SHIVAMOGGA NEWS TODAY

BREAKING NEWS : ಇನ್​ಸ್ಪೆಕ್ಟರ್​ಗಳ ಬೆನ್ನಲ್ಲೆ 74 ತಹಶೀಲ್ದಾರ್​ ಟ್ರಾನ್ಸಫರ್​ ! ಶಿವಮೊಗ್ಗ ಜಿಲ್ಲೆ ಮೂರು ತಾಲ್ಲೂಕುಗಳ ತಹಶೀಲ್ದಾರ್​ ವರ್ಗ! ವಿವರ ಇಲ್ಲಿದೆ

Malenadu Today ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಚುನಾವಣೆಯು ಹತ್ತಿರವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಚುನಾವಣಾ ಆಯೋಗ ಮಾರ್ಗಸೂಚಿಗಳಂತೆ ಭರ್ಜರಿ ವರ್ಗಾವಣೆಯನ್ನು ಕೈಗೊಂಡಿದೆ. ಪೊಲೀಸ್ ಇಲಾಖೆಯ ಸರ್ಜರಿಯ ಬಳಿಕ ಇದೀಗ ತಹಶೀಲ್ದಾರ್​ ಕುರ್ಚಿಗಳಿಗೆ ಸರ್ಕಾರ ಕೈ ಹಾಕಿದೆ. ಇದಕ್ಕೆ ಪೂರಕ ಸರ್ಕಾರ ನಿನ್ನೆ 74 ತಹಶೀಲ್ದಾರ್​ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂವರು ತಹಶೀಲ್ದಾರ್​ಗಳು ಸಹ ವರ್ಗಾವಣೆ ಗೊಂಡಿದ್ಧಾರೆ. 

BREAKING NEWS :148 ಇನ್​​ಸ್ಪೆಕ್ಟರ್​ಗಳ ಟ್ರಾನ್ಸಫರ್​ ! ಶಿವಮೊಗ್ಗದ 3 ಸರ್ಕಲ್​, 8 ಕ್ಕೂ ಹೆಚ್ಚು ಸ್ಟೇಷನ್​ಗಳ ಇನ್​ಸ್ಪೆಕ್ಟರ್​ಗಳ ವರ್ಗಾವಣೆ

  • ಶಿವಮೊಗ್ಗ ತಾಲೂಕು ತಹಶೀಲ್ದಾರ್ ಎನ್ ಜೆ ನಾಗರಾಜಪ್ಪ ಮಂಡ್ಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ 
  • ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಉಡುಪಿಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ. 
  • ಹೊಸನಗರ ತಾಲೂಕಿನ ತಹಶೀಲ್ದಾರ್ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.
  • ಇನ್ನೂ ಚುನಾವಣಾ ತಹಶೀಲ್ದಾರ್​ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ  ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ತಹಶೀಲ್ದಾರ್  ಆಗಿರುವ ನಂದಕುಮಾರ್ ವರ್ಗಾವಣೆ ಗೊಂಡಿದ್ದಾರೆ. 
  • ವರ್ಗಾವಣೆಗೊಂಡಿರುವ ಶಿವಮೊಗ್ಗದ ಮೂರು ತಾಲ್ಲೂಕುಗಳ ತಹಶೀಲ್ದಾರ್​ ಸ್ಥಾನಗಳಿಗೆ ಯಾರು ವರ್ಗವಾಗಲಿದ್ದಾರೆ ಎಂಬುದರ ಬಗ್ಗೆ ತಿಳಿಸಲಾಗಿಲ್ಲ. 
ಒಟ್ಟು,  ಕಂದಾಯ ಇಲಾಖೆಯ 76 ತಹಶೀಲಾರ್‌ಗಳನ್ನು ವರ್ಗಾವಣೆ ಮಾಡಿ, ಸೂಚಿಸಿದ ಸ್ಥಳದಲ್ಲಿ ತಕ್ಷಣವೇ ಕೂಡಲೇ ಸೂಚಿಸಿದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತ ಸೂಚನ ನೀಡಿದೆ. 
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Malenadu Today