್​ಗೆ ಅಟೆಂಡ್ ಆಗಿದ್ದ. ಹಾಗೆ ಹಾಜರಾಗಿ ವಾಪಸ್ ಹೋಗುವಷ್ಟರಲ್ಲಿ ಆತನನ್ನ ಮುಗಿಸಬೇಕು ಎಂಬ ಸ್ಕೆಚ್ ಸಿದ್ಧವಾಗಿತ್ತಂತೆ. ಆದರೆ ಅದು ಸಾಧ್ಯವಾಗಲಿಲ್ಲ. ಯಾಕೆ ಆಗಲಿಲ್ಲ ಅನ್ನೋದಕ್ಕೆ ಸಿಕ್ಕ ಕಾರಣ ಶಿವಮೊಗ್ಗ ಪೊಲೀಸ್​ 

READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್​ ?

ಶಿವಮೊಗ್ಗ ಪೊಲೀಸರು ರೌಡಿಗಳ ಚಲನವಲನದ ಬಗ್ಗೆ ಮೊದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು, ನಿರೀಕ್ಷಿತ ಘಟನೆಯನ್ನು ನಡೆಯದಂತೆ ತಡೆದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಒಂದೇ ಉದ್ದೇಶದಿಂದ ಕಾಡಾಕಾರ್ತಿ ಹಾಗೂ ಆತನ ಟೀಂ ಕೋರ್ಟ್​ಗೆ ಬರುವಾಗ ಹಾಗು ಹೋಗುವಾಗ ಹೆಚ್ಚಿನ ಸೆಕ್ಯುರಿಟಿ ನೀಡಿದ್ದರು. ಈ ಸೆಕ್ಯುರಿಟಿಯಿಂದಾಗಿ ಕಾಡಾಕಾರ್ತಿ ಜಸ್ಟ್ ಮಿಸ್ ಆಗಿ ಬಚಾವ್ ಆಗಿದ್ದ…ಇನ್ನೂ ಅದೇ ಸಮಯಕ್ಕೆ ಮಧು ಮತ್ತು ಆಂಜನೇಯ ಇಬ್ಬರು ಸಹ ಜೈಲಿನಿಂದ ಬೇಲ್ ಪಡೆದು ರಿಲೀಸ್ ಆಗಿದ್ದರು. ಅವರಿಬ್ಬರ ಬಿಡುಗಡೆಯಾದ ಬೆನ್ನಲ್ಲೆ ಮಲೆನಾಡುಟುಡೆ ತಂಡ, ಶಿವಮೊಗ್ಗ ರೌಡಿಸಂ ಮತ್ತೆ ಆಕ್ಟೀವ್ ಆದ ಬಗ್ಗೆ ವರದಿ ಮಾಡಿತ್ತು. ರೌಡಿಸಂನ ಆಕ್ಟೀವ್ ಹಾಗೂ ಅದರ ಮೌನಗಳು ಎರಡು ಸಹ ಅಪಾಯಕಾರಿಯೇ ಆಗಿರುತ್ತದೆ. ಯಾವಾಗ ಮಧು ಮತ್ತು ಆಂಜನೇಯ ರಿಲೀಸ್ ಆಗುತ್ತಾರೋ? ಆ್ಯಂಟಿ ಟೀಂನಲ್ಲಿ ಜೋಡಿ ಕೊಲೆಯ ಸ್ಕೆಚ್​ ಸಿದ್ಧವಾಗುತ್ತದೆ. ಅದರಂತೆ ಪ್ಲಾನ್ ಎಕ್ಸಿಕ್ಯೂಟ್ ಸಹ ಆಗುತ್ತದೆ.

ಕೊನೆಯದಾಗಿ ಇನ್ನೊಂದು ವಿಷಯ ತಿಳಿಸಬೇಕಿದೆ. ತಮ್ಮ ಮೇಲೆ ಅಟ್ಯಾಕ್ ಆಗುತ್ತೆ ಎನ್ನುವ ಸುಳಿವು ಕಾಡಾ ಟೀಂಗೂ ಇತ್ತು, ಗೊತ್ತಿದ್ದ ವಿಚಾರದ ಬಗ್ಗೆ ಕಾಡಾ  ಕೂಡ ಹುಡುಗರಿಗೆ ಹೇಳಿದ್ದ. ಆದರೆ ಮಧು ಮತ್ತು ಆಂಜನೇಯ ಕಾಡಾ ಟೀಂನ ಸಲಹೆಯನ್ನ ನಿರ್ಲಕ್ಷಿಸಿದ್ದರು. ನಾವು ಸಹ ಪಂಟರು ಎನ್ನುತ್ತಲೇ ದಾಳಿಕೋರರ ಮಚ್ಚಿನೇಟಿಗೆ ಪೆಟ್ಟು ತಿಂದು ರಕ್ತಹರಿಸಿದ್ರು. ಇನ್ನೂ ಮಧು ಹಾಗೂ ಆಂಜನೇಯನ ಮೇಲಿನ ದಾಳಿಯ ಹಿಂದಿನ ಕಾಣದ ಕೈಗಳ ಬಗ್ಗೆ ಹೇಳುವುದಿದೆ. ಓದುಗರೆ, ಈ ಬಗ್ಗೆ ಸದ್ಯದಲ್ಲಿಯೇ ವಿಶಿಷ್ಟವಾದ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ.  

Shivamogga Malenadu Today

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga handi anni murder,handi anni news,handi anni,handi anni murderers,handi anni murder case,handi anni murder acuused arrest,handi anni case,handi quilter,handi anni accused of murder,handhi anni is no more,anni dewani,rowdy sheeter #Crime, #Crimenews, #Davanagerenews, #Davanagerepolice, #Murder, #Murdernews, #Nyamathi, #Nyamathipolicestation, #Police, #Rowdy, #Rowdyattack, #Rowdysheeter, #Shimoga, #Shimogacrimenews, #Shimogarowdys,  #ಆರೋಪಿಗಳು  #ಕೊಲೆ, #ಗೋವಿನಕೋವಿ, #ಗೋವಿನಕೋವಿಗ್ರಾಮ, #ದಾವಣಗೆರೆ, #ನ್ಯಾಮತಿ, #ನ್ಯಾಮತಿತಾಲೂಕು, #ನ್ಯಾಮತಿಪೊಲೀಸ್, #ನ್ಯಾಮತಿಪೊಲೀಸ್_ಠಾಣೆ, #ಮರ್ಡರ್, #ರೌಡಿ, #ರೌಡಿಗಳಮೇಲೆದಾಳಿ, #ರೌಡಿಗಳು, #ರೌಡಿಹಂದಿಅಣ್ಣಿ, #ಹಂತಕರು

Leave a Comment