ಜನವರಿ 26ರಿಂದ 30ರವರೆಗೆ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ! ಪೂರ್ತಿ ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Dec 30, 2023  |   ಜ.26ರಿಂದ 30ರವರೆಗೆ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 2024ರ ಜ.16 ರಿಂದ 30ರೊಳಗೆ ಪ್ರತಿ ವರ್ಷದಂತೆ ಆಯಾ ಜಿಲ್ಲಾ ಹಂತದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲು ಕ್ರಮ ವಹಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪಿಯು ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇ ಶಕರಿಗೆ ಸೂಚಿಸಿದೆ.

II PUC Preparatory Exam,ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ,

READ  : ಪ್ರಥಮ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ! ಯಾವಾಗಿನಿಂದ ಎಕ್ಸಾಂ? ವಿವರ ಇಲ್ಲಿದೆ

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಮಂಡಳಿಯ ಅಧ್ಯ ಕ್ಷರು, ಈಗಾಗಲೇ ಮಾ.2ರಿಂದ22ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದಕ್ಕೆ ಮುನ್ನ ಜ.16 ರಿಂದ 30 ರೊಳಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲು ಕ್ರಮ ವಹಿಸಬೇಕು. ಮಂಡಳಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ನೀಲನಕ್ಷೆಗಳ ಆಧಾರದ ಮೇಲೆ ವಿಭಾಗ ಮಟ್ಟದಲ್ಲಿ ತರಬೇತಿ ಹೊಂದಿದ ಉಪನ್ಯಾಸಕರನ್ನು ಬಳಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಗೆ ಪತ್ರಿಕೆಗಳನ್ನು ಸಿದ್ಧಪಡಿಸಕೊಳ್ಳಬೇಕು ಎಂದು ಡಿಡಿಪಿಯುಗಳಿಗೆ ಸೂಚಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor