ಶಿವಮೊಗ್ಗ ಜಿಲ್ಲೆಗೆ ಯಾವುದೇ ಎಸ್ಪಿ ವರ್ಗವಾಗಿ ಬಂದರೂ, ತಮ್ಮ ವಿನೂತನ ಕಾರ್ಯವೈಖರಿಯಿಂದ ಹೆಚ್ಚು ಜನಮಣ್ಣನೆ ಗಳಿಸಿದವರೇ ಆಗಿದ್ದಾರೆ. ಇದರ ಸಾಲಿನಲ್ಲಿ ಎಸ್ಪಿ ಮಿಥುನ್ ಕುಮಾರ್ ಕೂಡ ಒಬ್ರು. ಹೇಳಿಕೇಳಿ ಶಿವಮೊಗ್ಗದಲ್ಲಿ ಕೋಮುವಾದವಿದೆ,ರೌಡಿಸಂ ಜೀವಂತವಾಗಿದೆ..ಗಾಂಜಾ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚಿದೆ. ಒಂದು ರೀತಿಯಲ್ಲಿ ಬೆಂಗಳೂರು ಹೊರತು ಪಡಿಸಿದರೆ ಜಿಲ್ಲಾ ಮಟ್ಟದಲ್ಲಿ ಅತೀ ಹೆಚ್ಚು ಕ್ರೈಂ ಗಳು ನಡೆಯೋದು ಶಿವಮೊಗ್ಗ ಜಿಲ್ಲೆಯಲ್ಲಿ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಕ್ರೈಂ ಗಳು ಇತ್ತಿಚ್ಚಿನ ದಿನಗಳಲ್ಲಿ ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು, ಪ್ರಕರಣವನ್ನು ತ್ವರಿತಗತಿಯಲ್ಲಿ ಭೇದಿಸಲು ಒಂದಿಬ್ಬರು ಅಧಿಕಾರಿಗಳನ್ನಷ್ಟೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಹಳೇ ಕ್ರೈಂ ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿದ್ದರು. ರಾಜಕೀಯ ಒತ್ತಡದಿಂದ ಪಾರಾಗಲು ಪರ್ಯಾಯ ವ್ಯವಸ್ಥೆಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಹತ್ತು ವರ್ಷಗಳಿಂದಲೂ ಶಿವಮೊಗ್ಗ ನಗರದಲ್ಲಿ ಜಾಲ್ತಿಯಲ್ಲಿತ್ತು. ಸಾಮಾನ್ಯವಾಗಿ ಯಾವುದೇ ಮೇಜರ್ ಕ್ರೈಂ ಗಳಾದಾಗ, ಆಯಾ ಠಾಣೆಯ ಠಾಣಾಧಿಕಾರಿಗಳೇ ತನಿಖೆ ಮಾಡುವುದು ಸಹಜ.

ಆದ್ರೆ ಶಿವಮೊಗ್ಗ ಮಟ್ಟಕ್ಕೆ ಆ ಪರಿಸ್ಥಿತಿ ಇರಲಿಲ್ಲ. ಇಲ್ಲಿ ಯಾವುದೇ ಕ್ರೈಂ ಗಳು ನಡೆದಾಗ, ಆ ಒಂದಿಬ್ಬರು ಅಧಿಕಾರಿಗಳು ಬಿಟ್ಟರೆ ಉಳಿದವರು ಪ್ರಯೋಜನಕ್ಕೆ ಬಾರದವರು ಎಂಬಂತೆ ಬಿಂಬಿಸಲಾಗಿತ್ತು. ಯಾವುದೇ ಠಾಣೆಯಲ್ಲಿ ಕೋಮುಗಲಾಟೆಗಳಾದಾಗ, ಕೊಲೆಗಳಂತ ಗಂಭೀರ ಕ್ರೈಂ ಗಳಾದಾಗ ಈ ಒಂದಿಬ್ಬರೇ ಅಧಿಕಾರಿಗಳೇ ತನಿಖೆಗೆ ಬರಬೇಕಾಗಿತ್ತು. ಇದು ಇವರಿಗೂ ಕೂಡ ಒತ್ತಡವನ್ನು ಹೆಚ್ಚಿಸಿತ್ತು. ತನ್ನ ಠಾಣಾ ವ್ಯಾಪ್ತಿಯಲ್ಲಿ ನಡೆದ ಕ್ರೈಂ ಕೇಸ್ ಗಳನ್ನು ಬೇರೊಬ್ಬ ಠಾಣೆಯ ಅಧಿಕಾರಿ ತನಿಖೆ ಮಾಡಲು ಬಂದಾಗ. ಸಹಜವಾಗಿ ಎಂತವರಿಗೂ ನೋವಾಗುತ್ತದೆ. ನಾವು ಕೂಡ ಪೊಲೀಸ್ ಎಕ್ಸಾಂ ಪಾಸ್ ಮಾಡಿಕೊಂಡು ಅವರಂತೆ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಾವು ಕೂಡ ಐಪಿಸಿ ಸಿಆರ್ ಪಿಸಿ ಓದಿಕೊಂಡು ಬಂದಿದ್ದೇವೆ…ಆದ್ರೆ ತನಿಖೆ ವಿಚಾರ ಬಂದಾಗ ಈ ತಾರತಮ್ಯ ಏಕೆ ಎಂದೇ ಅಸಮಾಧಾನ ಹೊರಹಾಕಿದವರು ಇದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಮೇಜರ್ ಕ್ರೈಂ ಗಳಾದ ಸಂದರ್ಭದಲ್ಲಿ ಅಸಹಕಾರ ಕೂಡ ತೋರಿದ್ದರ ಪರಿಣಾಮ ಪ್ರಕರಣ ಭೇದಿಸಲು ವಿಳಂಬವಾಗಿದ್ದು ಸುಳ್ಳಲ್ಲ..ಇಂತಹ ಕೆಟ್ಟ ಸಂಪ್ರದಾಯಕ್ಕೆ ಎಸ್ಪಿ ಮಿಥುನ್ ಕುಮಾರ್ ತಿಲಾಂಜಲಿ ಇಟ್ಟಿದ್ದಾರೆ.
ಎಲ್ಲಾ ಅಧಿಕಾರಿಗಳು ಲೈಮ್ ಲೈಟ್ ನಲ್ಲಿ ಇರಬೇಕು.
ಪೊಲೀಸ್ ಇಲಾಖೆಗೆ ಯಾವೊಬ್ಬ ಅಧಿಕಾರಿಯೂ ನಿರ್ಣಾಯಕವಾಗಿರಬಾರದು..ಎಲ್ಲರೂ ಕೂಡ ನಿರ್ಣಾಯಕರಾಗಿರಬೇಕು ಎಂಬ ಉದ್ದೇಶದಿಂದ ಎಸ್ಪಿ ಮಿಥುನ್ ಕುಮಾರ್ ಅಮೂಲಾಗ್ರ ಬದಲಾವಣೆಯನ್ನು ಮಾಡಿರುವುದು ಇತ್ತಿಚ್ಚಿನ ಅವರ ಕಾರ್ಯವೈಖರಿಯಲ್ಲಿ ಗೋಚರವಾಗುತ್ತದೆ. ಆಯಾ ಠಾಣೆಯ ಕ್ರೈಂ ಗಳನ್ನು ಆಯಾ ಅಧಿಕಾರಿಗಳೇ ತನಿಖೆ ಮಾಡಬೇಕು ಎಂದು ಅವರಲ್ಲಿ ಉತ್ಸಾಹ ತುಂಬಿದ್ದಾರೆ. ಹೊಸ ಪೊಲೀಸ್ ಸಿಬ್ಬಂದಿಗಳಿಗೆ ಕ್ರೈಂ ಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ.ಹಳೇ ಕ್ರೈಂ ಸಿಬ್ಬಂದಿಗಳಿಗೆ ಕೋಕ್ ಕೊಡುವ ಕೆಲಸ ಮಾಡಿದ್ದಾರೆ. ಇದು ಶಿವಮೊಗ್ಗ ಪೊಲೀಸ್ ಇಲಾಖೆಯ ಮಟ್ಟಿಗೆ ಹೊಸ ಕ್ರಾಂತಿ ಎಂದರೂ ತಪ್ಪಾಗುವುದಿಲ್ಲ. ಕೇವಲ ಒಂದಿಬ್ಬರು ಅಧಿಕಾರಿ ಸಿಬ್ಬಂದಿ ಲೈಮ್ ಲೈಟ್ ನಲ್ಲಿದ್ರೆ ಸಾಲದು..ಎಲ್ಲರೂ ಇರಬೇಕು ಎಂಬ ಆಶಯವನ್ನು ಎಸ್ಪಿ ಮಿಥುನ್ ಕುಮಾರ್ ಹೊಂದಿದ್ದಾರೆ.
ಅಧಿಕಾರಿ ಸಿಬ್ಬಂದಿಗಳಿಗೆ ಪ್ರಶಂಸೆ..ಗೌರವ ಬಹುಮಾನ
ಎಸ್ಪಿ ಮಿಥುನ್ ಕುಮಾರ್ ರವರಲ್ಲಿ ಕಂಡ ಅಪರೂಪದ ಕ್ಯಾರೆಕ್ಟರ್ ಅಂದರೇ..ಕೆಳಹಂತದ ಅಧಿಕಾರಿ ಸಿಬ್ಬಂದಿಗಳು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದಾಗ ಅವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಕ್ರೈಂ ಕೇಸ್ ಗಳನ್ನು ತ್ವರಿತಗತಿಯಲ್ಲಿ ಭೇದಿಸುವ. ಇಲಾಖೆಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಅಧಿಕಾರಿ ಸಿಬ್ಬಂದಿಗಳನ್ನು ತಮ್ಮ ಕಛೇರಿಗೆ ಕರೆಸಿ ಗೌರವಿಸುತ್ತಿದ್ದಾರೆ. ಅವರಿಗೆ ಪ್ರಶಂಸನೀಯ ಪತ್ರ ನೀಡಿ ಗೌರವಿಸುತ್ತಿದ್ದಾರೆ. ಉತ್ತಮ ಪ್ರಕರಣಗಳಲ್ಲಿ ಬಹುಮಾನ ನೀಡಿ ಗೌರವಿಸುತ್ತಿದ್ದಾರೆ. ಇದು ಎಂತಹ ಅಧಿಕಾರಿ ಸಿಬ್ಬಂದಿಗೂ ಪ್ರೇರಣೆಯಲ್ಲದೇ ಮತ್ತೇನು ಅಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಇಷ್ಟು ವರ್ಷ ಕೆಲಸ ಮಾಡಿದ್ರೂ..ಅಲ್ಲೂ ತಮ್ಮನ್ನು ತಾವು ತೆರೆದುಕೊಳ್ಳಲು ಸಾಧ್ಯವಾಗದ ಭದ್ರಾವತಿ ಪೇಪರ್ ಟೌನ್ ಇನ್ ಸ್ಪೆಕ್ಟರ್ ಮಂಜುನಾಥ್..ಇತ್ತಿಚ್ಚಿನ ದಿನಗಳಲ್ಲಿ ಎರಡು ಪೋಕ್ಸೋ ಕೇಸ್ ಪ್ರಕರಣಗಳಲ್ಲಿ ಉತ್ತಮ ಕೆಲಸ ಮಾಡಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ರು. ಸಾಕ್ಷಿಯೇ ಇಲ್ಲದ ಅನಾಥೆಯ ಕೊಲೆ ಪ್ರಕರಣಕ್ಕೆ ಜೀವ ನೀಡಿ ಆರೋಪಿಯನ್ನು ಬಂಧಿಸಿದ್ರು.ಭದ್ರಾವತಿ ಗ್ರಾಮಾಂತರ ಠಾಣೆಯ ತನಿಖಾಧಿಕಾರಿಯಾದ ಗುರುರಾಜ್ ಎನ್ ಮೈಲಾರ್, ಸಹಾಯಕ ತನಿಖಾಧಿಕಾರಿಗಳಾದ ದಿವಾಕರ್ ಬಸವರಾಜ್ ರವು ಕೊಲೆ ಪ್ರಕರಣವನ್ನು ತ್ವರಿಗತಿಯಲ್ಲಿ ಭೇದಿಸಿ ಚಾರ್ಚ್ ಶೀಟ್ ಸಲ್ಲಿಸಿದ್ದಕ್ಕೆ ಎಸ್ಪಿಯವರು ಪ್ರಶಂಸಿದ್ರು.
