Theft case : ದೇವಸ್ಥಾನಗಳಲ್ಲಿ ಚಿನ್ನಾಭರಣ ಕದ್ದ ಕಳ್ಳ ಅಂದರ್: ಮಾಳೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ದೇವಸ್ಥಾನಗಳಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಮಾಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗದ ಸವಳಂಗ ನಿವಾಸಿ ಸಂದೀಪ್ (22) ಎಂದು ಗುರುತಿಸಲಾಗಿದೆ.
theft case ಸಂದೀಪ್ ಆಗಸ್ಟ್ 2ರಂದು ತೀರ್ಥಹಳ್ಳಿಯ ಹಣೆಗೆರೆ ಕಟ್ಟೆಯ ಗರಗ ಬಳಿ ಇರುವ ದೇವಸ್ಥಾನವೊಂದರಲ್ಲಿ 2 ಚಿನ್ನದ ತಾಳಿ ಹಾಗೂ 5 ಚಿನ್ನದ ಗುಂಡುಗಳನ್ನು ಕಳವು ಮಾಡಿದ್ದ. ಇದಾದ ಬಳಿಕ ಆಗಸ್ಟ್ 22ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕೃತ್ಯ ಎಸಗಿ, 2 ಚಿನ್ನದ ತಾಳಿ ಮತ್ತು ಒಂದು ಚಿನ್ನದ ಮೂಗುತಿಯನ್ನು ಕದ್ದು ಪರಾರಿಯಾಗಿದ್ದ. ಈ ಎರಡೂ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು.
ಮಾಳೂರು ಪೊಲೀಸರು ತನಿಖೆ ನಡೆಸಿ, ಕಳ್ಳತನ ಮಾಡಿ ಪರಾರಿಯಾಗಿದ್ದ ಸಂದೀಪ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ಆರೋಪಿಯು ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಅರವಿಂದ್ ಕಲಗುಚ್ಚಿ, ಸಿಪಿಐ, ಇಮ್ರಾನ್ ಬೇಗ್, ಪಿಎಸ್ಐ ಕುಮಾರ್ ಕೂರಗುಂದ, ಪಿಎಸ್ಐ ಶಿವಾನಂದ ಧರೆನವರ್, ಹೆಚ್ ಸಿ ಸುರಕ್ಷಿತ್ , ಪಿಸಿ ಸಂತೋಷ್ ಕುಮಾರ್, ಪಿಸಿ ವಿಕ್ರಂ ಹೆಚ್ ಪಿ ಭಾಗಿಯಾಗಿದ್ದರು.
