ಸೋಶಿಯಲ್ ಮೀಡಿಯಾದ ದುನಿಯಾದಲ್ಲಿ ಟ್ಯಾಲೆಂಟ್ಗಳಿಗೇ ತಮ್ಮ ಪ್ರತಿಭೆ ಅನಾವರಣಗೊಳಿಸಲು ಹೊಸ ಹೊಸ ವೇದಿಕೆ ಸಿಗುತ್ತಿದೆ. ಹಾಗಾಗಿಯೇ ಅದ್ಭುತ ಪ್ರತಿಭೆಗಳು ಸಖತ್ ಸುದ್ದಿಯಾಗುತ್ತಿದ್ದಾರೆ. ಸದ್ಯ ಈ ಸಾಲಿಗೆ ಶಿವಮೊಗ್ಗ -ಭದ್ರಾವತಿಯ ಹುಡುಗರು ಸೇರಿದ್ಧಾರೆ. ಇಷ್ಟಕ್ಕೂ ವಿಷಯ ಏನಂದರೆ. ಮಲೆನಾಡಿನ ಹುಡುಗರು ಕಾಫಿನಾಡು ಚಂದುವಿನ ಸ್ಟೈಲ್ನಲ್ಲಿಯೇ ಹೈಬ್ರೀಡ್ ಸಾಂಗ್ ವೊಂದನ್ನ ರೆಡಿಮಾಡಿದ್ದಾರೆ. ಸದ್ಯ ಈ ಹಾಡು ವೈರಲ್ ಆಗುತ್ತಿದೆ. ಹಾಡಿನ ತುಣುಕುಗಳು ರೀಲ್ಸ್ಗಳಲ್ಲಿ ಮೆಚ್ಚುಗೆ ಪಡೆದುಕೊಳ್ತಿದೆ. ಕೌತುಕ… ಕೌತುಕ.. ಅಂತಾ ಶುರುವಾಗುವ ಹಾಡಿನ ಇಂಟ್ರಡಕ್ಷನ್ನಲ್ಲಿಯೇ ಸಖತ್ ಕೌಂಟರ್ ಡೈಲಾಗ್ ಇದ್ದು ಮಜಾ ಕೊಡ್ತಿದೆ.
ಆನಂತರ ಆರಂಭವಾಗುವ ಐ ಲವ್ ಯು ಒಂದ್ಸಲ ಹಾಡನ್ನು ಥೇಟು ಕಾಫಿನಾಡು ಚಂದುವಿನ ಸಿಂಗಿಂಗ್ ಸ್ಟೈಲ್ನಲ್ಲಿ ಬರೆಯಲಾಗಿದೆ. ಹೈಬ್ರೀಡ್ ಕನ್ನಡ ಸಾಂಗ್ಸ್ ಸಂಸ್ಥೆ ತನ್ನ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡಿದ್ದು, ಹಾಡು ಹಿಟ್ ಆಗ್ತಿದೆ. ಹಾಡು ಹೈಬ್ರೀಡ್ ಕನ್ನಡ ಸಾಂಗ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ಲೇ ಆಗ್ತಿದೆ. ಭದ್ರಾವತಿಯ ಸಿದ್ದೇಶ್ , ನನ್ ಮನಸ್ಸು ನಿನ್ ಮ್ಯಾಲೆ ಅಂತಾ ಸಾಹಿತ್ಯ ಬರೆದಿದ್ಧಾರೆ. ಈ ಸಾಲುಗಳನ್ನು ಸಿಂಗರ್ ಜಾನ್ ಭಾರತ್ ಸೂಪರ್ ಹಾಡಿದ್ದಾರೆ. ಡಿ ಮ್ಯೂಸಿಕ್ ನ ಗೋಪಿ ಆಚಾರ್ ಈ ಗೀತೆಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಹಾಡಂತು ಸಖತ್ ಹಿಟ್ ಆಗ್ತಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com