ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಇಂದಿನ ಜಾತಕ, ದಿನಭವಿಷ್ಯ | ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಏಕಾದಶಿ, ಶತಭಿಷ ನಕ್ಷತ್ರ. ರಾಹು ಕಾಲ: ಬೆಳಿಗ್ಗೆ 9:00 ರಿಂದ 10:30 ರವರೆಗೆ.ಯಮಗಂಡ ಕಾಲ: ಮಧ್ಯಾಹ್ನ 1:30 ರಿಂದ 3:00 ರವರೆಗೆ
ಇಂದಿನ ದಿನ ಭವಿಷ್ಯ
ಮೇಷ : ವಿದ್ಯಾರ್ಥಿಗಳಿಗೆ ಉತ್ತಮ ದಿನ. ಶ್ರದ್ಧೆ ಇರಲಿ. ಬೆಲೆಬಾಳುವ ವಸ್ತುಗಳ ಖರೀದಿ, ವಾಹನ ಖರೀದಿ ಪ್ರಯತ್ನ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ.

ವೃಷಭ : ಅನುಕೂಲಕರ ದಿನ. ಲಾಭ ದೊರೆಯಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ.ಸಂತೋಷದ ಸುದ್ದಿ ಕೇಳುವ ಯೋಗ. ವ್ಯಾಪಾರ ಮತ್ತು ಉದ್ಯೋಗದ ಹಳೆಯ ಸಮಸ್ಯೆ ಇಂದು ಪರಿಹಾರವಾಗಲಿವೆ.
ಮಿಥುನ: ಅಂದುಕೊಂಡಿದ್ದು ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ಅನಗತ್ಯ ಅಡಚಣೆ ಎದುರಾಗಬಹುದು. ಸ್ನೇಹಿತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರೋಗ್ಯದ ಕಡೆ ಗಮನ ಕೊಡುವುದು ಅಗತ್ಯ. ವ್ಯಾಪಾರ ವಹಿವಾಟು ಹಾಗೂ ಉದ್ಯೋಗದಲ್ಲಿ ಇಂದು ಜವಾಬ್ದಾರಿಯ ಹೊರೆ ಜಾಸ್ತಿ
ಕರ್ಕಾಟಕ : ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆ.ಕೆಲಸದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುವುದಿಲ್ಲ. ದೂರ ಪ್ರಯಾಣ. ಸಂಬಂಧಿಕರೊಂದಿಗೆ ವಾದ-ವಿವಾದ. ವ್ಯವಹಾರದಲ್ಲಿ ನಿರಾಸೆ. ಕೆಲಸದ ಸ್ಥಳದಲ್ಲಿ ಒತ್ತಡ
ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
ಸಿಂಹ : ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸು. ಸಂಬಂಧಿಕರು ಮತ್ತು ಆತ್ಮೀಯ ಸ್ನೇಹಿತರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ವ್ಯವಹಾರವು ಉತ್ತಮ ಸ್ಥಿತಿಯಲ್ಲಿರಲಿದೆ. ಉದ್ಯೋಗದಲ್ಲಿ ಕೆಲಸದ ಒತ್ತಡ. ಆರ್ಥಿಕವಾಗಿ ಲಾಭ
ಕನ್ಯಾ: ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವಿರಿ ,ದೇವಾಲಯಗಳಿಗೆ ಭೇಟಿ ಆದಾಯದ ಮೂಲ ಶೋಧ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹೊಸ ಭರವಸೆ

ತುಲಾ: ಕೆಲವು ಆರ್ಥಿಕ ತೊಂದರೆ. ಸಾಲ ಪಡೆಯುವ ಪ್ರಯತ್ನ ವಿಳಂಬವಾಗಬಹುದು. ಕೆಲಸದಲ್ಲಿ ಅಡೆತಡೆ. ಕಲಹ ನಡೆಯಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲವು ಸಮಸ್ಯೆ ಎದುರಾಗುವ ಸಂಭವವಿದೆ.
Nov 1st Horoscope
ವೃಶ್ಚಿಕ : ಅನಿರೀಕ್ಷಿತ ಪ್ರಯಾಣ. ಕುಟುಂಬದಲ್ಲಿ ಕೆಲ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವ್ಯವಹಾರದಲ್ಲಿ ನಿರೀಕ್ಷಿಸಿದ ಫಲಿತಾಂಶ. ಉದ್ಯೊಗದಲ್ಲಿ ಹೊಸ ಜವಾಬ್ದಾರಿ.
ಧನು: ವ್ಯಾಪಾರ ವಹಿವಾಟು ಚುರುಕಾಗಿ ನಡೆಯಲಿವೆ. ದೂರ ಪ್ರಯಾಣ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವಿರಿ. ಆರ್ಥಿಕವಾಗಿ ಉತ್ತಮ ಲಾಭ ದೊರೆಯುತ್ತದೆ. ಕೆಲಸದ ಸ್ಥಳದಲ್ಲಿ ಜವಾಬ್ದಾರಿ ವಿಶೇಷ ಗೌರವ ತರಲಿದೆ.
ನಾನೂ ಸಹ ಆಗ್ತೀನಿ! ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ!
ಮಕರ : ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ. ವಾದ-ವಿವಾದಗಳಿಂದ ಸಂಪೂರ್ಣವಾಗಿ ದೂರವಿರಿ. ಪ್ರಯಾಣ ಅನಿವಾರ್ಯವಾಗಬಹದು, ವ್ಯವಹಾರದಲ್ಲಿ ಸಾಮಾನ್ಯದಿನ. ಕೆಲಸದಲ್ಲಿ ಹೊಸ ಜವಾಬ್ದಾರಿ
ಕುಂಭ : ಹೊಸ ಉದ್ಯೋಗ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ದಿನ, ವ್ಯವಹಾರ ಭರವಸೆ ನೀಡುವಂತಹ ಪ್ರಗತಿಯನ್ನು ಕಾಣಲಿವೆ. ಆಸ್ತಿ-ಸಂಬಂಧಿತ ವಿವಾದ ಬಗೆಹರಿಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲವು ಬದಲಾವಣೆ ಆಗಬಹುದು.

ಮೀನ : ಆರ್ಥಿಕ ತೊಂದರೆ. ಹಠಾತ್ ಪ್ರಯಾಣ. ಸಂಬಂಧಿಕರೊಂದಿಗೆ ಜಗಳ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ಆಲೋಚನೆಗಳು ಸ್ಥಿರವಾಗಿಲ್ಲದೆ ಗೊಂದಲಕ್ಕೆ ಕಾರಣವಾಗಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ದಿನ ಚೆನ್ನಾಗಿರಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
