BREAKING NEWS | ಬ್ಯಾಂಕ್ ಲೋನ್​ ನವರು ಎಂದು ಮನೆಗೆ ನುಗ್ಗಿ ದರೋಡೆ ! ಅಪರಿಚಿತರ ಬಗ್ಗೆ ಹುಷಾರ್!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Dec 12, 2023  |   ಶಿವಮೊಗ್ಗ ನಾಗರಿಕರು ಆತಂಕ ಪಡುವಂತಹ ಘಟನೆಯೊಂದು ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಲಿಮಿಟ್ಸ್ ನಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರನ್ನ ಬ್ಯಾಂಕ್ ಲೋನ್ ಸಿಬ್ಬಂದಿ ಎಂದು ಹೇಳಿಕೊಂಡು ಬಂದ ತಂಡವೊಂದು ಆತನ ಮನೆಯಲ್ಲಿ ದರೋಡೆ ಮಾಡಿದೆ. 

ಹೊಳೆಹೊನ್ನೂರು ಪೊಲೀಸ್ ಸ್ಟೇಷನ್

ನಿನ್ನೆ ಅಂದರೆ ದಿನಾಂಕ 11/12/2023  ರಂದು ಈ ಘಟನೆ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್​ ದಾಖಲಾಗಿದೆ. ಅದರಂತೆ ನೋಡುವಾದರೆ, ದೂರುದಾರರನ್ನ ಅವರದ್ದೆ ಮನೆಯಲ್ಲಿ ದರೋಡೆ ಮಾಡಲಾಗಿದೆ. 

ಇಲ್ಲಿನ ಗ್ರಾಮವೊಂದರ ನಿವಾಸಿಯು ತಮ್ಮ ತಾಯಿಯವರನ್ನ ನಿನ್ನೆ ಬೆಳಗ್ಗೆ  ಶಿವಮೊಗ್ಗ ರೈಲ್ವೆ ಸ್ಟೇಶನ್ ಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದಾರೆ. ಬಳಿಕ ಅವರ ತಂದೆ ಶಿವಮೊಗ್ಗಕ್ಕೆ ಹೊರಟಿದ್ದಾರೆ. ಹಾಗಾಗಿ ಮನೆಯಲ್ಲಿ ದೂರುದಾರರು ಮಾತ್ರ ಉಳಿದುಕೊಂಡಿದ್ದರು. ಸುಮಾರು  01:15 ಗಂಟೆ ಸಮಯದಲ್ಲಿ ಯಾರೋ ಎರಡು ಜನ ಅಪರಿಚಿತರು ಮನೆಯ ಕಾಂಪೌಂಡ್‌ ಚಿಲಕವನ್ನು ತಗೆದು ಪೋಟಿಕದ ಹತ್ತಿರ ಬಂದಿದ್ದಾರೆ. 

ಮನೆಗೆ ಬಂದ ಅಪರಿಚಿತರನ್ನು ದೂರುದಾರರು ಯಾರು ಏನು ಎತ್ತ ವಿಚಾರಿಸಿದ್ದಾರೆ. ಈ ವೇಳೆ ಅಪರಿಚಿತರು ತಮ್ಮನ್ನ ಬ್ಯಾಂಕಿನ ಲೋನ್ ವಿಚಾರಣೆ ಮಾಡುವವರೆಂದು ಪರಿಚಯಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರರು ಯಾವ ಬ್ಯಾಂಕ್​ನವರು ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಅಪರಿಚಿತನೊಬ್ಬ ಕುಡಿಯಲು ನೀರು ಕೇಳಿದ್ದಾನೆ. 

READ : ಇಸ್ಪೀಟು ನಿತ್ಯ ಕೋಟಿ ವಹಿವಾಟು! ಭದ್ರಾವತಿಯಲ್ಲಿ ಎಲ್ಲಾ ಮೂಮೂಲು! ಉಕ್ಕಿನ ನಗರಕ್ಕೆ ಏನಾಗಿದೆ?

ನೀರು ಕೇಳಿದ್ರಲ್ಲಾ ಎಂದು ದೂರುದಾರರು, ಮನೆಯ ಅಡುಗೆ ಮನೆಗೆ ಹೋಗಿ ನೀರು ತರಲು ಮುಂದಾಗಿದ್ದಾರೆ. ಈ ವೇಳೆ ದೂರುದಾರರ ಬೆನ್ನಿಗೆ ಬಂದ ಅಪರಿಚಿತರ ಅಡುಗೆ ಮನೆಯೊಳಗೆ ಹಿಡಿದುಕೊಂಡಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ. ಹಣ ಕೊಡುವಂತೆ ಬೆದರಿಸಿದ್ದಾರೆ. ಬಳಿಕ ಬೀರುವಿನ ಬೀಗ ತೆಗೆದುಕೊಂಡು ಬೀರುವಿನಲ್ಲಿದ್ದ  ಒಟ್ಟು 1,13,000/- ರೂ ಮೌಲ್ಯದ ಬಂಗಾರ ನಗದು ಹಣ ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ವೇಳೆ ದೂರುದಾರರು ಅಪರಿಚಿತರ ಏಟಿನಿಂದ ತಲೆಸುತ್ತು ಬಂದು ಬಿದ್ದಿದ್ದಾರೆ.

ಸದ್ಯ ಈ ಘಟನೆ ಬಗ್ಗೆ ಹೊಳೆಹೊನ್ನೂರು ಪೊಲೀಸರು ಗಂಭೀರ ವಿಚಾರಣೆಗೆ ಮುಂದಾಗಿದ್ದ ಪ್ರಕರಣದ ಸೂಕ್ಷ್ಮತೆಗಳನ್ನ ಅವಲೋಕಿಸ್ತಿದ್ದಾರೆ. ಅಲ್ಲದೆ, ಈ ಘಟನೆ ಬೆನ್ನಲ್ಲೆ ಸಮೀಪದ ಊರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.  


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor