today news shivamogga 18-06-2025 : ಹೆಂಡತಿಯ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ | ಆರೋಪಿಗೆ ಕೋರ್ಟ್​ ನೀಡಿದ ಶಿಕ್ಷೆ ಏನು ಗೊತ್ತಾ

today news shivamogga ಜೂನ್​ 02 ರಂದು ಶಿವಮೊಗ್ಗ ವಿದ್ಯಾನರರ ನಿವಾಸಿ ರಾಘವೇಂದ್ರ ಎಂಬಾತ ತನ್ನ ಹೆಂಡತಿ ಹಾಗೂ ಆಕೆಯ ತಾಯಿಯ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈಗ ಆತನಿಗೆ ಘನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ಸಾವಿರ ದಂಡ ಹಾಗೂ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

today news shivamogga : ಏನಿದು ಪ್ರಕರಣ 

ಆರೋಪಿ ರಾಘವೇಂದ್ರ ಹಾಗೂ ಆತನ ಪತ್ನಿಗೆ ವಿಚ್ಚೇದನವಾಗಿದ್ದು, ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದರ ನಡುವೆ ರಾಘವೇಂದ್ರ ಆಗಾಗ ಹೆಂಡತಿಯ ಮನೆಗೆ ಹೋಗಿ ಹೆಂಡತಿ ಮಕ್ಕಳು ಮತ್ತು ಆಕೆಯ ತಾಯಿಯ ಜೊತೆಗೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಹಾಗೆಯೇ ಹಳೆ ದ್ವೇಶದ ಹಿನ್ನಲೆ 2017 ರ ಜೂನ್​ 02 ರಂದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗುಡಿ  ಯಲ್ಲಿರುವ ತನ್ನ ಹೆಂಡತಿಯ ಮೆನಗೆ ಹೋಗಿ ಆಕೆ ಮತ್ತು ಆಕೆಯ ತಾಯಿಯನ್ನು ಕೊಲೆ ಮಾಡುವ ಉದ್ದೇಶದಿಂದ  ಚಾಕುವಿನಿಂದ ಮಾರಣಾಮತಿಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಇಮ್ರಾನ್ ಬೇಗ್, ಪಿಎಸ್ಐ  (ಹಾಲಿ ಪೊಲೀಸ್ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ) ರವರು ಪ್ರಕರಣದ  ತನಿಖೆ ಪೂರೈಸಿ ಆರೋಪಿತನ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. 

 ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶಾಂತರಾಜ್, ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದು,   ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ,  ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು ಇಂದು ರಂದು ಪ್ರಕರಣದ ಆರೋಪಿತನಾದ  ರಾಘವೇಂದ್ರ ನಿಗೆ  2 ವರ್ಷ ಸಾಧಾ ಕಾರಾಗೃಹವಾಸ ಶಿಕ್ಷೆ ಮತ್ತು ರೂ 20 ಸಾವಿರ ದಂಡ ವಿಧಿಸಿ ಆದೇಶಿಸಿರುತ್ತಾರೆ.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು