Shivamogga breaking news june 24 / ಮೊಬೈಲ್ ವಿಚಾರಕ್ಕೆ ಎಎ ಸರ್ಕಲ್ನಲ್ಲಿ ನಡೀತಾ ಕಿಡ್ನಾಪ್? ಶಿವಮೊಗ್ಗದ ಕ್ರೈಂ ಸುದ್ದಿಗಳು
ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟ್ ಪಟ್ ನ್ಯೂಸ್ ಇಲ್ಲಿದೆ.
Shivamogga breaking news june 24 / ಸುದ್ದಿ 1: ಮೊಬೈಲ್ ವಿಚಾರಕ್ಕೆ ಯುವಕನ ಅಪಹರಣ, ಜೀವಬೆದರಿಕೆ ಆರೋಪ
ಹಳೇ ಮೊಬೈಲ್ ಮಾರಾಟದ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಯುವಕನೊಬ್ಬನನ್ನು ಅಪಹರಿಸಿ, ಜೀವಬೆದರಿಕೆ ಹಾಕಿದ ಪ್ರಕರಣದಲ್ಲಿ ಏಳು ಜನರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಲ್ಲಿನ ಅಮೀರ್ ಅಹ್ಮದ್ ಸರ್ಕಲ್ನ ಸಮೀಪದಲ್ಲಿರುವ ಸೆಕೆಂಡ್ ಹ್ಯಾಂಡ್ ಮೊಬೈಲ್ ಅಂಗಡಿಯಾತನನ್ನು ಮೊಬೈಲ್ ವಿಚಾರಕ್ಕೆ ಬೆದರಿಸಿ, ಆತನನ್ನು ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ ಆರೋಪ ಸಂಬಂದ ಈ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಸಂತ್ರಸ್ತಿನಿಗೆ ಏಟು ಬಿದ್ದಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡಪೇಟೆ ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ.
ಸುದ್ದಿ 2: ಅಶ್ಲೀಲ ಚಿತ್ರ ಎಡಿಟ್ ಮಾಡಿ ಇನ್ಸ್ಪಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ ಆರೋಪ

ಯುವತಿಯೊಬ್ಬಳ ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಎಡಿಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ ಆರೋಪ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ್ರೆಗೆ ಅಪರಚಿತ ಖಾತೆಯಿಂದ ವ್ಯಕ್ತಿಯೊಬ್ಬ ತನ್ನ ಪ್ರೀತಿಸುವಂತೆ ಮೆಸೇಜ್ ಮಾಡಿದ್ದಷ್ಟೆ ಅಲ್ಲದೆ ಆಕೆ ಅಕೌಂಟ್ ಬ್ಲಾಕ್ ಮಾಡಿದ್ದರೂ ಬೇರೆ ಬೇರೆ ಖಾತೆ ತೆರೆದು, ಆಕೆ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಮ್ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಯುವತಿ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಲಾಗಿದೆ.