SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಪ್ರಾಸಿಕ್ಯುಷನ್‌ಗೆ ಅನುಮತಿ ನೀಡಲು ನಿರಾಕರಿಸಿದ್ದ ಈ ಹಿಂದಿನ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಕೋರಿ ರಾಜ್ಯಪಾಲರಿಗೆ ಸರ್ಕಾರ ಪ್ರಸ್ತಾಪ ಕಳುಹಿಸಿದೆ. ಇತ್ತೀಚಿಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು 2020ರ ನವೆಂಬರ್ 19ರಂದು ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ದೂರು ಸಲ್ಲಿಸಿದ್ದರು. ಈ ಸಂಬಂಧ ಯಡಿಯೂರಪ್ಪ ಅವರ ವಿರುದ್ದ ಪ್ರಾಸಿಕ್ಯೂನಷ್‌ಗೆ ಅನುಮತಿ ನಿರಾಕರಿಸಿ 2021ರ ಜೂನ್ 24ರಂದು ರಾಜ್ಯಪಾಲರು ನಿರ್ಣಯ ಕೈಗೊಂಡಿದ್ದರು. ಇದೀಗ ಅಂದಿನ ದೂರನ್ನ ಆಧರಿಸಿ ಬಿಎಸ್‌ವೈ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸರ್ಕಾರ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ರವರನ್ನು ಸರ್ಕಾರ ಕೋರಿದೆ. ಯಡಿಯೂರಪ್ಪ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡುವಂತೆ ಕೋರಿರುವ ಸರ್ಕಾರದ ಶಿಫಾರಸ್ಸನ್ನು ರಾಜ್ಯಪಾಲರು ಸಮ್ಮತಿಸಿದರೆ, ಬಿಎಸ್‌ವೈ ವಿರುದ್ಧ ತನಿಖೆ ನಡೆಯುವ ಸಾಧ್ಯತೆ ಇದೆ.
SUMMARY | Karnataka Cabinet on Thursday recommended that Governor Thaawar Chand Gehlot review his decision to reject sanction for prosecution to investigate former chief minister B S Yediyurappa

KEY WORDS | Karnataka Cabinet, Governor Thaawar Chand Gehlot , sanction for prosecution to investigate former chief minister b s yediyurappa