ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದ 61 ವರ್ಷದ ಚಿನ್ನಸ್ವಾಮಿ ಎಂಬ ವ್ಯಕ್ತಿ ಏ.25 ರಂದು ಮನೆಗೆಂದು ಹೋದವರು ಕಾಣೆಯಾಗಿರುತ್ತಾರೆ. ಈತ 5.2 ಅಡಿ ಎತ್ತರ, ಕೋಲುಮುಖ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತಮಿಳು ಮಾತನಾಡುತ್ತಾರೆ. ಕೇಂದ್ರದ ಹೊರಗೆ ಹೋಗುವಾಗ ಕಪ್ಪು ಮತ್ತು ಬಿಳಿ ಚೆಕ್ಸ್ ತುಂಬು ತೋಳಿನ ಶರ್ಟ್, ನೀಲಿ ಪ್ಯಾಂಟ್ ಧರಿಸಿರುತ್ತಾರೆ.
ಈತನ ಬಗ್ಗೆ ಸುಳಿವು ಇದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/261418/ 9480803332/ 9480803350 ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

