ಬಿಎಸ್ವೈ, ಹೆಚ್ಡಿಕೆ, ಸಿದ್ದರಾಮಯ್ಯ ಎಲ್ಲರೂ ಕ್ಲೀನ್ ಚಿಟ್ ಪಡೆದು ನಂತರ ಮಾತನಾಡಲಿ-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹ

ಹಂಚಿಕೊಳ್ಳಿ
WhatsApp Facebook X Telegram

ಬಿಎಸ್ವೈ, ಹೆಚ್ಡಿಕೆ, ಸಿದ್ದರಾಮಯ್ಯ ಎಲ್ಲರೂ ಕ್ಲೀನ್ ಚಿಟ್ ಪಡೆದು ನಂತರ ಮಾತನಾಡಲಿ–ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹ

ಬಿಎಸ್ವೈ, ಹೆಚ್ಡಿಕೆ, ಸಿದ್ದರಾಮಯ್ಯ ಎಲ್ಲರೂ ಕ್ಲೀನ್ ಚಿಟ್ ಪಡೆದು ನಂತರ ಮಾತನಾಡಲಿ-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹ

ಶಿವಮೊಗ್ಗದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ,ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಳಸುವ ಭಾಷೆ ರಾಜ್ಯದ ಜನತೆಗೆ ಬೇಸರ ತಂದಿದೆ .ಮೂರು ಪಕ್ಷಗಳಿಗೂ ರಾಜಕಾರಣಿಗಳಿಗೂ ಇದು ಶೋಭೆ ತರುವುದಿಲ್ಲ.ಬಿಎಸ್ವೈ, ಹೆಚ್ಡಿಕೆ, ಸಿದ್ದರಾಮಯ್ಯ ಎಲ್ಲರಿಗೂ ಕ್ಲೀನ್ ಚಿಟ್ ಪಡೆದು ನಂತರ ಮಾತನಾಡಲಿ.ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮನವರಿಗೆ ಕ್ಲೀನ್ ಚಿಟ್ ಸಿಗಲಿ.ಸಿದ್ದಾಂತ, ಯೋಜನೆ, ಸಾರ್ವಜನಿಕ ವಿಷಯದಲ್ಲಿ ಟೀಕೆ ನಡೆಯುತ್ತಿತ್ತು ಇದೀಗ ವೈಯಕ್ತಿಕ ಟೀಕೆಗಳಿಗೆ ಇಳಿದಿದೆ.ರಾಜ್ಯದಲ್ಲಿ ಒಳ್ಳೆಯ ರಾಜಕಾರಣ ಮಾಡಲಿ ಎಂದು ಈಶ್ವರಪ್ಪ ಹೇಳಿದ್ದಾರೆ.

 

ಬಿಎಸ್ವೈ, ಹೆಚ್ಡಿಕೆ, ಸಿದ್ದರಾಮಯ್ಯ ಎಲ್ಲರೂ ಕ್ಲೀನ್ ಚಿಟ್ ಪಡೆದು ನಂತರ ಮಾತನಾಡಲಿ-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹ

ಬ್ರಿಗೆಡ್ ಬಗ್ಗೆ ಏನಂದ್ರು ?

ಬ್ರಿಗೇಡ್ ಬಗ್ಗೆ ಚರ್ಚೆ ಶುರುವಾಗಿದೆ .ಜಮಖಂಡಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಬ್ರಿಗೇಡ್ ಕಟ್ಟಬೇಕು ಎಂದು ಹೇಳಿದ್ದರು.ಯತ್ನಾಳ್ ಮತ್ತು ನಾನು ಇಬ್ಬರೂ ಸೇರಿ ರಾಯಣ್ಣ ಮತ್ತು ಚೆನ್ನಮ್ಮ ಹೆಸರುಗಳನ್ನು ಸೇರಿಸಿ ಬ್ರಿಗೇಡ್ ಮಾಡಲಿ ಎಂದು ಆಶೀರ್ವಾದ ಮಾಡಿದ್ದಾರೆ.ಅಕ್ಟೋಬರ್ 7 ರಂದು ಹುಬ್ಬಳ್ಳಿಯಲ್ಲಿ ಬ್ರಿಗೇಡ್ ಪೂರ್ವಭಾವಿ ಸಭೆ ನಡೆಸಲಿದ್ದೇವೆ ಎಂದು ಈಶ್ವರಪ್ಪ ಹೇಳಿದರು.ಹಿಂದುಳಿದ ವರ್ಗಗಳು, ದಲಿತ, ಬ್ರಾಹ್ಮಣ, ಎಲ್ಲಾ ಪಕ್ಷಗಳ ಮುಖಂಡರು, ಸಂಘಟನೆ ಸೇರಿ ಆರ್ ಸಿಬಿ ಎಂದು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮಾಡಲಿ ಎಂದು ಸ್ವಾಮೀಜಿ ಹೇಳಿದ್ದಾರೆ.ಅದೇ ಹೆಸರಿನ ನಾಮಕರಣ ಮಾಡಬೇಕಾ ಎಂದು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಈಶ್ವರಪ್ಪ ಹೇಳಿದರು

