ಅಡಿಕೆ ಗೋದಾಮಿನ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳ ರೇಡ್‌ | 23 ಕ್ವಿಂಟಾಲ್‌ ಅಡಿಕೆ ವಶ

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆ ಗೋದಾಮಿನ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳ ರೇಡ್‌ | 23 ಕ್ವಿಂಟಾಲ್‌ ಅಡಿಕೆ ವಶ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 26, 2025

ಖಾಸಗಿ ಗೋದಾಮಿನ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿರುವ ಘಟನೆ ಅರಹತೊಳಲು ಕೈಮರ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ

ತೆರಿಗೆ ಇಲಾಖೆ ಅಧಿಕಾರಿಗಳು ಅರಹತೊಳಲು ಕೈಮರ ಗ್ರಾಮದಲ್ಲಿರುವ ಖಾಸಗಿ ಗೋದಾಮಿನ ದಾಳಿ ನಡೆಸಿದ್ದಾರೆ.  ಈ ವೇಳೆ ಅಧಿಕಾರಿಗಳಿಗೆ ಗೋದಾಮಿನಲ್ಲಿ ದಾಖಲೆಗಳ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನಲೆ ಪೊಲೀಸರು ಸುಮಾರು 23 ಕ್ವಿಂಟಾಲ್‌ ಅಡಿಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  ಈ ಸಂಬಂಧ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮದು ರೈತರ ಮನೆಯಾಗಿರುವುದರಿಂದ ನಮ್ಮಲ್ಲಿ ಅಡಿಕೆಯನ್ನು ಇಟ್ಟುಕೊಳ್ಳಲು ಜಾಗವಿಲ್ಲ.ಆದ್ದರಿಂದ ಗೋದಾಮಿನಲ್ಲಿ ಇರಿಸಿದ್ದೇವೆ. ರೈತರ ಬೆಳೆಗಳೆಗೆ ತೆರಿಗೆ ಇಲ್ಲ ಎಂದ ಮೇಲೆ ನೀವು ಏಕೆ ಅಡಿಕೆಯನ್ನು ವಶಪಡಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

SUMMARY | Tax officials raided a private godown and seized arecanut worth lakhs of rupees at Kaimara village in Arahathollu.

KEYWORDS |  Tax officials,  Kaimara village, arecanut, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor