SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 11, 2024
ಸಾಗರ | ಸೇವಾ ಸಾಗರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಅಭಿನಂದನ್ ಕೋಳಿವಾಡ ರೋವರ್ ರನ್ನು ಆವಿಷ್ಕರಿಸುವ ಮೂಲಕ ಉತ್ತಮ ಸಾಧನೆಮಾಡಿದ್ದಾರೆ. ಸಾಗರದ ರಮೇಶ್ ಕೋಳಿವಾಡ ಹಾಗೂ ಅನ್ನಪೂರ್ಣ ದಂಪತಿಯ ಮಗನಾಗಿರುವ ಅಭಿನಂದನ್ ಈ ಸಾಧನೆ ಮೂಲಕ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಮಂಗಳೂರಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಸೇವಾ ಸಾಗರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಅಭಿನಂದನ್ ಕೋಳಿವಾಡ ಭಾಗವಹಿಸಿದ್ದರು, ಆ ಸ್ಪರ್ಧೆಯಲ್ಲಿ ರೋವರ್ ಎಂಬ ವೈಜ್ಙಾನಿಕ ಆವಿಷ್ಕಾರವನ್ನು ಸಿದ್ದಪಡಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ, ಅಷ್ಟೇ ಅಲ್ಲದ ಜನವರಿಯಲ್ಲಿ ಪಾಂಡಿಚೆರಿಯಲ್ಲಿ ನಡೆಯುವ ದಕ್ಷಿಣ ಭಾರತ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಏನಿದು ರೋವರ್ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ.
ಅಭಿನಂದನ್ ನಿರ್ಮಾಣ ಮಾಡಿರುವ ರೋವರ್ ಆಕಾಶದ ತಾಪಮಾನ ಉಷ್ಣತೆ ವಾತಾವರಣದ ಸ್ಥಿತಿಗತಿ ಹೀಗೆ ವಾತಾವರಣದ ಇನ್ನಿತರೆ ಅಂಶಗಳನ್ನು ಪತ್ತೆಹಚ್ಚುತ್ತದೆ. ಅಷ್ಟೇ ಅಲ್ಲದೆ ಇದಕ್ಕೆ ಸೆನ್ಸರ್ ಅಳಡಿಸಲಾಗಿದ್ದು, ಇದು ಚಲಿಸುತ್ತಿರುವ ಸಂದರ್ಭದಲ್ಲಿಏನಾದರೂ ಅಡ್ಡಸಿಕ್ಕರೆ ಅದು ಪಥ ಬದಲಿಸಿ ಸ್ವಯಂ ಪ್ರೇರಿತವಾಗಿ ಚಲಿಸುತ್ತದೆ. ಈ ವೈಜ್ಞಾನಿಕ ಉಪಕರಣವನ್ನು ಸಿದ್ದಪಡಿಸಲು ಅಭಿನಂದನ್ ಗೆ ಅವರ ವಿಜ್ಞಾನ ಶಿಕ್ಷಕ ಚರಣ್ ರವರು ಮಾರ್ಗದರ್ಶನ ನೀಡಿದರು,
ಚಂದ್ರಯಾನದ ಸಂದರ್ಭದಲ್ಲಿ ಹೊಳೆದ ಐಡಿಯಾದಿಂದ ರೋವರ್ ತಯಾರಿಸಿದೆ | ಅಭಿನಂದನ್ ಕೊಳಿವಾಡ
ಚಂದ್ರಯಾನದ ಸಂದರ್ಭದಲ್ಲಿ ರೋವರ್ ಚಂದ್ರಗ್ರಹದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲೆಂದು ಕೇಳಿದ್ದೆ. ಒಂದು ದಿನ ನಾನು ವಿಜ್ಞಾನದ ಎಕ್ಸಿಬೀಷನ್ ಗೆ ಹೋದಾಗ ಅಲ್ಲಿನ ವಿಜ್ಞಾನಿಗಳು ಮುಂದೆ ಚಂದ್ರಯಾನ ಉಡಾವಣೆ ಸಂದರ್ಭದಲ್ಲಿ ಚಂದ್ರಗ್ರಹದಿಂದ ಕಲ್ಲನ್ನು ತರುವ ರೋವರ್‌ರನ್ನು ಸಿದ್ದಪಡಿಸುತ್ತೇವೆ ಎಂದು ಹೇಳಿದ್ದರು, ಆಗ ನಾನೂ ರೋವರ ಅನ್ನು ಸಿದ್ದ ಪಡಿಸಿದರೆ ಹೇಗೆ ಎಂಬ ಐಡಿಯಾ ಬಂತು ಹಾಗಾಗಿ ರೋವರ್ ಸಿದ್ದಪಡಿಸಿದೆ ಎಂದು ಅಭಿನಂದನ್ ತಿಳಿಸಿದ್ದಾರೆ.
SUMMARY | Abhinandan, an SSLC student of Seva Sagar English Medium High School, has done well by inventing Koliwada Rover.
KEYWORDS | | Abhinandan, Seva Sagar English Medium High School, Rover, kannadanews, sagara,