ತುಂಗಾ ಕಾಲೇಜ್​ ಬಳಿ  ಆಲ್ಟೋ ಕಾರ್​ ಪಲ್ಟಿ

prathapa thirthahalli
Prathapa thirthahalli - content producer

Alto Car Overturns : ತೀರ್ಥಹಳ್ಳಿ :  ತೀರ್ಥಹಳ್ಳಿ  ಪಟ್ಟಣದ ಸಮೀಪದ ತುಂಗಾ ಕಾಲೇಜು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಲ್ಟೋ ಕಾರೊಂದು ಪಲ್ಟಿಯಾದ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ, ಚಾಲಕ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದದ್ದೇ ಈ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ ಎಂದು ತಿಳಿದುಬಂದಿದೆ. 

ಶಿವಮೊಗ್ಗದಲ್ಲಿ RJ ಮತ್ತು ಎಸ್​ ಕೆ ಮರಿಯಪ್ಪರ ಸುದ್ದಿ ಇ-ಪೇಪರ್​ ಓದಿ

ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ನಿವಾಸಿಯೊಬ್ಬರು  ಯಡೂರಿನಿಂದ ತೀರ್ಥಹಳ್ಳಿ ಕಡೆಗೆ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ತುಂಗಾ ಕಾಲೇಜು ಸಮೀಪದತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ರಸ್ತೆಯ ಪಕ್ಕ ಉರುಳಿದೆ. ಇದರಿಂದ ಅದೃಷ್ಟವಶಾತ್  ಕಾರು ಚಾಲಕ ಸೇರಿದಂತೆ ಕಾರಿನೊಳಗಿದ್ದ ಮೂರು ಶ್ವಾನಗಳು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿವೆ.

Alto Car Overturns

ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ಚಾಲಕನ ಗೆಳೆಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಟೋಯಿಂಗ್ ವಾಹನದ ಸಹಾಯದೊಂದಿಗೆ ಪಲ್ಟಿಯಾಗಿದ್ದ ಕಾರನ್ನು ಮೇಲೆತ್ತಿದರು.

Alto Car Overturns

Alto Car Overturns

Share This Article