ಶಿವಮೊಗ್ಗ ಮಹಾನಗರ ಪಾಲಿಕೆ ವಿರುದ್ಧ ಕೆಎಸ್‌ ಈಶ್ವರಪ್ಪ ಕೆಂಡಾಮಂಡಲ | ಕಾರಣವೇನು ಗೊತ್ತಾ?

This Article Written by / 13 / ನವೆಂಬರ್ 22, 2024

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024

ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರುದ್ಧ ಸಿಟ್ಟಾಗಿದ್ದಾರೆ. ಪಾಲಿಕೆಯ ಅವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು,. ಮಹಾನಗರ ಪಾಲಿಕೆಯಲ್ಲಿ 24+7 ನೀರಿನ ಸಮಸ್ಯೆ ತಲೆದೋರಿದೆ. 

ಹಳೆ ಪೈಪ್‌ನಲ್ಲಿ ನೀರು ಬಿಡುತ್ತಿಲ್ಲ. ಹೊಸ ಪೈಪ್‌ಗಳನ್ನು ಆಳವಡಿಸುವ ಕಾಮಗಾರಿ ಇನ್ನೂ ಮುಗಿಸಿಲ್ಲ. ಇದರಿಂದ ಸಾವಿರಾರು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು. 

ನಗರದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಪಾಲಿಕೆ ಕಣ್ಣು ಮುಚ್ಚಿ ಕುಳಿತಿದೆ. ತೆರಿಗೆ ದುಡ್ಡು ಏನಾಯಿತು? ಬೊಮ್ಮನಕಟ್ಟೆಯ ಆಶ್ರಯ ಮನೆಗಳಿಗೆ ಖಾತೆ ಮಾಡಿಕೊಡಲು ಸಾವಿರಾರು ರೂಪಾಯಿ ಲಂಚ ಕೇಳುತ್ತಿದ್ದಾರೆ. ಬಡವರು ಏನೂ ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು. 

ಅಲ್ಲದೆ ಮಹಾನಗರ ಪಾಲಿಕೆಯಲ್ಲಿ ಈ ಸ್ವತ್ತು ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಈ ವಿಚಾರ ಆಯುಕ್ತರಿಗೆ ಗೊತ್ತಿದೆಯೂ ಇಲ್ಲವೂ ಗೊತ್ತಿಲ್ಲ. ಅಧಿಕಾರಿಗಳು ದುಡ್ಡು ಹಂಚಿಕೊಂಡು ಆರಾಮಾಗಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. 

ಪಾಲಿಕೆ ಈ ಸಮಸ್ಯೆಗಳನ್ನ ಬಗೆಹರಿಸದಿದ್ದರೆ ಮುಂದಿನ ಸೋಮವಾರದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ. 

SUMMARY| Former Deputy CM KS Eshwarappa is angry with Shivamogga City Corporation

KEY WORDS |Former Deputy CM KS Eshwarappa, Shivamogga City Corporation

ಮುಂದಿನ ಸುದ್ದಿ ಒದಿ

Leave a Comment