SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS
SHIVAMOGGA | ಶಿವಮೊಗ್ಗದ ಹೊಳೆಹೊನ್ನೂರು ಸಮೀಪ ಕಾರೊಂದು ಅಫಘಾತಕ್ಕೀಡಾಗಿದೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು ಮೂವರಿಗೆ ಗಾಯವಾದ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ತಾಲ್ಲೂಕು ಪಿಳ್ಳಂಗೇರಿ ಗ್ರಾಮ
ಇಲ್ಲಿ ಹೆದ್ದಾರಿ ಸಮೀಪದಲ್ಲಿಯೇ ಇರುವ ಗಣಪತಿ ದೇವಸ್ಥಾನದ ಕಟ್ಟ್ಗೆ ಕಾರು ಡಿಕ್ಕಿಯಾಗಿದೆ. ಶಿವಮೊಗ್ಗದಲ್ಲಿ ಯಾವುದೋ ಕೆಲಸದ ನಿಮಿತ್ತ ಬಂದವರು ವಾಪಸ್ ಹೊರಟಿದ್ದರು.

ಚನ್ನಗರಿ ಅರಶಿನಘಟ್ಟ
ಕಾರಿನಲ್ಲಿದ್ದವರು ಚನ್ನಗಿರಿಯ ಅರಿಶಿನಘಟ್ಟಕ್ಕೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಈ ಘಟನೆ ಸಂಭವಿಸಿದೆ. ಪಿಳ್ಳಂಗೇರಿ ಗ್ರಾಮದ ಸಮೀಪ ಚಾಲಕ ನಿಯಂತ್ರಣ ತಪ್ಪಿ, ಕಾರು ದೇವಸ್ಥಾನದ ಕಟ್ಟೆಗೆ ಡಿಕ್ಕಿ ಹೊಡೆಡಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.

READ : ಸೀದಾ ಮನೆಗೆ ನುಗ್ಗಿದ ಕಾರು! ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳಕ್ಕೆ ಹೋಗ್ತಿರುವಾಗ ಘಟನೆ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ
ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಕರಣ ನಮೂದಿಸಿಕೊಂಡಿದ್ಧಾರೆ. ಇನ್ನೂ ಘಟನೆ ವೇಳೆ ಗಣಪತಿ ದೇವಸ್ಥಾನದ ಕಟ್ಟೆ ಮೇಲೆ ಯಾರು ಕೂತಿರಲಿಲ್ಲ. ಹೀಗಾಗಿ ಹೆಚ್ಚಿನ ಅಪಾಯವಾಗಲಿಲ್ಲ ಎನ್ನುತ್ತಾರೆ ಸ್ತಳೀಯರು.