by raghavendra shivamogga 19-06-25 : ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ದಂಧೆಯನ್ನು ನಿಲ್ಲಿಸಿ | ಬಿವೈ ರಾಘವೇಂದ್ರ 

ಹಂಚಿಕೊಳ್ಳಿ
WhatsApp Facebook X Telegram
by raghavendra shivamogga
by raghavendra shivamogga

by raghavendra shivamogga ಶಿವಮೊಗ್ಗ : ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ದಂಧೆ ಹೆಚ್ಚಾಗಿದ್ದು, ಇದರಿಂದ ಅಧಿಕಾರಿಗಳು ಕಣ್ಣೀರು ಹಾಕುತ್ತಿದ್ದಾರೆ.ಅಧಿಕಾರಿಗಳಿಗೆ ವರ್ಗಾವಣೆ ಮೂಲಕ ಹಿಂಸೆ ನೀಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಅಧಿಕಾರಿಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಎರಡು ವರ್ಷಗಳವರೆಗೆ ವರ್ಗಾವಣೆ ಮಾಡಬಾರದು ಎಂಬ ನಿಯಮವಿದೆ. ಆದರೆ ಈ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಏಕೆ ವರ್ಗಾವಣೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕೆಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳಿಗೆ ನಿಮ್ಮ ಸಮಯ ಮುಗಿದಿದೆ ನಿಮ್ಮನ್ನು ಬೇರೆಡೆಗೆ ವರ್ಗಾವಣೆ  ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿರುವುದು ತಿಳಿದು ಬಂದಿದೆ. ಇದರಿಂದಾಗಿ ಅಧಿಕಾರಿಗಳು ಅಸಹಾಯಕರಾಗಿ ತಮ್ಮ ಬಳಿ ಹಾಗೂ ಶಾಸಕರ ಮನೆ ಬಳಿ ಬಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳೆ ಹೀಗಾದರೆ, ನೀವು ಮಾಡುವ ಒಳ್ಳೆಯ ಕೆಲಸಗಳೂ ಸಹ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಈ ರೀತಿಯ ಹಿಂಸೆಯಿಂದ ಅನೇಕ ಅಧಿಕಾರಿಗಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಅಧಿಕಾರಿಗಳಿಗೆ ವರ್ಗಾವಣೆ ಮೂಲಕ ಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಅವರು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

by raghavendra shivamogga : ಪಕ್ಷ ಶುದ್ದವಾಗಿಯೇ ಇದೆ.

ಇನ್ನು ಬಿಜೆಪಿ  ಪಕ್ಷ ಶುದ್ದ ಆದಮೇಲೆ ಬಿಜೆಪಿಗೆ ಬರುತ್ತೇನೆ ಎಂಬ ಕೆ ಎಸ್​ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು. ಪಕ್ಷ ಶುದ್ಧವಾಗಿರಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಅದಕ್ಕಾಗಿಯೇ ನಮ್ಮ ಎಲ್ಲಾ ಕಾರ್ಯಕರ್ತರು ಶ್ರಮ ಹಾಕಿ ಪಕ್ಷವನ್ನು ಸಂಘಟಿಸುತ್ತಿದ್ದರೆ. ಯಾರೋ ಹೇಳಿದ್ರೂ ಅಂತಾ ಅಲ್ಲ. ಎಲ್ಲರ ಅಪೇಕ್ಷೆ ಕೂಡ ಅದೇ.ಪಕ್ಷ ಶುದ್ಧವಾಗಿಯೇ ಇದೆ. ಒಳ್ಳೆಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಕೆಲಸ ರಾಜ್ಯದ ನಾಯಕರು ಮಾಡುತ್ತಾರೆ ಎಂದರು.

by raghavendra shivamogga : ಮೆಕ್ಕೆ ಜೋಳ ಬೆಳೆ ಹಾನಿಗೆ ವಿಶೇಷ ಪ್ರಕರಣದ ರೀತಿ ಪರಿಹಾರ ನೀಡಬೇಕು

ಶಿವಮೊಗ್ಗದಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತ  ಬಹಳ ಪ್ರಮಾಣದಲ್ಲಿ ಹಾಳಾಗಿದೆ. ಎನ್ಡಿಆರ್ಎಫ್ ನಿಯಮದಡಿ ನಿಂತ ಬೆಳೆ ಹಾಳಾದರೆ ಪರಿಹಾರ ಕೊಡಬಹುದು. ಆದರೆ ಬೆಳೆ ಕಟಾವು ಮಾಡಿದ ನಂತರ ಹಾಳಾದರೆ ಅದಕ್ಕೆ ಪರಿಹಾರ ಕೊಡೋಕೆ ಅವಕಾಶ ಇಲ್ಲ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಸರ್ಕಾರ ರೈತರಿಗೆ ಅನುಕೂಲ ಆಗುವ ಕೆಲಸ ಸರ್ಕಾರ ಮಾಡಬೇಕು. ವಿಶೇಷ ಪ್ರಕರಣದ ರೀತಿ ಭತ್ತ, ಮೆಕ್ಕೆಜೋಳಕ್ಕೆ ಪರಿಹಾರ ನೀಡಬೇಕು ಎಂದು ಬಿವೈ ರಾಘವೇಂದ್ರ ಹೇಳಿದರು.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor