Instagram froud : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯವಕ ಯುವತಿಯರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಕೇವಲ ಅದರ ಮೂಲಕ ಆಗುವ ಒಂದು ಪರಿಚಯ ಲವ್ ಆಗಿ ಮದುವೆಯಾಗುವವರೆಗೂ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಆ ಲವ್ ಹಾಗೂ ಮದುವೆಗಳು ಸಕ್ಸ್ಸ್ ಆದರೆ ಇನ್ನು ಕೆಲವೊಮ್ಮೆ ಫೇಲ್ಯೂರ್ ಆಗುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಒಬ್ಬ ವಿವಾಹಿತ ಮಹಿಳೆ ಇನ್‌ಸ್ಟಾಗ್ರಾಮ್ ಪ್ರೀತಿಗೆ ಬಿದ್ದು ಮೋಸ ಹೋಗಿದ್ದಾಳೆ.
Instagram froud : ಅಸ್ಸಾಂನ ಗುವಾಹಟಿಯ ವಿವಾಹಿತ ಮಹಿಳೆಯೊಬ್ಬಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜಮೀರ್ ಪಾಷಾ ಎಂಬಾತನ ಪರಿಚಯವಾಗಿದೆ. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಜಮೀರ್ ಪಾಷಾ ಕೋಲಾರ ಜಿಲ್ಲೆಯ ಬಂಗಾರಪೇಟೆಯ ನ್ಯೂ ಟೌನ್ ಬಡಾವಣೆಯ ನಿವಾಸಿ. ಆತನನ್ನು ಮದುವೆಯಾಗುವ ಉದ್ದೇಶದಿಂದ ಆಕೆ ತನ್ನ ಪತಿಯನ್ನು ಬಿಟ್ಟು ಗುವಾಹಟಿಯಿಂದ ಬಂಗಾರಪೇಟೆಗೆ ಬಂದಿದ್ದಾಳೆ. ಜಮೀರ್ ಪಾಷಾ ಕೂಡ ಅವಳನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ.
ಅವರಿಬ್ಬರೂ ಕೆಲವು ದಿನಗಳ ಕಾಲ ಒಟ್ಟಿಗೆ ಇದ್ದರು. ಮಹಿಳೆಯು ತನ್ನ ಗಂಡನ ಮನೆಯಿಂದ ಬಂಗಾರ ಹಾಗೂ ಹಣವನ್ನು ತಂದಿದ್ದಳು. ಆದರೆ ಕೆಲ ದಿನಗಳ ನಂತರ ಆಕೆಗೆ ಪ್ರಿಯಕರನ ನಿಜ ಬಣ್ಣ ಬಯಲಾಗಿದೆ. ಆತ ಆಕೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು, ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಜಮೀರ್ ಪಾಷಾನೊಂದಿಗೆ ಇರುವುದು ಸಾಧ್ಯವಿಲ್ಲ ಎಂದು ಸೋನಿಯಾ ಶರ್ಮಾಗೆ ಅರಿವಾಗಿದೆ. ಕೂಡಲೇ ಆಕೆ ಜಮೀರ್ ಪಾಷಾನ ಮನೆಯಿಂದ ತಪ್ಪಿಸಿಕೊಂಡು ಬಂಗಾರಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಬಂಗಾರಪೇಟೆ ಪೊಲೀಸರು ಆ ಮಹಿಳೆಯನ್ನು ರಕ್ಷಿಸಿ, ಮಹಿಳಾ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ್ದಾರೆ.
Instagram froud


