SHIVAMOGGA | SHIMOGA JAIL| Dec 8, 2023 | ಶಿವಮೊಗ್ಗದ ಗಾಜನೂರು ಸಮೀಪ ಅಪಘಾತವೊಂದು ಸಂಭವಿಸಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ
ಇಲ್ಲಿನ ಹಳೆಹೊನ್ನಾಪುರದ ಕೆರೆ ಸಮೀಪ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಗೂಡ್ಸ್ ವಾಹನಕ್ಕೆ ಕಾರೊಂದು ಡಿಕ್ಕಿಯಾಗಿದೆ. ತೋಟಗಾರಿಕೆ ಇಲಾಖೆಗೆ ಸೇರಿದ ಗೂಡ್ಸ್ ವಾಹನವೂ ಇಲ್ಲಿನ ನವೋದಯ ಶಾಲೆಗೆ ಹಣ್ಣು ಮತ್ತು ತರಕಾರಿ ಪೂರೈಕೆ ಮಾಡಲು ತೆರಳುತ್ತಿತ್ತು
READ : ಪತಿಯೊಂದಿಗೆ ಕುಪ್ಪಳ್ಳಿಗೆ ಬಂದ ನಟಿ ಪೂಜಾ ಗಾಂಧಿ | ಫೋಟೋಗಳು ವೈರಲ್
ಈ ವೇಳೆ ಇನ್ನೊಂದು ಕಡೆಯಿಂದ ಬಂದ ಕಾರು ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡು ವಾಹನಗಳು ಜಖಂಗೊಂಡಿದೆ. ಇನ್ನೂ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




