ಸಿಟಿರೌಂಡ್ಸ್‌ನಲ್ಲಿದ್ದ ಬಸ್‌ ಚಾಲಕ, ಮಾಲೀಕರಿಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ಶಾಕ್‌ | ಬಿತ್ತು ಫೈನ್‌

ಹಂಚಿಕೊಳ್ಳಿ
WhatsApp Facebook X Telegram
ಸಿಟಿರೌಂಡ್ಸ್‌ನಲ್ಲಿದ್ದ ಬಸ್‌ ಚಾಲಕ, ಮಾಲೀಕರಿಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ಶಾಕ್‌  | ಬಿತ್ತು ಫೈನ್‌

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 21, 2025 ‌‌ 

ಪುಟ್ಟ ಮಕ್ಕಳನ್ನು ಬೈಕ್‌ನಲ್ಲಿ ಕರದೊಯ್ಯುವಾಗ ಹೆಲ್ಮೆಟ್‌ ಬಳಸಿ ಎನ್ನುವ ಅಭಿಯಾನವನ್ನು ಆರಂಭಿಸಿರುವ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಇನ್ನೊಂದೆಡೆ ಇನ್ಸುರೆನ್ಸ್‌ ಇಲ್ಲದೆ ಬಸ್‌ ಓಡಿಸುತ್ತಿರುವುದನ್ನು ಪತ್ತೆ ಮಾಡಿ ನಾಲ್ಕುವರೆ ಸಾವಿರ ಫೈನ್‌ ಹಾಕಿದ್ದಾರೆ 

ದಿನಾಂಕ 19.2.2025 ರಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್ ಕೆ ಆರ್ ಎಸ್ ಐ, ಪ್ರವೀಣ್ ಪಾಟೀಲ್  ಹೆಚ್.ಸಿ, ಪ್ರಶಾಂತ್,  ಚಂದ್ರ ನಾಯಕ್,  ಶಿವಕುಮಾರ್, ಪಿ.ಸಿ. ವಾಹನ ತಪಾಸಣೆ ನಡೆಸ್ತಿದ್ದರು. 

ಈ ವೇಳೆ ಬಸ್‌ವೊಂದು ಇನ್ಸೂರೆನ್ಸ್ ಇಲ್ಲದೆ ಸಂಚರಿಸುತ್ತಿದ್ದನ್ನು ಸಿಬ್ಬಂದಿ ಕಂಡುಹಿಡಿದಿದ್ದಾರೆ. ಆ ಬಳಿಕ ಬಸ್‌ನ್ನು ತಡೆದು ಅದರಲ್ಲಿದ್ದ ಪ್ರಯಾಣಿಕರಿಗೆ ಇನ್ಸೂರೆನ್ಸ್ ಇಲ್ಲದ ವಾಹನ ಚಲಾಯಿಸುವುದು ಅಪರಾಧ ಎಂಬುದನ್ನು ಮತ್ತು ವಿಮೆ ಮಾಡಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳುವಳಿಕೆ ನೀಡಿದ್ದಾರೆ. ಬಳಿಕ ಬಸ್‌ ಮಾಲೀಕರಿಗೆ 4,500/-ರೂ.ಗಳ ದಂಡವನ್ನು ವಿಧಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

SUMMARY | shivamogga traffic police

KEY WORDS |  shivamogga traffic police

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor