ಶಾಂತಿನಗರದ ಮುಖ್ಯ ರಸ್ತೆ ಡಾಂಬರಿಕರಣಕ್ಕೆ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಚಾಲನೆ..

ಶಿವಮೊಗ್ಗ ನಗರದ ಮೂರನೇ ವಾರ್ಡಿನ ಶಾಂತಿನಗರದ ಜನತೆಯ ಬಹು ವರ್ಷಗಳ ಕನಸಾಗಿದ್ದ ಶಾಂತಿನಗರ ಮುಖ್ಯ ರಸ್ತೆಯ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯರಾದ  ಧೀರರಾಜ್ ಹೊನ್ನವಿಲೆ ಚಾಲನೆ ನೀಡಿದರು.

ಸುಮಾರು 2 ಕೋಟಿ ರೂಗಳ ಕಾಮಗಾರಿ ಇದಾಗಿದ್ದು  ಶಾಂತಿನಗರ (ರಾಗಿಗುಡ್ಡ) ಮುಖ್ಯರಸ್ತೆ ಡಾಂಬರಿಕರಣ ಮಾಡಲಾಗುತ್ತಿದೆ.

ಪಾಲಿಕೆ ಸದಸ್ಯರ ಸತತ ಪ್ರಯತ್ನ ಫಲದಿಂದ ಈ ಕಾಮಗಾರಿ ಆಗುತ್ತಿರುವುದಕ್ಕೆ  ಶಾಂನಗರದ ನಿವಾಸಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.  ಇದೇ ವೇಳೆ ಮಾತನಾಡಿದ  ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ನನ್ನನ್ನು ಪಾಲಿಕೆ ಸದಸ್ಯನನ್ನಾಗಿ ಆಯ್ಕೆ ಮಾಡಿದ  ಮತದಾರ ಬಂಧುಗಳಿಗೆ ನಾನು ಸದಾ ಋಣಿಯಾಗಿರುತ್ತೇನೆ ನನ್ನ ಅಧಿಕಾರಾವಧಿಯಲ್ಲಿ ನನಗೆ ತಿಳಿದ ಮಟ್ಟಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಮುಂದೆಯೂ ಕೂಡಾ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಯುತ ಬಸವರಾಜ್, ಶಾಂತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀಯುತ ಜಯದೇವಪ್ಪ, ಮಹಾನಗರ ಪಾಲಿಕೆ ಇಂಜಿನಿಯರ್ ತ್ರಿವೇಣಿ ಹಾಗು ಸಿಬ್ಬಂದಿಗಳು, ಗುತ್ತಿಗೆದಾರರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು

Leave a Comment