 

ಬಿಎಸ್ವೈ, ಹೆಚ್ಡಿಕೆ, ಸಿದ್ದರಾಮಯ್ಯ ಎಲ್ಲರೂ ಕ್ಲೀನ್ ಚಿಟ್ ಪಡೆದು ನಂತರ ಮಾತನಾಡಲಿ-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹ

ಜಾತಿ ಗಣತಿ ಬಗ್ಗೆ ಈಶ್ವರಪ್ಪ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ವರದಿ ಜಾರಿಗೆ ತರುವುದಾಗಿ ಹೇಳಿದ್ರು.ಮೂಡಾ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಜಾತಿ ಜನಗಣತಿ ವರದಿ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದ್ದೆ.ಇದೀಗ ಜಾತಿ ಜನಗಣತಿ ವರದಿ ಚರ್ಚೆ ನಡೆಸಿ ಅಂಗೀಕಾರ ಮಾಡುವುದಾಗಿ ಹೇಳಿದ್ದಾರೆ .ಕಾಂತರಾಜ್ ವರದಿ ಜಾರಿಗೆ ತಂದಿಲ್ಲ, ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಜಾತಿ ಜನಗಣತಿ ವರದಿ ನೀಡಿದ್ದಾರೆ.ಮುಂಬರುವ ಸಂಪುಟ ಸಭೆಯಲ್ಲಿ ವರದಿ ಇಟ್ಟು ಪಾಸ್ ಮಾಡಿ ನಂತರ ವಿಧಾನಮಂಡಲದಲ್ಲಿ ಪ್ರಸ್ತಾಪ ಮಾಡಿ, ಸಾರ್ವಜನಿಕರ ಮುಂದೆ ಇಡಿ ಚರ್ಚೆ ಆಗಲಿ. ಬ್ರಿಗೇಡ್ ಬಗ್ಗೆ ಚರ್ಚೆ ನಡೆಸಲು ಹುಬ್ಬಳ್ಳಿಯಲ್ಲಿ ಸಭೆಯಲ್ಲಿ ಮಾಜಿ ಶಾಸಕರು ಸೇರಿದಂತೆ ಸಾಧು ಸಂತರು ಸೇರಲಿದ್ದಾರೆ ಈ ಬ್ರಿಗೇಡ್ ಮೂಲಕ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇವೆ ಎಂದು ಈಶ್ವರಪ್ಪ ಹೇಳಿದರು.

 ದಿನೇಶ್ ಗುಂಡೂರಾವ್ ಬ್ಲಡ್ ವಿಚಿತ್ರವಾದದು. ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಪುಸ್ತಕ ಓದಿರಿ.ಗೋವು ಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆ ನೀಡಿ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ.ಈ ಮಣ್ಣಿನ ಗುಣಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ.

 ನನ್ನ ಆಕ್ಷೇಪವಿದೆ

ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಪ್ಪ ಮಕ್ಕಳ ಪಕ್ಷ, ಹೊಂದಾಣಿಕೆ ರಾಜಕಾರಣದ ಬಗ್ಗೆ ನನ್ನ ಅಕ್ಷೇಪ ಇದೆ.ಹೊಂದಾಣಿಕೆ ರಾಜಕಾರಣದ ಡಿಕೆಶಿ ಹೇಳಿಕೆ ನೀಡಿದ್ದಾರೆ.ವಿಜಯೇಂದ್ರ ನಿಂದ ನೀವೇನು ಪಡೆದುಕೊಂಡರು. ನಿಮ್ಮಿಂದ ವಿಜಯೇಂದ್ರ ಎನು ಪಡೆದುಕೊಂಡರು ಎಂದು ಬಹಿರಂಗ ಪಡಿಸಲಿ.ಪ್ರತಾಪ್ ಸಿಂಹ, ಸಿ ಟಿ ರವಿ, ಯತ್ನಾಳ್, ಶಶಿಕಲಾ ಜೊಲ್ಲೆ ಮೊದಲಾದವರಿಗೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ .ಶಿಗ್ಗಾವಿ ಉಪಚುನಾವಣೆಯಲ್ಲಿ ನಮ್ಮ ಕಡೆಯಿಂದ ಯಾರು ಸ್ಪರ್ಧೆ ಮಾಡಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor