SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕಡದಕಟ್ಟೆ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ (Railway Overbridge ) ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಮುಂದಿನ ವರ್ಷದ ಆರಂಭದಲ್ಲಿ ಸೇತುವೆ ಉದ್ಘಾಟನೆ ನಡೆಯಲಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.
ನಿನ್ನೆ ದಿನ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು, ರೈಲ್ವೆ ಮೇಲ್ಸೇತುವೆ ಕಾಅಮಗಾರಿ 2 ವರ್ಷದ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದೆ ಎಂದರು.

23 ಕೋಟಿ ರೂಪಾಯಿ ವೆಚ್ಚದ ಈ ಸೇತುವೆ ಕಾಮಗಾರಿ 2022 ರಲ್ಲಿ ಆರಂಭವಾಗಿತ್ತು. ಕಾಮಗಾರಿಗಾಗಿ ಭದ್ರಾವತಿ ಶಿವಮೊಗ್ಗ ನಡುವಿನ ರಸ್ತೆಯನ್ನ ಬಂದ್ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಒದಗಿಸಲಾಗಿತ್ತು. ಇದೀಗ ಸೇತುವೆ ಕಾಮಗಾರಿ ಪೂರ್ತಿಯಾಗುತ್ತಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
SUMMARY | work on the railway overbridge near Kadadakatte in Bhadravathi taluk of Shivamogga district is in the final stages and the bridge will be inaugurated early next year, mp BY Raghavendra said.
KEY WORDS |work on the railway overbridge near Kadadakatte , Bhadravathi taluk of Shivamogga district , Kadadakatte railway bridge will be inaugurated early next year, mp BY Raghavendra ,