ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮಕರ ಸಂಕ್ರಮಣ ಜಾತ್ರೆ | ವಿವರ ಹೀಗಿದೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   

ಸಂಕ್ರಾಂತಿಯ ಸಂ‍ಭ್ರಮದ ನಡುವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಕುರಿತಾಗಿ ದೇವಾಲಯದ ಆಡಳಿತ ಮಂಡಳಿ ಜಾತ್ರೆಯ ವಿವರಗಳನ್ನು ನೀಡಿದೆ. 

ಜನವರಿ 14 ರಂದು ನಡೆಯಲಿರುವ ಮಕರ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ಸಾರಗನ ಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಾತ್ರೆಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಲಿದ್ದಾರೆ ಧರ್ಮಾಧಿಕಾರಿ ಎಸ್.ರಾಮಪ್ಪ ಮಾಹಿತಿ ನೀಡಿದ್ದಾರೆ.

ಪ್ರಾತಃಕಾಲ 4 ಗಂಟೆಗೆ ಮಹಾಭಿಷೇಕ, ಅಲಂಕಾರ ಪೂಜೆ, ಗೋಪೂಜೆ, ಗುರುಪೂಜೆ, ಬೆಳಿಗ್ಗೆ 8ರಿಂದ ಚಂಡಿಕಾ ಹವನ, ದೇವಿ ಮೂಲ ಸ್ಥಾನದಲ್ಲಿ ನವ ಚಂಡಿಕಾ ಹವನ ನಂತರ ಬೆಳಿಗ್ಗೆ 9 ರಿಂದ ಮೂಲ ಸ್ಥಾನದಿಂದ ಧರ್ಮಾಧಿಕಾರಿ ನೇತೃತ್ವದ ಪಲ್ಲಕ್ಕಿ ಉತ್ಸವ, ಜ್ಯೋತಿ ಮೆರವಣಿಗೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ. ಚಾಲನೆ ನೀಡಲಿದ್ದಾರೆ. 

ಅದೇ ದಿನ ವಿಶೇಷ ಆಹ್ವಾನಿತರಾಗಿ ಚಿಕ್ಕಬಳ್ಳಾಪುರದ ಪೋಲಿಸ್ ಉಪಾಧೀಕ್ಷಕ ವೀರೇಂದ್ರ ಕುಮಾರ್ ಪಿ. ಭಾಗವಹಿಸಲಿದ್ದಾರೆ. ಜಾತ್ರೆಯ ಪ್ರಯುಕ್ತ ಸಿಗಂದೂರು ಮೇಳದಿಂದ ರಾಗ ಚಂದ್ರಿಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜನವರಿ 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ರಾತ್ರಿ ದುರ್ಗಾದೀಪ ಪೂಜೆ, ರಂಗಪೂಜೆ, 8.30ರಿಂದ ಶಮಿತಾ ಮಲ್ನಾಡ್ ತಂಡದಿಂದ ‘ಸ್ವರ ಸಿಂಗಾರ‘ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

SUMMARY | Makar Sankramana Jatra Mahotsav will be held at Sigandur Chowdeshwari Temple from January 14th

KEY WORDS |Makar Sankramana Jatre, Sigandur Chowdeshwari Temple , 

Leave a Comment