ಗಾಂಧಿ ಬಜಾರ್​ನಲ್ಲಿ ಕಾಣೆಯಾದ ಮಗು, 112 ಗೆ ಕರೆ ಮಾಡಿದ ತಾಯಿ!ERSS ಸಿಬ್ಬಂದಿ ಕಾರ್ಯಾಚರಣೆಯ ವಿವರ

ಹಂಚಿಕೊಳ್ಳಿ
WhatsApp Facebook X Telegram
ಗಾಂಧಿಬಜಾರ್‌ನಲ್ಲಿ ಮಗು ಕಾಣೆ; 112ಗೆ ಕರೆ ಮಾಡಿದ ತಾಯಿ, ಕ್ಷಿಪ್ರವಾಗಿ ಪತ್ತೆ ಮಾಡಿದ ಪೊಲೀಸರು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಗಾಂಧಿಬಜಾರ್‌ನ ಎಸ್.ಎನ್. ಸರ್ಕಲ್ ಸಮೀಪ ಮಗುವೊಂದು ಕಾಣೆಯಾಗಿದ್ದ ಪ್ರಕರಣವನ್ನ (Missing Child Traced)ERSS ಸಿಬ್ಬಂದಿ ತಮ್ಮದೇ ವಿಶೇಷ ಕಾರ್ಯಾಚರಣೆಯ ಮೂಲಕ ಸುಖಾಂತ್ಯಗೊಳಿಸಿದ್ದಾರೆ.

ನಡೆದ ಘಟನೆಯ ವಿವರವನ್ನು ಗಮನಿಸುವುದಾದರೆ, ತಾಯಿಯೊಬ್ಬರು ತಮ್ಮ ಮಗು ಕಾಣೆಯಾಗಿದೆ. ಹೇಗೆ ತಪ್ಪಿಸಿಕೊಂಡ ಎಂಬುದು ಗೊತ್ತಿಲ್ಲವೆಂದು ತುರ್ತು ಸಹಾಯವಾಣಿ 112ಗೆ ಮಾಹಿತಿ ನೀಡಿದದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ERSS-112 ಸಿಬ್ಬಂದಿ ಮಗುವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ತಾಯಿಗೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೋಟೆ ಪೊಲೀಸ್ ಠಾಣೆಯ ERSS-112 ಸಿಬ್ಬಂದಿ WHC ಜ್ಯೋತಿ ಹಾಗೂ ವಾಹನ ಚಾಲಕ ಚರಣ್ AHC ಪಾಲ್ಗೊಂಡಿದ್ದರು. ಮೊದಲು ವಿಷಯ ಗೃಹಿಸಿದ ಸಿಬ್ಬಂದಿ ಬಳಿಕ ಅಲ್ಲಿಯೇ ಗಾಂಧಿಬಜಾರ್ ಹಾಗೂ ಎಸ್.ಎನ್. ಸರ್ಕಲ್ ಸುತ್ತಮುತ್ತ ಹುಡುಕಾಟ ನಡೆಸಿದ್ರು. ಈ ವೇಳೆ ಮಗು ಪತ್ತೆಯಾಗಿದೆ. ಇನ್ನೂ ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಮಗುವನ್ನು ಪತ್ತೆ ಮಾಡಿದ ERSS ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor