ಸಫಾರಿ ಬಸ್​ ಮೇಲೆ ಚಿರತೆ ದಾಳಿ! ನಡೆದಿದ್ದೇನು! ವಿಡಿಯೋ ನೋಡಿ

ajjimane ganesh

ನವೆಂಬರ್ 14,  2025 : ಮಲೆನಾಡು ಟುಡೆ :   ಬನ್ನೇರುಘಟ್ಟ ಸಫಾರಿ ಬಸ್ ಮೇಲೆ ಚಿರತೆ ಆಕ್ರಮಣ,  ಚೆನ್ನೈ ಪ್ರವಾಸಿ ಮಹಿಳೆಗೆ ತೀವ್ರ ಗಾಯ, ಸಫಾರಿ ತಾತ್ಕಾಲಿಕ ಸ್ಥಗಿತ!

ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ! 

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಚಿರತೆಯೊಂದು ದಾಳಿ ನಡೆಸಿದೆ. ಇದರಿಂದಾಗಿ ಮಹಿಳೆಯೊಬ್ಬರ ಕೈಗೆ ಗಾಯವಾಗಿದೆ. ಈ ಸಂಬಂಧ ಸಫಾರಿ ಅಧಿಕೃತ ಹೇಳಿಕೆಯನ್ನ ಸಹ ಬಿಡುಗಡೆ ಮಾಡಿದೆ.  ಚಿರತೆಯೊಂದು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದು, ವಾಹನದೊಳಗಿದ್ದ ಚೆನ್ನೈ ಮೂಲದ ವಹೀದಾ ಬಾನು (50) ಎಂಬುವವರು ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೆ  AC ವ್ಯವಸ್ಥೆ ಇಲ್ಲದ ಎಲ್ಲ ಬಸ್‌ ಸಫಾರಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. 

Leopard Attacks Tourist Bus in Bannerghatta Safari, Woman Injured; Non-AC Safaris Suspended
Leopard Attacks Tourist Bus in Bannerghatta Safari, Woman Injured; Non-AC Safaris Suspended

ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್​ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ  ನಡೆದಿದ್ದೇನು?

ವಹೀದಾ ಬಾನು ತಮ್ಮ ಪತಿ ಮತ್ತು ಮಗನೊಂದಿಗೆ ಪ್ರವಾಸಕ್ಕೆ ಬಂದಿದ್ದು, ಸಫಾರಿ ವೀಕ್ಷಣೆಯಲ್ಲಿದ್ದರು. ಈ ವೇಳೆ ವಾಹನದ ಮುಂದೆ ರಸ್ತೆಯಲ್ಲಿ ವಿರಮಿಸುತ್ತಿದ್ದ ಚಿರತೆಯೊಂದು ವಾಹನದ ಬಳಿ ಬಂದು ಬಸ್​ನ್ನು ಹತ್ತಲು ಯತ್ನಿಸಿದೆ. ಅಲ್ಲದೆ ಕಿಟಕಿ ಮೆಸ್​ ಹಾಗೂ ವಿಂಡೋ ಡೋರ್​ನ ನಡುವೆ ಇದ್ದ ಒಂದು ಕೈ ಹೋಗುವಷ್ಟು ಜಾಗದಲ್ಲಿ ಚಿರತೆ ಚೋಟು ಹಾಕಿದೆ. ಚಿರತೆಯ ಈ ಅನಿರೀಕ್ಷಿತ ದಾಳಿಯಿಂದಾಗಿ ಚಿರತೆಯ ಉಗುರುಗಳು ಮಹಿಳೆಯ ಕೈಯನ್ನ ಗಾಯಗೊಳಿಸಿದೆ. ಚಿರತೆಯು ಮಹಿಳೆಯ ತಲ್ವಾರ್​ ಕಮೀಜ್​ನ ತೊಳಿನ ಬಟ್ಟೆಯನ್ನು ಎಳೆದುಕೊಂಡು ಕೆಳಕ್ಕೆ ಇಳಿದಿದೆ. ಇನ್ನೂ ಮಹಿಳೆಯನ್ನು ಜಿಗಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Leopard Attacks Tourist Bus in Bannerghatta Safari, Woman Injured; Non-AC Safaris Suspended
Leopard Attacks Tourist Bus in Bannerghatta Safari, Woman Injured; Non-AC Safaris Suspended

View this post on Instagram

A post shared by KA on line (@kaonlinekannada)

ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಯಲ್ಲೋ ಅಲರ್ಟ್! ಹವಾಮಾನ ಇಲಾಖೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Leopard Attacks Tourist Bus in Bannerghatta Safari, Woman Injured; Non-AC Safaris Suspended

Share This Article