ಅಪಪ್ರಚಾರಕ್ಕೆ ಅವಕಾಶ ಇಲ್ಲದಂತೆ ಮಾದ್ಯಮಗಳಿಗೆ ಬ್ರೇಕಿಂಗ್ ನ್ಯೂಸ್
ಎಸ್ಪಿ ಲಕ್ಷ್ಮಿ ಪ್ರಸಾದ್ ಜಾರಿಗೆ ತಂದ ಈ ವಿನೂತನ ಪರಿಕಲ್ಪನೆಗೆ ಎಸ್ಪಿ ಮಿಥುನ್ ಕುಮಾರ್ ಹೊಸ ಲೇಪ ಹಚ್ಚಿದ್ದಾರೆ. ಕೋಮುಗಲಾಟೆಗಳಿರಬಹುದು ಅಥವಾ ಯಾವುದೇ ಕೊಲೆ ಘಟನೆಗಳಿರಬಹುದು ಮಾಧ್ಯಮಗಳಿಗೆ ಸುಳ್ಳು ಸುದ್ದಿ ರವಾನೆಯಾಗುವುದಕ್ಕಿಂತ ಮುಂಚಿತವಾಗಿ ತಮ್ಮ ಪ್ರಾಥಮಿಕ ತನಿಖೆಯ ಮಾಹಿತಿಯನ್ನು ತಕ್ಷಣ ಪತ್ರಕರ್ತರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸುಳ್ಳು ಸುದ್ದಿ ಹರಡದಂತೆ ಚೇಕ್ ಮೇಟ್ ನೀಡಿದೆ. ಎಸ್ಪಿಯವರ ಅಧಿಕೃತ ಮಾಹಿತಿಯನ್ನು ಮಾದ್ಯಮಗಳು ಪ್ರಕಟಿಸುತ್ತಿವೆ. ಯಾರೋ ಸಾರ್ವಜನಿಕರು ನೀಡುವ ಸುಳ್ಳು ಸುದ್ದಿಗಿಂತ ಎಸ್ಪಿಯವರೇ ಖುದ್ದು ನೀಡುವ ಮಾಹಿತಿ ಅಧಿಕೃತವಾಗಿರುತ್ತೆ. ಇದು ಬೆಂಕಿ ಹಚ್ಚುವ ಪ್ರಕರಣಗಳಿಗೆ ತಣ್ಣೀರು ಎರಚುವಂತೆ ಮಾಡಿದೆ. ಏನೇ ಆಗಲಿ ಎಸ್ಪಿ ಮಿಥುನ್ ಕುಮಾರ್ ತಮ್ಮದೇ ಆದ ಕಾರ್ಯ ವೈಖರಿ ಮೂಲಕ ಅಧಿಕಾರಿ ಸಿಬ್ಬಂದಿಗಳಿಗೆ ಪ್ರೇರಣೆ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ತಮ್ಮ ಕೆಲಸ ಭಾರವಾದರೂ..ಅದು ಹತ್ತಿಯ್ಟೆ ಹಗುರ ಮಾಡುತ್ತದೆ ಎಂಬುದಕ್ಕೆ ಉತ್ಸಾಹ ಪ್ರೇರಣೆಯ ನಾಲ್ಕು ಮಾತುಗಳು ಸಾಕು ಎಂಬುದನ್ನು ಮಿಥುನ್ ಕುಮಾರ್ ಮಾಡಿ ತೋರಿಸಿದ್ದಾರೆ.