Doddapete police station : ಕೋವಿಡ್​ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್

ಶಿವವಮೊಗ್ಗದಲ್ಲಿ ಮತ್ತೊಂದು ನಂಬಿಕೆ ದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ( Doddapete police station ) ಎಫ್​ಐಆರ್​ ಆಗಿದೆ.ಆರ್ ಎಂ ಎಲ್ ನಗರದ ಶಾರದಾ ಎಂಬು ವರಿಗೆ 25 ಲಕ್ಷ,  ಶೇಷಗಿರಿಗೌಡ ಎಂಬವರಿಗೆ 1,98,000, ಮಂಜುನಾಥ್ ಎಂಬುವರಿಗೆ 25 ಲಕ್ಷ , ದಾವಣಗೆರೆಯ ಶಶಿಕುಮಾರ್ ಎಂಬುವರಿಗೆ 40 ಲಕ್ಷ, ಗೋಪಾಲಗೌಡ ಬಡಾವಣೆ ನಿವಾಸಿ ದಿವ್ಯಾ ಪ್ರವೀಣ್ ಅವರಿಗೆ 25 ಲಕ್ಷ ಹೀಗೆ ಒಟ್ಟು 1 ಕೋಟಿ 66 ಲಕ್ಷದ 98 ಸಾವಿರ ರೂಪಾಯಿ ವಂಚನೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 

Doddapete police station  : ಕೋವಿಡ್​ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:  ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್

ಏನಿದು ಕೇಸ್​. 

ಆರ್​ಎಂಎಲ್​ ನಗರದ ನಿವಾಸಿಯೊಬ್ಬರು , ಮೊದಲ  ಕೋವಿಡ್ ಸಂದರ್ಭದಲ್ಲಿ  ಮಿಳಘಟ್ಟದಲ್ಲಿ ಇ-ಸ್ಟೋರ್​ ಒಂದರ ಕರಪತ್ರ ನೋಡಿ ಅದರಲ್ಲಿದ್ದ ಅಡ್ರೆಸ್​ಗೆ ಕರೆಮಾಡಿದ್ದಾರೆ.  ಫೋನ್​ ಸ್ವೀಕರಿಸಿದವರು,  ಮನೆಯ ವಿಳಾಸ ಕೇಳಿ ಮನೆಗೆ ಬಂದಿದ್ದಾರೆ.  ಈ ವೇಳೆ  ಹವಾಟಿ ಇ-ಸ್ಟೋರ್ ಇಂಡಿಯ ಕಂಪನಿಯ ಹಲವು ಮುಖ್ಯಸ್ಥರನ್ನು ಫೋಟೋಗಳ ಮೂಲಕ ಪರಿಚಯಿಸಿದ್ಧಾರೆ. ಅಲ್ಲದೆ ಏನದು ಸ್ಕೀಮ್​ ಎಂಬುದನ್ನ ವಿವರಿಸಿದ್ದಾರೆ. ಈ ಕಂಪನಿಯಲ್ಲಿ ಕನಿಷ್ಟ 5 ಲಕ್ಷ ರೂ ಹೂಡಿಕೆ ಮಾಡಿದರೆ,  50,000 ರೂ ಪ್ರತಿ ತಿಂಗಳಿನಂತೆ ಸಿಗುತ್ತದೆ.  25 ಲಕ್ಷರೂ ಬಂಡವಾಳ ಹೂಡಿದರೇ ಇಸ್ಟೋರ್ ಅಂಗಡಿ ಮತ್ತು ತಿಂಗಳಿಗೆ 1 ಲಕ್ಷದ 35 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ. 

 Doddapete police station  : ಕೋವಿಡ್​ ಟೈಂನಲ್ಲಿ ಕೋಟಿಗಟ್ಲೇ ವಂಚನೆ / ನಂಬಿಕೆ ದ್ರೋಹಕ್ಕೆ ಈಗ ದಾಖಲಾಯ್ತು ಕೇಸ್

ಇದನ್ನ ನಂಬಿ ಮೋಸಹೋದವರೊಬ್ಬರು 25 ಲಕ್ಷರೂ. ಬಂಡವಾಳ ಹೂಡಿದ್ದಾರೆ. ಇದರಲ್ಲಿ ಹೂಡಿಕೆ ಹಣಕ್ಕೆ ಪ್ರತಿಯಾಗಿ ಇದುವರೆಗೂ ಒಟ್ಟು 16 ಲಕ್ಷ ಪ್ರತಿ ತಿಂಗಳು ಹಣ ಬಂದಿದೆ.   9 ಲಕ್ಷ ರೂ ಹಣ ವಾಪಾಸ್ ಆಗಿಲ್ಲ. ಇದನ್ನು ವಿಚಾರಿಸಿದರೆ ನೀವು ಮತ್ತೆ ಇಬ್ಬರು ಉದ್ಯೋಗಿಗಳನ್ನು ಕಂಪನಿಗೆ ಪರಿಚಯಿಸಿ ಹಣ ಬರುತ್ತದೆ ಎಂದಿದ್ದಾರೆ. ಇದರಿಂದ ಮೋಸ ಹೋಗಿರುವುದು ಗೊತ್ತಾಗಿ ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ( Doddapete police station ) ದೂರು ದಾಖಲಿಸಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment